ರೋಟರಿ ಕ್ಲಬ್ ವಾಕ್‌ಥಾನ್ ಸ್ಪರ್ಧೆ: ಪ್ರಶಾಂತ ಪ್ರಥಮ

Rotary Club Walkthon Competition: Prasanta First

ರೋಟರಿ ಕ್ಲಬ್ ವಾಕ್‌ಥಾನ್ ಸ್ಪರ್ಧೆ: ಪ್ರಶಾಂತ ಪ್ರಥಮ  

ಕಾರವಾರ 16: ಇಲ್ಲಿನ ರೋಟರಿ ಕ್ಲಬ್ (ಪಶ್ಚಿಮ) ರವರು ಸಂಘಟಿಸಿದ 10 ಕಿ.ಮಿ. ನಡಿಗೆಯ “ವಾಕ್‌ಥಾನ್‌” ಸ್ಪರ್ಧೆಯಲ್ಲಿ ಬಾಲಮಂದಿರ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ ಆರ್‌. ನಾಯ್ಕ ರವರು ಪ್ರಥಮ ಸ್ಥಾನ ಪಡೆದು, ರೂ. 6000 ನಗದು ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ. 

ಇವರ ಈ ಸಾಧನೆಗೆ ಕಾರವಾರ ಎಜ್ಯುಕೇಶನ್ ಸೊಸೈಟಿಯ ಆಡಳಿತ ಮಂಡಳಿಯವರು ಹಾಗೂ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅಂಜಲಿ ಎಸ್‌. ಮಾನೆ ಹಾಗೂ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.