ರೋಟಾ ವೈರಸ್ ಲಸಿಕೆ: ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳ ಕಾರ್ಯಗಾರ ಯಶಸ್ವಿ

ಕೊಪ್ಪಳ 22: ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ''ರೋಟಾ ವೈರಸ್ ಲಸಿಕೆ'' ಕುರಿತು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾದ ವೈದ್ಯಾಧಿಕಾರಿಗಳ ಕಾರ್ಯಗಾರ ಯಶಸ್ವಿಯಾಗಿ ಜರುಗಿತು.  

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಹಯೋಗದಲ್ಲಿ ''ರೋಟಾ ವೈರಸ್ ಲಸಿಕೆ'' ಕುರಿತು ಜಿಲ್ಲೆಯ ಎಲ್ಲಾ ಪ್ರಾ.ಆ.ಕೇಂದ್ರ, ಸ.ಆ.ಕೇಂದ್ರ, ನ.ಆ.ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳಿಗೆ ಶನಿವಾರದಂದು (ಜುಲೈ.20) ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.  

ರೋಟರಿ ಕ್ಲಬ್ ಅಧ್ಯಕ್ಷ ಡಾ. ಕೆ.ಜಿ ಕುಲಕಣರ್ಿ ರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಗಾರಕ್ಕೆ ಚಾಲನೆ ನೀಡಿದರು.  

ಬಳ್ಳಾರಿ ಎಸ್.ಎಂ.ಓ ಡಾ. ಶ್ರೀಧರ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಬರುವ ರೋಗಗಳಲ್ಲಿ ವಾಂತಿ-ಬೇಧಿ ಕೂಡ ಒಂದಾಗಿದೆ.  ಅತಿಸಾರ ಬೇಧಿಯಿಂದ ಮಕ್ಕಳ ಮರಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ರೋಟಾ ವೈರಸ್ ಲಸಿಕೆ ಎಂಬ ಹೊಸ ಲಸಿಕೆಯನ್ನು ಸಕರ್ಾರದಿಂದ ಜಾರಿಗೆಗೊಳಿಸಲಾಗಿದೆ.  ಹೀಗಾಗಲೇ ನಮ್ಮ ಭಾರತ ದೇಶದಲ್ಲಿ 11 ರಾಜ್ಯಗಳಲ್ಲಿ ಪ್ರಾರಂಭವಾಗಿದ್ದು ನಮ್ಮ ಕನರ್ಾಟಕದಲ್ಲಿ ಮುಂಬುರುವ ಆಗಸ್ಟ್-2019ರಲ್ಲಿ ಪ್ರಾರಂಭವಾಗಲಿದೆ.  ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಾರ ಈ ಲಸಿಕೆಯನ್ನು ಜಾರಿಗೆ ತಂದಿದ್ದು, ಕಾರ್ಯಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಳಹಂತದ ಕಾರ್ಯಕರ್ತರಿಗೂ ಇದರ ತರಬೇತಿ ನೀಡುವುದಾಗಿದೆ.  ಈ ಕಾರ್ಯಕ್ರಮಕ್ಕೆ ಇತರೇ ಇಲಾಖೆಗಳಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸಕರ್ಾರೆತರ ಸಂಘ ಸಂಸ್ಥೆಗಳು ಕೈಜೋಡಿಸಿ ಯಶಸ್ವಿಗೊಳಿಸುವಂತೆ ತಿಳಿಸಿದರು.  

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಲಿಂಗಾರಾಜ ಟಿ. ರವರು ಮಾತನಾಡಿ, ನಮ್ಮ ಕನರ್ಾಟಕ ರಾಜ್ಯದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಒಂದು ವಿನೂತನವಾದ ಲಸಿಕೆಯನ್ನು ಹೀಗಾಗಲೇ ನಮ್ಮ ದೇಶದ ಆಯ್ದ ರಾಜ್ಯಗಳಲ್ಲಿ ಈ ರೋಟಾ ವೈರಸ್ ಲಸಿಕೆಯನ್ನು ನಿರಂತರ ಲಸಿಕೆ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ.  ಇದು ಗಂಭೀರ ಸ್ವೂರಪದ ಬೇಧಿಯಿಂದ ಮಕ್ಕಳನ್ನು ರಕ್ಷಸಿಸುತ್ತದೆ.  ಈ ಲಸಿಕೆಯನ್ನು ಬಾಯಿ ಮೂಲಕ 3 ವರಸೆಗಳನ್ನ 6, 10 & 14ನೇ ವಾರಗಳಲ್ಲಿ ಮಕ್ಕಳಿಗೆ ನೀಡಲಾಗುತ್ತದೆ.  ಈ ಲಸಿಕೆಯನ್ನು ಸಿರಂಜ ಮೂಲಕ 2.5 ಎಂ.ಎಲ್ ಲಸಿಕೆಯನ್ನು ಪ್ರತಿ ವರಸೆಯಲ್ಲಿ ಮಗುವಿಗೆ ನೀಡಲಾಗುತ್ತದೆ. ಈ ತರಬೇತಿಯಲ್ಲಿ ಎಲ್ಲಾ ವೈದ್ಯರು ಸರಿಯಾಗಿ ಮಾಹಿತಿ ಪಡೆದುಕೊಂಡು ನಂತರ ತಾಲೂಕ ಹಂತದಲ್ಲಿ, ಪ್ರಾ.ಆ.ಕೇಂದ್ರ, ಸ.ಆ.ಕೇದ್ರಗಳ ಹಂತದಲ್ಲಿ ಎಲ್ಲಾ ಕಿರಿಯ ಆರೋಗ್ಯ ಸಹಾಯಕ, ಆಶಾ ಮತ್ತು ಅಂಗನವಾಡಿ ಕಾರ್ಯಕತರ್ೆಯರಿಗೆ ತರಬೇತಿ ನೀಡುವುದು ನಿಮ್ಮ ಜವಾಬ್ದಾರಿಯಾಗಿದೆ.  ಕಾರ್ಯಕ್ಷೇತ್ರದಲ್ಲಿ ರೋಟಾ ವೈರಸ್ ಲಸಿಕೆಯನ್ನು ಮಗುವಿಗೆ ಯಾವ ರೀತಿ ನೀಡಬೇಕು ಎಂಬುದರ ಬಗ್ಗೆ ಪ್ರಾತ್ಯಾಕ್ಷತೆ ಮಾಡಿ ತೋರಿಸಲಾಯಿತು. ಈ ನಿಯಮವನ್ನು ಎಲ್ಲರೂ ಪಾಲಿಸುವಂತೆ ವೈದ್ಯಾಧಿಕಾರಿಗಳು ಕ್ರಮ ವಹಿಸಬೇಕು ಎಂದರು. 

ಇರಕಲ್ಲಗಡ ಪ್ರಾ.ಆ.ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಪ್ರಮೋದ ಇವರು ಲಸಿಕೆಯನ್ನು ಯಾವ ರೀತಿ ಪ್ರಾ.ಆ.ಕೇಂದ್ರದಲ್ಲಿ ಸಂಗ್ರಹಿಸಿಬೇಕು ಅದರ ಗುಣಮಟ್ಟ, ದಾಸ್ತಾನು, ತಾಜ್ಯ ವಿಲೇವಾರಿ ಕುರಿತು ವಿವರವಾಗಿ ಬೋದಿಸಿದರು.  ತರಬೇತಿ ಪೂರ್ವ ಮತ್ತು ನಂತರ ಪರೀಕ್ಷೆ ನಡೆಸಲಾಯಿತು.  

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ ಎಸ್ ಯರಗಲ್ಲ,  ಜಿಲ್ಲಾ ಕುಷ್ಠರೋಗ ನಿಮರ್ೂಲನಾಧಿಕಾರಿ ಡಾ. ಎಸ್.ಕೆ ದೇಸಾಯಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಂಬಯ್ಯ ಬಿ, ಜಿಲ್ಲಾ ಆಯುಷ್ಯಾಧಿಕಾರಿ ಡಾ. ಬಸವರಾಜ ಕುಂಬಾರ, ವೈದ್ಯಕೀಯ ಕಾಲೇಜ ಡಾ, ಗುರುರಾಜ, ಐ.ಎಂ.ಎ ಅಧ್ಯಕ್ಷ ಡಾ. ಎಸ್.ಎಸ್ ಕಂಬಳಿಹಾಳ ಸೇರಿದಂತೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಹಿರಿಯ ಆರೋಗ್ಯ ಸಹಾಯಕರು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.