1.20 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ

ಕಾಗವಾಡ, 20: ಕಾಗವಾಡ ವಿಧಾನಸಭಾ ಮತಕ್ಷೇತ್ರದ ಶಾಸಕಶ್ರೀಮಂತ ಪಾಟೀಲ ಇವರುವಿಶೇಷ ಪ್ರಯತ್ನಿಸಿ ಸನ್ 2018-19ನೇ ಸಾಲಿನ ಲೇಕ್ಕ ಶೀಷರ್ಿಕೆ 5054-04 ಜಿಲ್ಲಾ ಮತ್ತು ಇತರ ರಸ್ತೆಗಳ ಪರಿಶಿಷ್ಟ ಜಾತಿ(ಎಸ್.ಸಿ.ಪಿ) ಉಪಯೋಜನೆ ಅಡಿಯಲ್ಲಿ ಹನಮಾಪುರ, ತೇವರಟ್ಟಿ, ಕಲೋತಿ, ದೇವರಡ್ಡಿ ತೋಟ(ಮೋಳೆ) ಹೀಗೆ 1.20 ಕೋಟಿ ರೂ. ವೆಚ್ಚಗಳಲ್ಲಿ ರಸ್ತೆ ಕಾಮಗಾರಿಗೆ ಜಿಪಂ ಸದಸ್ಯ ಆರ್.ಎಂ.ಪಾಟೀಲ, ಮದಭಾವಿ ಬ್ಲಾಕ್ ಆಧ್ಯಕ್ಷ ಮಹಾದೇವ ಕೋರೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ರವಿವಾರ ರಂದು ಬೆಳಿಗ್ಗೆ ಮೋಳೆ ಗ್ರಾಮ ವ್ಯಾಪ್ತಿಯ ದೇವರಡ್ಡಿ ತೋಟದ ರಸ್ತೆ ಅಭಿವೃದ್ಧಿಗಾಗಿ 10 ಲಕ್ಷ ರೂ. ಅನುದಾನದಲ್ಲಿ ಮಂಜೂರುಗೊಂಡ ರಸ್ತೆಗೆ ಪೂಜೆ ಸಲ್ಲಿಸಿದರು. ಈ ವೇಳೆ ಆ ಗ್ರಾಮದ ಗ್ರಾಪಂ ಸದಸ್ಯರಾದ ಸಂದೀಪ ನಲವಡೆ, ಆದಪ್ಪಾ ಪಡನಾಡ, ಅಪ್ಪಾಸಾಹೇಬ ಮಳಮಳಸಿ, ಸಿದ್ಧಪ್ಪಾ ಪೂಜಾರಿ, ಗುತ್ತಿಗೆದಾರ ರಾಜು ಮರಡಿ ಪಾಲ್ಗೊಂಡಿದ್ದರು.

ಇದೇ ರೀತಿ ಹನಮಾಪುರ ಎಸ್.ಸಿ ಕಾಲೋನಿಗಳಲ್ಲಿರಸ್ತೆಗಳು ಡಾಂಬರಿಕರಣ ಮತ್ತು ಕೆಲ ರಸ್ತೆ ಸಿಮೆಂಟ್ ರಸ್ತೆ ನಿಮರ್ಾಣಗೊಳಿಸುವ ಕಾಮಗಾರಿಗೆ ಪೂಜೆ ಸಲ್ಲಿಸಲಾಗಿದೆ.

ಕಳೆದ ಅನೇಕ ವರ್ಷಗಳಿಂದ ಈ ಭಾಗದ ನಾಗರಿಕರು ರಸ್ತೆ ನಿಮರ್ಿಸಲು ಬೇಡಿಕೆ ಸಲ್ಲಿಸುತ್ತಿದ್ದರು. ಈ ಕಾಮಗಾರಿ ಶಾಸಕ ಶ್ರೀಮಂತ ಪಾಟೀಲ ಇವರ ವಿಶೇಷ ಪ್ರಯತ್ನದಿಂದ ಮಂಜೂರುಗೊಂಡಿದೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ತೇವರಟ್ಟಿ ಗ್ರಾಮದ ಸುರೇಶ ಪಾಟೀಲ, ಚನ್ನಪ್ಪಾ ಐಹೊಳೆ, ಮುರಗ್ಯಪ್ಪಾ ನಿಲಜಗಿ, ಸಿದ್ಧು ಘಟನಟ್ಟಿ, ಕುಮಾರ ಐಹೊಳೆ, ತುಕಾರಾಮ ದಳವಿ ಮುಂತಾದವರು ಮಾತನಾಡಿದರು.

ಲೋಕೊಪಯೋಗಿ ಅಥಣಿ ತಾಲೂಕಾ ಕಾರ್ಯನಿವರ್ಾಹಕ ಅಭಿಯಂತ ಎಂ.ಎಸ್.ವಡೆಯರ, ಎಂ.ಎನ್.ಮಗದುಮ್ಮ, ಎಸ್.ಆರ್.ಕರಿಬಸಪ್ಪಗೋಳ ಇವರ ಉಪಸ್ಥಿತಿಯಲ್ಲಿ ಪೂಜೆ ಸಲ್ಲಿಸಿದರು. ಅಧಿಕಾರಿಗಳು ಗುಣಮಟ್ಟದ ಕಾಮಗಾರಿಗಳು ನಿಮರ್ಿಸಲು ಗುತ್ತಿಗೆದಾರರಿಗೆ ಸಲಹೆ ನೀಡಿದರು.