ಕಾಗವಾಡ 09: ರಾಜ್ಯದ ಗಡಿಭಾಗದ ಮತಕ್ಷೇತ್ರವಾಗಿರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಗ್ರಾಮಗಳು ಅಭಿವೃದ್ಧಿಗೊಳಿಸಲು ಅದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಟುಂಬಗಳ ಅಭಿವೃದ್ಧಿಗಾಗಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹಾಗೂ ಇನ್ನೂಳಿದ ಇಲಾಖೆಯ ಸಚಿವರು, ಪಕ್ಷದ ಮುಖಂಡರು 120 ಕೋಟಿ ರೂ. ವಿಶೇಷ ಅನುದಾನ ಮಂಜೂರುಗೊಳಿಸಿದ್ದಾರೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕಾಗವಾಡದಲ್ಲಿ ಹೇಳಿದರು.
ಸೋಮವಾರ ದಿ. 7ರಂದು ಕಾಗವಾಡದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಕಾಗವಾಡ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಇಲ್ಲಿಯ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡದೆ ಇದಿದ್ದರಿಂದ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಗ್ರಾಮಗಳಲ್ಲಿಯ ರಸ್ತೆ ಆಭಿವೃದ್ಧಿ, ಚರಂಡಿ ನಿಮರ್ಾಣ ಮುಂತಾದ ಕಾಮಗಾರಿಗಳಿಗೆ ರಾಜ್ಯ ಸಕರ್ಾರ ಹೆಚ್ಚಿನ ಆದತ್ಯೆ ನೀಡಿ ಅನುದಾನ ಮಂಜೂರುಗೊಳಿಸಿದ್ದಾರೆ.
ರಸ್ತೆ ಅಭಿವೃದ್ಧಿಗಾಗಿ 58 ಕೋಟಿ ರೂ. ಅನುದಾನ:
ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ರಸ್ತೆ ಮತ್ತು ಜಿಲ್ಲೆಗಳ ಸಂಪಕರ್ಿಸುವ ರಸ್ತೆಯ ಅಭಿವೃದ್ಧಿಗಾಗಿ 58 ಕೋಟಿ ರೂ. ವಿಶೇಷ ಅನುದಾನ ಮಂಜೂರುಗೊಳಿಸಿದ್ದಾರೆ. ಅದರಲ್ಲಿ ಉಗಾರ-ಐನಾಪುರ 5 ಕೋಟಿ, ಉಗಾರ ಖುರ್ದ-ಉಗಾರ ಬುದ್ರುಕ 5 ಕೋಟಿ, ಶಿರಗುಪ್ಪಿ-ಮಂಗಾವತಿ 47.34 ಲಕ್ಷ, ಕವಲಗುಡ್ಡ-ಸಿದ್ಧೇವಾಡಿ, ಜಕ್ಕಾರಟ್ಟಿ-ಅರಳಿಹಟ್ಟಿ 1.12 ಕೋಟಿ, ಮುರಗುಂಡಿ-ಹನಮಾಪುರ-ಮದಭಾವಿ-ಬೊಮ್ನಾಳ ನಾಬಾಡ ಯೋಜನೆಯಡಿಯಲ್ಲಿ 1 ಕೋಟಿ, ಉಗಾರ ಖುರ್ದ ಪರಸಪ್ಪಾ ವೃತ್ತದಿಂದ ಕುಡಚಿ ರಸ್ತೆ ವರೆಗೆ 1.45 ಕೋಟಿ ಹೀಗೆ ಮಹತ್ವದ ರಸ್ತೆಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ಸಕರ್ಾರ ಮಂಜೂರುಗೊಳಿಸಿದೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮಾಜದ ಅಭಿವೃದ್ಧಿಗಾಗಿ 33 ಕೋಟಿ:
ಕಾಗವಾಡ ಕ್ಷೇತ್ರದಲ್ಲಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಎಷ್ಟು ಜಮೀನಯಿದೆ. ಅದರಲ್ಲಿಯ ಎಲ್ಲ ಭೂಮಿಗೆ ನೀರಾವರಿ ಯೋಜನೆ ಅಳವಡಿಸಿಕೊಳ್ಳಲು ರಾಜ್ಯ ಸಕರ್ಾರ 33 ಕೋಟಿ ರೂ. ವಿಶೇಷ ಅನುದಾನ ಮಂಜೂರುಗೊಳಿಸಿದೆ. ಬರುವ ದಿನಮಾನದಲ್ಲಿ ಕ್ಷೇತ್ರದಲ್ಲಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಟುಂಬಗಳ ಭೂಮಿಗೆ ನೀರು ಪೂರೈಸಿ ಬರಡ ಭೂಮಿಗಳು ಹಚ್ಚ ಹಸಿರು ಮಾಡುವುದು ನನ್ನ ಗುರಿಯಾಗಿದೆ. ಹಂತ ಹಂತವಾಗಿ ಸಮಾಜದ ಎಲ್ಲ ಸಮಸ್ಯೆ ಈಡೆಯರಿಸಲು ನಾನು ಸಿದ್ಧನಿದ್ದೇನೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.
1500 ಎಕರ ಕ್ಷೇತ್ರಕ್ಕೆ ನೀರಾವರಿ:
ಪರಿಶೀಷ್ಟ ಜಾತಿ ಪರಿಶಿಷ್ಟ ಪಂಗಡ ಕುಟುಂಬಗಳ ಒಟ್ಟು ಇರುವ ಭೂಮಿಗಳ ಪೈಕಿ ಮೊದಲನೆ ಹಂತದಲ್ಲಿ ಕೃಷ್ಣಾ ನದಿಯಿಂದ ನೀರಾವರಿ ಯೋಜನೆ ಮುಖಾಂತರ 1500 ಎಕರ ಭೂಮಿಗೆ ನೀರಾವರಿಗೆ ಅಳವಡಿಸಲಾಗುವುದು ಎಂದು ಶಾಸಕರು ಹೇಳಿದರು.
ಕಾಗವಾಡ ಕ್ಷೇತ್ರದ2 ಪಟ್ಟಣ ಪಂಚಾಯತಿ ಹಾಗೂ 1 ಪುರಸಭೆಗೆ 4 ಕೋಟಿ ರೂ. :
ಕಾಗವಾಡ ಕ್ಷೇತ್ರದಲ್ಲಿ ಗ್ರಾಮ ಪಂಚಾಯತಿಯಿಂದ ಮೇಲ್ದಜರ್ೆಕ್ಕೆ ಏರಿರುವ ಶೇಡಬಾಳ, ಐನಾಪುರ ಪಟ್ಟಣ ಪಂಚಾಯತಿ ಮತ್ತು ಉಗಾರ ಖುರ್ದ ಪುರಸಭೆಯ ವಾಡರ್್ಗಳಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ರಾಜ್ಯ ಸಕರ್ಾರ 4 ಕೋಟಿ ರೂ. ವಿಶೇಷ ಅನುದಾನ ಮಂಜೂರುಗೊಳಿಸಿದೆ.
8 ಕೋಟಿ ರೂ. ಗ್ರಾಮೀಣ ಅಭಿವೃದ್ಧಿಗಾಗಿ:
ಕಾಗವಾಡ ಕ್ಷೇತ್ರದ ಗ್ರಾಮ ಪಂಚಾಯತಿ ಒಳಗೊಂಡ ಗ್ರಾಮಗಳ ಅಭಿವೃದ್ಧಿಗಾಗಿ 8 ಕೋಟಿ ರೂ. ವಿಶೇಷ ಅನುದಾನ ರಾಜ್ಯ ಸಕರ್ಾರ ಮಂಜೂರುಗೊಳಿಸಿದೆ.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ:
ಕಾಗವಾಡ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ 'ಬಹುಗ್ರಾಮ' ಯೋಜನೆ ರೂಪಿಸಿದ್ದಾರೆ. ಈ ಯೋಜನೆ 20 ವರ್ಷಗಳ ಹಿಂದೆ ತೈಯಾರಿಸಿದ್ದು, ಆಗೀಣ ಜನಸಂಖ್ಯೆ ಅನುಗುಣವಾಗಿ ಯೋಜನೆ ಆಗಿತ್ತು. ಆಗ ಪ್ರತಿಯೊಬ್ಬರಿಗೆ 40 ಲೀಟರ್ ನೀರಿನ ಪೂರೈಸಲಾಗುತ್ತಿತ್ತು. ಭಾರತ ಸಕರ್ಾರದ ಆದೇಶದಂತೆ ಪ್ರತಿಯೊಬ್ಬರಿಗೆ 85 ಲೀಟರ್ ನೀರು ಪೂರೈಸಲು ಸೂಚನೆ ನೀಡಿದ್ದಾರೆ. ಇದನ್ನು ಆಧಾರಿಸಿ ಈಗೀಣ ಬಹುಗ್ರಾಮ ಯೋಜನೆಗಳು ಮೇಲ್ದಜರ್ೆಕ್ಕೆ ಏರಿಸಲು ಸಕರ್ಾರದಿಂದ ಮಂಜೂರಾತಿ ಪಡೆಯುತ್ತಿದ್ದೇವೆ ಎಂದು ಶಾಸಕರು ಹೇಳಿದರು.
ರೈತ ಮುಖಂಡ ದಾದಾ ಪಾಟೀಲ, ಕಾಗವಾಡ ಕಾಂಗ್ರೆಸ್ ಘಟಕ ಆಧ್ಯಕ್ಷ ವಿಜಯ ಅಕಿವಾಟೆ, ಜುಗೂಳ ಗ್ರಾಪಂ ಆಧ್ಯಕ್ಷ ಸಂಜಯ ಮಿಣಚೆ, ಸುಭಾಷ ಕಠಾರೆ, ಭರತೇಶ ಪಾಟೀಲ, ಸುಭಾಷ ಮೋನೆ, ಸುಧಾಕರ ಭಗತ, ಅಮೀರ ಶೇಖ, ಪ್ರಕಾಶ ಚೌಗುಲೆ, ಸೇರಿದಂತೆ ಅನೇಕರು ಇದ್ದರು.