ಬ್ರಾಹ್ಮಣ ಸಮಾಜ ವತಿಯಿಂದ ಸಾರ್ವಜನಿಕ ಅಂಭಾಭವನಿ ಗೊಂದಲ ಕಾರ್ಯಕ್ರಮ

Gondal Programme

ಶಿಗ್ಗಾವಿ 11: ಪರಮಪೂಜ್ಯ ವಿಶ್ವನಾಥ ಚಕ್ರವತಿ ಆನಂದವನ ಅಗಡಿ ಶ್ರೀಗಳ ನೇತೃತ್ವದಲ್ಲಿ ತಾಲೂಕ ಬ್ರಾಹ್ಮಣ ಸಮಾಜ ವತಿಯಿಂದ ಸಾರ್ವಜನಿಕ ಅಂಭಾಭವನಿ ಗೊಂದಲ ಕಾರ್ಯಕ್ರಮ ಪಟ್ಟಣದ ಇಡಗುಂಜಿ ಗಣಪತಿ ದೇವಸ್ಥಾನದಲ್ಲಿ ಚಂಡಿಹೋಮ ಮತ್ತು ವಿಠೋಭಾ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಮತ್ತು ಲಲಿತ ಸಹಸ್ರನಾಮ, ಹೋಮ ಹವನಗಳು, ಮಹಾ ಮಂಗಳಾರತಿ ಅನ್ನಪ್ರಸಾದ ಜರುಗಿತು.

ಸಮಾಜದ ಹಿರಿಯ ಮುಖಂಡ ಭೋದಣ್ಣಾ ಬೆಳಗಲಿ ಮಾತನಾಡಿ ಪ್ರತಿ 3 ವರ್ಷಕ್ಕೊಮ್ಮೆ ಸಾರ್ವಜನಿಕ ಅಂಭಾಭವನಿ ಗೊಂದಲವನ್ನು ಮಾಡಿ ನಾಡಿನ ಸಕಲ ಜನತೆಗೆ ಒಳಿತಾಗಲಿ ಎನ್ನುವ ದೃಷ್ಟಿಯಿಂದ ಅಲ್ಲದೇ ಕಷ್ಟ ಕಾರ​‍್ಪಣಯಗಳಿಂದ ಮುಕ್ತಿ ಸಿಗಲು ಮತ್ತು ಬೇಗನೆ ಭಗವಂತನ ಮೊರೆಹೋಗಲು ಈ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ ಎಂದರು.ಮಹಾನಂದಿಗ್ರೀನ್ ಹಾಲೂ ಒಕ್ಕೂಟದ ನಿರ್ದೇಶಕ ರಾಘವೇಂದ್ರ ದೇಶಪಾಂಡೆ ಮಾತನಾಡಿ ಸಮಾಜದಲ್ಲಿರುವ ಬಡ ಕುಟುಂಬದವರನ್ನು ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ಇಂತಹ ವಿಶೇಷ ಚಂಡಿಹೋಮ ಹಾಗೂ ಕುಂಕುಮಾರ್ಚನೆ ಮಾಡಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶವಾಗಿದೆ ಎಂದರು.

ತಮ್ಮಣ್ಣ ಜೋಶಿ, ಮೋಹನ ದೇಶಪಾಂಡೆ, ಅರವಿಂದ ಮುಳಗುಂದ, ಪ್ರಕಾಶ ಕುಲಕರ್ಣಿ, ದಿವಾಕರ ದೀಕ್ಷಿತ, ಶ್ರೀಕಾಂತ ಪೋತದಾರ,ಪವನ ಚಿಮ್ಮಲಗಿ, ಪ್ರಕಾಶ ಪೂಜಾರ, ಶ್ರೀಪಾದ ಸಂಕಣ್ಣವರ, ಗೋವಿಂದ ಕುಲಕರ್ಣಿ, ಕೃಷ್ಣಾ ಕುಲಕರ್ಣಿ, ರಾಜಾರಾಮ ಸಂಕಣ್ಣವರ, ಭೀಮಣ್ಣಾ ಕುಲಕರ್ಣಿ, ಸೀನಪ್ಪ ದೇಶಪಾಂಡೆ, ವೆಂಕಟಾಚಲ ಗುಡಿ, ನಯನಕುಮಾರ ಕುಲಕರ್ಣಿ, ಪ್ರಭಾ ಕುಲಕರ್ಣಿ, ಶ್ರೀದೇವಿ ಜೋಶಿ, ಮಾಲತಿ ಜೋಶಿ, ಸಂದ್ಯಾ ಬೆಳಗಲಿ, ಶ್ರಾವಣಿ ಚಿಮ್ಮಲಗಿ, ಸಹನಾ ಕೋಳಿವಾಡ, ದೀಪಾ ಕುಲಕರ್ಣಿ, ಸುನೀತಾ ದೇಶಪಾಂಡೆ, ರಮಾ ದೇಶಪಾಂಡೆ, ಶಾರದಾಬಾಯಿ ಕುಲಕರ್ಣಿ, ಅಶ್ವಿನಿ ಮುಳಗುಂದ, ಸಹನಾ ಸಂಕಣ್ಣವರ, ಸುಷ್ಮಾ ಕುಲಕರ್ಣಿ ಸೇರಿದಂತೆ ಸಮಾಜದ ಸದ್ಬಕ್ತರು ಉಪಸ್ಥಿತರಿದ್ದರು.