ರೋಜರ್ಸ್ ಕಪ್ ಮಹಿಳಾ ಟೂರ್ನಿ ಮುಂದೂಡಿಕೆ

ಮಾಂಟ್ರೆಯಲ್, ಏ 12,ರೋಜರ್ಸ್ ಕಪ್ ಮಹಿಳಾ ವಿಭಾಗದ ಟೂರ್ನಿಯನ್ನು 2021ಕ್ಕೆ ಮುಂದೂಡಲಾಗಿದೆ ಎಂದು ಟೆನಿಸ್ ಕೆನಡಾ ಮತ್ತು ಮಹಿಳಾ ಟೆನಿಸ್ ಸಂಸ್ಥೆ (ಡಬ್ಲ್ಯುಟಿಎ) ತಿಳಿಸಿದೆ.ಆಗಸ್ಟ್ 7ರಿಂದ 16ರವರೆಗೆ ಮಾಂಟ್ರಿಯಲ್ ನಲ್ಲಿ ಈ ಟೂರ್ನಿ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಕ್ವಿಬೆಕ್ ಪ್ರಾಂತ್ಯ ಆಗಸ್ಟ್ 31ರವರೆಗೆ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಿದೆ.''2020ರ ಆಗಸ್ಟ್ 31ರವರೆಗೆ ಎಲ್ಲ ಕ್ರೀಡಾ ಚಟುವಟಿಕೆಗಳ ಮೇಲೆ ಕ್ವಿಬೆಕ್ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿಮಾಂಟ್ರಿಯಲ್ ನಲ್ಲಿ ನಡೆಯಬೇಕಿದ್ದ ರೋಜರ್ಸ್ ಕಪ್ ಟೂರ್ನಿ ಸಹ 2021ಕ್ಕೆ ಮುಂದೂಡಿಕೆಯಾಗಿದೆ,'' ಎಂದು ಡಬ್ಲ್ಯುಟಿಎ ತನ್ನ ಪ್ರಕಟಣೆಯಲ್ಲಿ ಶನಿವಾರ ತಿಳಿಸಿದೆ.ಜುಲೈ 12ರವರೆಗೆ ಡಬ್ಲ್ಯುಟಿಎಯ ಎಲ್ಲ ಟೂರ್ನಿಗಳನ್ನು ಪ್ರಸ್ತುತ ತಡೆಹಿಡಿಯಲಾಗಿದೆ.