ಕೊಪ್ಪಳ 14: ಕೊಪ್ಪಳ ಜಿಲ್ಲಾ ಪಂಚಯತ್ ವ್ಯಾಪ್ತಿಯ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮ ಪಂಚಾಯತಿಯಲ್ಲಿ ಗ್ರಾಮೀಣ ಜನರಿಗೆ ಸ್ಥಳೀಯ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜ್ಗಾರ್ ದಿವಸ್ ಆಚರಿಸಿ ಪ್ರಮುಖ ಅಂಶಗಳ ಕುರಿತು ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಯಿತು.
ಜಿ.ಪಂ. ಜಿಲ್ಲಾ ಐ.ಇ.ಸಿ ಸಂಯೋಜಕ ಶ್ರೀನಿವಾಸ್ ಚಿತ್ರಗಾರ್ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಬಹುದಾದ ಸಮುದಾಯಧಾರಿತ ಮತ್ತು ವ್ಯಯಕ್ತಿಕ ಕಾಮಗಾರಿಗಳ ಕುರಿತು ಅರಿವು ಮೂಡಿಸಿ, ಗುಳೆ ಹೋಗದಂತೆ ತಡೆದು ಸ್ಥಳೀಯವಾಗಿ ಕೂಲಿಕಾರರಿಗೆ ಉದ್ಯೋಗ ನಿರ್ವಹಿಸಬೇಕು ಎಂದರು.
ಯಲಬುಗರ್ಾ ತಾ.ಪಂ. ಸಹಾಯಕ ನಿದರ್ೇಶಕ ಬಸವರಾಜ ಅವರು ಮಾತನಾಡಿ, ತಾಲೂಕಿನ ಕೂಲಿಕಾರರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಟಾನಗೊಳಿಸಲು ಕೂಲಿ ಬೇಡಿಕೆ ಪಡೆಯುವುದು ಮುಖ್ಯ ಉದ್ದೇಶವಾಗಿರುತ್ತದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಕೆಳಕಂಡ ಕ್ರಮಗಳನ್ನು ಯೋಜನೆಯ ಮಾರ್ಗಸೂಚಿಗಳನ್ವಯ ನಿಯಮಾನುಸಾರ ಗ್ರಾಮ ಪಂಚಾಯತ್ ಮುಖಾಂತರ ಕ್ರಮಕೈಗೊಳ್ಳುವುದು. ಅದರಂತೆ ಉದ್ಯೋಗ ಬೇಡಿಕೆ ಸೃಷ್ಟಿಸಿ ಕೂಲಿಕಾರರಿಗೆ ಉದ್ಯೋಗ ನೀಡುವುದು. ಕಾಯಕ ಸಂಘಗಳ ಮೂಲಕ ಕಾಯಕ ಬಂಧುಗಳಿಗೆ ವೈಯಕ್ತಿಕ ಕಾಮಗಾರಿಗಳ ಕುರಿತು ಅರಿವು ಮೂಡಿಸಿ ಕೂಲಿಕಾರರೊಂದಿಗೆ ಸಮನ್ವಯ ಸಾಧಿಸಿ ಉದ್ಯೋಗ ಒದಗಿಸುವುದು. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಟ 50 ವ್ಯಕ್ತಿಗತ ಕಾಮಗಾರಿಗಳನ್ನು ಪ್ರಗತಿಯಲ್ಲಿರುವುದು ಮತ್ತು ಪ್ರತಿ ಗ್ರಾಮದಲ್ಲಿ ಒಂದರಂತೆ ಸಮುದಾಯಧಾರಿತ ಕಾಮಗಾರಿಗಳನ್ನು ಚಾಲನೆಯಲ್ಲಿರುವುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಸಣ್ಣ ಅತೀ ಸಣ್ಣ ರೈತರಿಗೆ, ಭೂ ರಹಿತ ಕಾಮರ್ಿಕರಿಗೆ ಬಡತನ ರೇಖೆಗಿಂತ ಕೆಳಮಟ್ಟದವರು ಇತ್ಯಾದಿಯವರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗಿರುವ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಗಾಣದಾಳ ಗ್ರಾಮ ಪಂಚಾಯತ ಅಧ್ಯಕ್ಷರು/ಉಪಾಧ್ಯಕ್ಷರು, ಸದಸ್ಯರು ಮತ್ತು ಶ್ರೀ ಬಸವರಾಜ ಕಿಳ್ಳಿಕ್ಯಾತರ, ಪಂಚಾಯತ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ ಗಾಣದಾಳ, ಲಕ್ಷ್ಮಣ ತಾಲ್ಲೂಕ ಐ.ಇ.ಸಿ ಸಂಯೋಜಕರು, ಟಿ.ಸಿ ವಿಶ್ವನಾಥ, ಶ್ರೀ ಬಸವರಾಜ, ಟಿ.ಎಂ.ಐ.ಎಸ್ ತಾ.ಪಂ. ಯಲಬುಗರ್ಾ ರವರು ಮತ್ತು ಶರಣಬಸವ ಟಿ.ಎ ಮತ್ತು ಗ್ರಾ.ಪಂ ಸಿಬ್ಬಂದಿ/ ಕಾಯಕ ಬಂಧುಗಳು ಹಾಜರಿದ್ದರು.