ಒಂಬತ್ತು ಸಾವಿರ ರನ್ ಸನಿಹದಲ್ಲಿ ರೋಹಿತ್

ಮುಂಬೈ.13:   ಭಾರತದ ಸೀಮಿತ ಓವರ್ಗಳ ಉಪನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆಮಂಗಳವಾರದಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ  ಸಾಧನೆ ಮಾಡಬಹುದು.

ಹಿಟ್ ಮ್ಯಾನ್ ಎಂದೇ ಜನಪ್ರಿಯವಾಗಿರುವ ರೋಹಿತ್ ತಮ್ಮ ಏಕದಿನ ವೃತ್ತಿಜೀವನದ 221 ಪಂದ್ಯಗಳಲ್ಲಿ 49.14 ಸರಾಸರಿಯಲ್ಲಿ 8944 ರನ್ ಗಳಿಸಿದ್ದಾರೆಮತ್ತು ಒಂಬತ್ತು ಸಾವಿರ ಆಗಲು ಅವರಿಗೆ ಕೇವಲ 56 ರನ್ ಗಳ ಅಗತ್ಯವಿದೆತಮ್ಮ ವೃತ್ತಿ ಜೀವನದಲ್ಲಿ 28 ಏಕದಿನ ಶತಕಗಳನ್ನು ಗಳಿಸಿರುವ ರೋಹಿತ್ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಐದು ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ರೋಹಿತ್  ಸಾಧನೆ ಮಾಡಿದರೆಏಕದಿನ ಕ್ರಿಕೆಟ್ನಲ್ಲಿ ಒಂಬತ್ತು ಸಾವಿರ ರನ್ ಕಲೆ ಹಾಕಿದ ವಿಶ್ವದ 20 ನೇ ಬ್ಯಾಟ್ಸ್ಮನ್ ಆಗಲಿದ್ದಾರೆ ಮೊದಲು ಭಾರತದ ಪರ ಮೊಹಮ್ಮದ್ ಅಜರುದ್ದೀನ್ (9378), ಮಹೇಂದ್ರ ಸಿಂಗ್ ಧೋನಿ (10,773), ರಾಹುಲ್ ದ್ರಾವಿಡ್ (10,889), ಸೌರಭ್ ಗಂಗೂಲಿ (11,363), ವಿರಾಟ್ ಕೊಹ್ಲಿ (11,609) ಮತ್ತು ಸಚಿನ್ ತೆಂಡೂಲ್ಕರ್ (18,426) ಮಾಡಿದ್ದಾರೆ.

 ಸರಣಿಯಲ್ಲಿಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 5000 ರನ್ ಗಳಿಸುವ ಸಾಧನೆ ಮಾಡಬಹುದುಏಕದಿನ ಪಂದ್ಯಗಳಲ್ಲಿ ಐದು ಸಾವಿರ ರನ್ ಸೇರಿಸಲು ಅವರಿಗೆ ಕೇವಲ 10 ರನ್ ಅವಶ್ಯಕತೆ ಇದೆ ಸಾಧನೆ ಮಾಡಿದಲ್ಲಿ ಆಸ್ಟ್ರೇಲಿಯಾದ ಪರ 5000 ರನ್ ಕಲೆ ಹಾಕಿದ ಅತಿ ವೇಗದ ಬ್ಯಾಟ್ಸ್ಮನ್ ಆಗಲಿದ್ದಾರೆ.

ಭಾರತದ ಚೈನಾಮಾನ್ ಬೌಲರ್ ಕುಲದೀಪ್ ಯಾದವ್ ಅವರಿಗೆ ಏಕದಿನ ಪಂದ್ಯಗಳಲ್ಲಿ ವಿಕೆಟ್ ಗಳ ಶತಕ ಬಾರಿಸಲು ಇನ್ನು ಒಂದು ವಿಕೆಟ್ ಅವಶ್ಯಕತೆ ಇದೆಕುಲದೀಪ್ 56 ಪಂದ್ಯಗಳಿಂದ 99 ವಿಕೆಟ್ ಪಡೆದಿದ್ದಾರೆ ಸಾಧನೆ ಮಾಡಿದ ಅವರು ಭಾರತದ 22 ನೇ ಬೌಲರ್ ಆಗಲಿದ್ದಾರೆಏಕದಿನ ಪಂದ್ಯಗಳಲ್ಲಿ ಶತಕದ ವಿಕೆಟ್ ಪಡೆಯಲು ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ಗೆ ನಾಲ್ಕು ವಿಕೆಟ್ ಅಗತ್ಯವಿದೆ.