ಲೋಕದರ್ಶನ ವರದಿ
ಕೊಪ್ಪಳ 07: ಲೋಕೋಪಯೋಗಿ ಇಲಾಖೆಯ ಅಪೆಂಡೆಕ್ಸ್ "ಇ" ಯೋಜನೆ ಅಡಿಯಲ್ಲಿ ದದೇಗಲ್, ಬೇಟಗೇರಿ, ಕವಲೂರು ಹಾಗೂ ಮುನಿರಾಬಾದ್ ಗ್ರಾಮಗಳಲ್ಲಿ ಅಂದಾಜು ಮೊತ್ತ 8 ಕೋಟಿ 40 ಲಕ್ಷದ ರಸ್ತೆ ಕಾಮಗಾರಿಗೆ ಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಅನನ್ಯ ಕೊಡುಗೆ ಕೊಡುವುದರಿಂದ ಕೇತ್ರವೂ ತೀರ್ವಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ನಗರ ಹಾಗೂ ಗ್ರಾಮಗಳಿಗೆ ಅತ್ಯವಶ್ಯಕ ಇರುವ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಕಲ್ಪಸಲಾಗುತ್ತಿದೆ. ಮುಖ್ಯವಾಗಿ ಶಿಕ್ಷಣ, ನೀರಾವರಿ, ಹಾಗೂ ಆರೋಗ್ಯ ವಲಯದಲ್ಲಿ ಹೆಚ್ಚಿನ ಅಭಿವೃದ್ಧಿಯು ಹೊಂದಿರುವುದು ಈ ನನ್ನ ಅಧಿಕಾರ ಅವಧಿಯ ಹೆಗ್ಗಳಿಯಾಗಿದೆ. ಕ್ಷೇತ್ರದ ಜನತೆಯು ಅಭಿವೃದ್ಧಿಗೆ ಕೈಜೋಡಿಸಿ ಜನಪರ ಕಾಳಜಿ ಉಳ್ಳ ನಾಯಕರನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.
ಮಾಜಿ ಜಿ.ಪಂ.ಅಧ್ಯಕ್ಷ ಹಾಲಿ ಸದಸ್ಯ ಎಸ್.ಬಿ.ನಾಗರಳ್ಳಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಮಾಜಿ ಕುಡಾ ಅಧ್ಯಕ್ಷ ಜುಲ್ಲು ಖಾದ್ರಿ, ತಾ.ಪಂ.ಸದಸ್ಯ ಡಾ. ಸಿದ್ದಲಿಂಗಸ್ವಾಮಿ ಇನಾಮದಾರ, ಮುಖಂಡರುಗಳಾದ ಭರಮಪ್ಪ ನಗರ,ಕೃಷ್ಣ ಇಟ್ಟಂಗಿ, ಗಾಳೆಪ್ಪ ಪೂಜಾರ, ಭರಮಪ್ಪ ಬೇಲ್ಲದ್, ಬಸವರಡ್ಡೆಪ್ಪ ಹಳ್ಳಿಕೇರಿ, ಶಂಕ್ರಪ್ಪ, ಅನ್ವರ ಗಡಾದ, ರವಿ ಮುನಿರಾಬಾದ್, ಚಾಂದಸಾಬ್, ಶೇರ್ ಖಾನ್,ರಾಮಮೂತರ್ಿ, ಅಡಿವೇಪ್ಪ ರಾಟಿ, ಮೈನುಸಾಬ್ ಮುಲ್ಲಾ, ನಗರಸಭೆ ಸದಸ್ಯ ಅಕ್ಬರಸಾಬ್ ಪಲ್ಟನ ಉಪಸ್ಥಿತರಿದ್ದರು.