ರೂ. 9ಕೋಟಿಯ ವಿವಿಧ ಕಾಮಗಾರಿಗಳ ಭೂಮಿ ಪೂಜೆ

ಲೋಕದರ್ಶನ ವರದಿ

ಕೊಪ್ಪಳ 20: ಗೊಂಡಬಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಚುಕ್ಕನಕಲ್, ಬಹದ್ದೂರಬಂಡಿ, ಹ್ಯಾಟಿ-ಮುಂಡರಗಿ, ಲಾಚನಕೇರಿ ಗ್ರಾಮಗಳಲ್ಲಿ ಸ್ನಾತಕೋತರ ಪದವಿ ಕೇಂದ್ರದ ಕಟ್ಟದ ಕಾಮಗಾರಿ ಗ್ರಂಥಾಲಯ, ಕುಡಿಯುವ ನೀರಿನ ಪೈಪಲೈನ್ ಕಾಮಗಾರಿ, ಸಿ.ಸಿ. ರಸ್ತೆ, ಚರಂಡಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ ಬಹುದಿನಗಳ ಬೇಡಿಕೆಯಾದ ಬಹದ್ದೂರಬಂಡಿ ಗ್ರಾಮಕ್ಕೆ 24*7 ಮಾದರಿಯಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಲಾಗುವುದು 7ವರ್ಷದ ಅವಧಿಯಲ್ಲಿ ಕ್ಷೇತ್ರದ ಪ್ರಮುಖ ಬೇಡಿಕೆಗಳ ಈಡೇರಿಕೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸುಮಾರು 3ಸಾವಿರ ಕೋಟಿಗಿಂತ ಹೆಚ್ಚು ಅನುದಾನ ಕ್ಷೇತ್ರಕ್ಕೆ ಬಿಡುಗಡೆಮಾಡಿಸಿದ್ದು, ಈ ನಲವತ್ತು ವರ್ಷಗಳಲ್ಲಿಯೇ ಇತಿಹಾಸವಾಗಿದೆ. ಸಿದ್ದರಾಮಯ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ 4 ಸಾವಿರ ಕೋಟಿಯ ಅನ್ನಭಾಗ್ಯ ಯೋಜನೆಯ 2 ಸಾವಿರ ಕೋಟಿ ಕಡಿತಗೊಳಿಸಲು ಬಿಜೆಪಿ ಸರ್ಕಾರ ಸನ್ನದ್ದವಾಗಿದೆ.

ನಗರದ ವೈದ್ಯಕೀಯ ಕಾಲೇಜ ಹತ್ತಿರ 116 ಕೋಟಿಯ ವೆಚ್ಚದ ಅನುದಾನದಡಿಯಲ್ಲಿ 1000 ಹಾಸಿಗೆಯ ಜಿಲ್ಲಾ ಆಸ್ಪತ್ರೆಯು ಬರದಿಂದ ಸಾಗಿದ್ದು, ಇದರಲ್ಲಿ 8 ಮಲ್ಟಿ ಸ್ಪೇಷಲ್ ಅಪರೇಷನ್ ಕೊಠಡಿಗಳು ವಿಶೇಷ ಹೊಂದಿದ್ದು ಜಿಲ್ಲೆಯ ಜನತೆ ಬೇರೆ ಊರುಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ ಇಲ್ಲಿಯೇ ಸಕಲ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಸಲಾಗುವುದು. ಬಹದ್ದೂರಬಂಡಿ ಗ್ರಾಮದ ಹತ್ತಿರ ರೂ. 12ಕೋಟಿಯ ವೆಚ್ಚದಲ್ಲಿ ಕೇಂದ್ರಿಯ ವಿದ್ಯಾಲಯ ಕಾಮಗಾರಿಯು ಪ್ರಾರಂಭಗೊಂಡಿದ್ದು ಈಗಾಗಲೇ ನಗರದ ಮಧ್ಯಭಾಗದಲ್ಲಿ ಇರುವ ತಾಲೂಕ ಕ್ರೀಡಾಂಗಣವು ಸುಸಜ್ಜಿತವಾಗಿ 3 ಕೋಟಿ ವೆಚ್ಚದಲ್ಲಿ ಕಾಮಗಾರಿಯು ಬರದಿಂದ ಸಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ಒಡ್ಡದೆ ಸಕರ್ಾರದ ಸೌಲಭ್ಯಗಳಿಗೆ ಎಲ್ಲರೂ ಕೈಜೊಡಿಸಬೇಕು ಅಭಿವೃದ್ಧಿ ಪರ ಇರುವ ನಾಯಕರನ್ನು ಆಶರ್ಿವದಿಸಿದಬೇಕೆಂದು ಜನರಲ್ಲಿ ಕೋರಿ. ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ವಿತರಿಸಿ ವಿದ್ಯಾಥರ್ಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ನಾಡಿಗೆ ಕೀರ್ತಿ  ತರಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷರು ಹಾಲಿಸದಸ್ಯರುಗಳಾದ ಎಸ್.ಬಿ.ನಾಗರಳ್ಳಿ, ಕೆ.ರಾಜಶೇಖರ ಹಿಟ್ನಾಳ, ಜಿ.ಪಂ ಸದಸ್ಯ ಗೂಳಪ್ಪ ಹಲಗೇರಿ, ಗ್ರಾ.ಪಂ ಅಧ್ಯಕ್ಷ ಹನುಮಂತಪ್ಪ ಚುಕನಕಲ್, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಕೆ.ಒ.ಎಫ್ ಅಧ್ಯಕ್ಷ ಸುರೇಶ ಮಾದಿನೂರ, ನಗರಸಭಾ ಸದಸ್ಯರುಗಳಾದ ಅಮಜದ ಪಟೇಲ, ಸಿದ್ದು ಮ್ಯಾಗೇರಿ, ಅಕ್ಬರ ಪಾಷಾ ಪಲ್ಟನ್, ಅಜೀಮ ಅತ್ತಾರ, ಮುಖಂಡರುಗಳಾದ ಕಾಟನ ಪಾಷಾ, ವಿರುಪಣ್ಣ ಕುಣಿಕೇರಿ, ಚಾಂದ ಪಾಷಾ ಕಿಲ್ಲೇದಾರ, ಸಲೀಂ ಅಳವಂಡಿ, ಪದವು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೆಂಕೋಬಪ್ಪ, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.


"