ಟೋಕಿಯೊ, ಅ 15: ಮುಂದಿನ ವರ್ಷ ನಡೆಯುವ ಜಪಾನ್ನ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸ್ವಿಜರ್ ಲೆಂಡ್ ಟೆನಿಸ್ ಸ್ಟಾರ್ ಆಟಗಾರ ರೋಜರ್ ಫೆಡರರ್ ಅವರು ಭಾಗವಹಿಸಿಲಿದ್ದಾರೆ. 38ರ ಪ್ರಾಯದ ರೋಜರ್ ಫೆಡರರ್ ಅವರು ಈಗಾಗಲೇ ನಾಲ್ಕು ಒಲಿಂಪಿಕ್ಸ್ ಕ್ರೀಡಾಕೂಟಗಳನ್ನು ಮುಗಿಸಿದ್ದಾರೆ. 2000ರಲ್ಲಿ ನಡೆದಿದ್ದ ಸಿಡ್ನಿ ಒಲಿಂಪಿಕ್ಸ್ ಒಳಗಾಗಿ ಫೆಡರರ್ ಅವರು ನಾಲ್ಕು ಕ್ರೀಡಾಕೂಟಗಳನ್ನು ಮುಕ್ತಾಯಗೊಳಿಸಿದ್ದರು. 2008ರಲ್ಲಿ ಸ್ಟ್ಯಾನ್ ವಾವ್ರಿಂಕಾ ಅವರ ಜತೆ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ 2012ರಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು. ಗಾಯದಿಂದಾಗಿ 2016 ಒಲಿಂಪಿಕ್ಸ್ ನಲ್ಲಿ ಸ್ವಿಸ್ ಆಟಗಾರ ಭಾಗವಹಿಸಿರಲಿಲ್ಲ. ಟೋಕಿಯೊದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೋಜರ್ ಫೆಡರರ್ ಅವರು ಇಲ್ಲಿ ನಡೆಯುವ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವಂತೆ ನನ್ನ ಹೃದಯ ಪ್ರಚೇದಿಸುತ್ತಿದೆ. ಹಾಗಾಗಿ, ಮುಂದಿನ ವರ್ಷ ಒಲಿಂಪಿಕ್ಸ್ ನಲ್ಲಿ ಆಡಲಿದ್ದೇನೆ ಎಂದು ಸುದ್ದಿಗಾರರೊಂದಿಗೆ ಸ್ಪಷ್ಟಪಡಿಸಿದ್ದಾರೆ.