ರಾಕಿಂಗ್ ಸ್ಟಾರ್ ಯಶ್ ಜನ್ಮದಿನ : 5 ಸಾವಿರ ಕೆಜಿ ತೂಕದ ಕೇಕ್
ರಾಕಿಂಗ್ ಸ್ಟಾರ್ ಯಶ್ ಜನ್ಮದಿನ : 5 ಸಾವಿರ ಕೆಜಿ ತೂಕದ ಕೇಕ್ Rocking Star Yash Birthday: Cake weighing 5 thousand kg
Lokadrshan Daily
12/26/24, 2:04 AM ಪ್ರಕಟಿಸಲಾಗಿದೆ
ಬೆಂಗಳೂರು, ಜ 08,ಇಂದು ರಾಕಿಂಗ್ ಸ್ಟಾರ್ ಜನ್ಮದಿನ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಗ್ರ್ಯಾಂಡ್ ಆಗಿ, ವಿಭಿನ್ನವಾಗಿ ಆಚರಿಸುತ್ತಿದ್ದಾರೆ ಯಶ್ ಹುಟ್ಟುಹಬ್ಬದ ಪ್ರಯುಕ್ತ 'ಕೆ.ಜಿ.ಎಫ್' ಸೆಕೆಂಡ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು, ದಾಖಲೆ ಎತ್ತರದ ಕಟೌಟ್ ನಿಲ್ಲಿಸಲಾಗಿದೆ. ಅಷ್ಟೇ ಅಲ್ಲ, 5ಸಾವಿರ ಕೆಜಿ ತೂಕದ ಕೇಕ್ ತಯಾರು ಮಾಡಲಾಗಿದೆ. ಕೇಕ್ ತಯಾರಿಸಿದ ಪತ್ನಿ, ಪುತ್ರಿ ಅಭಿಮಾನಿಗಳ ಸಂಭ್ರಮ ಒಂದೆಡೆಯಾದರೆ, ಯಶ್ ಪತ್ನಿ ರಾಧಿಕಾ ಹಾಗೂ ಕ್ಯೂಟ್ ಪುಟಾಣಿ ಪುತ್ರಿ ಐರಾ ಯಶ್ ಗೆ ಸರ್ಪ್ರೈಸ್ ಕೊಡುವ ಕೇಕ್ ತಯಾರಿಸಿದ್ದಾರೆ. ಯಶ್ ಬರ್ತಡೇ ಗಾಗಿ ಪ್ರತಿ ವರ್ಷ ಮನೆಯಲ್ಲಿ ಕೇಕ್ ಬೇಕ್ ಮಾಡುತ್ತಿದ್ದ ರಾಧಿಕಾ ಪಂಡಿತ್ ಈ ವರ್ಷ ಕೂಡ ಕೇಕ್ ಮಾಡಿದ್ದಾರೆ. ಆದರೆ ಅವರಿಗೆ ಸಹಾಯ ಮಾಡಿರೋದು ಯಾರು ಗೊತ್ತಾ? ಪುತ್ರಿ ಐರಾ ತಾಯಿ ರಾಧಿಕಾ ಪಂಡಿತ್ ಕೇಕ್ ಮಾಡುವಾಗ, ಸಹಾಯ ಮಾಡಿದ್ದಕ್ಕಿಂತ ಚಾಕಲೇಟ್ ಸಿರಪ್, ಕ್ರೀಮ್ ನೆಲ್ಲಾ ಆಯ್ರಾ ತಿಂದಿದ್ದೇ ಹೆಚ್ಚು. ''ಆದರೂ ಆಕೆಯ ಪ್ರಯತ್ನವನ್ನಮೆಚ್ಚಲೇಬೇಕು'' ಎಂದು ಖುಷಿ ಪಟ್ಟಿದ್ದಾರೆ ರಾಧಿಕಾ ಪಂಡಿತ್. 'ಎ ವೆರಿ ಹ್ಯಾಪಿ ಬರ್ತಡೇ. ಹ್ಯಾಪಿ ಬರ್ತಡೇ ಟು ಡಾಡಾ'' ಅಂತ ರಾಧಿಕಾ ಪಂಡಿತ್ ಹೇಳಿದರೆ, ಐರಾ''ಡಾಡಾ'' ಅಂತ ಮುದ್ದು ಮುದ್ದಾಗಿ ಆಗಿ ಹೇಳಿ ಅಪ್ಪನಿಗೆ ವಿಶ್ ಮಾಡಿದ್ದಾಳೆ. ಅದಾಗಲೇ ಕೇಕ್ ನ ಆಯ್ರಾ ತಿನ್ನುತ್ತಿದ್ದರಿಂದ, ''ನಿಮಗೆ (ಯಶ್) ಕೇಕ್ ಸಿಗುತ್ತೋ, ಇಲ್ವೋ ಗೊತ್ತಿಲ್ಲ. ಆದರೂ ಪ್ರೀತಿಯಿಂದ ಮಾಡಿರೋದಕ್ಕೆ ಒಂದು ಸ್ಮಾಲ್ ಪೀಸ್ ಎತ್ತಿಟ್ಟಿರುವೆ, ನಿಮಗೋಸ್ಕರ'' ಎಂದಿದ್ದಾರೆ ರಾಧಿಕಾ ಪಂಡಿತ್. ಯಶ್ ಜನ್ಮದಿನದ ಪ್ರಯುಕ್ತ ರಾಧಿಕಾ ಪಂಡಿತ್ ಮತ್ತು ಪುತ್ರಿ ಆಯ್ರಾ ಕೇಕ್ ತಯಾರು ಮಾಡುತ್ತಿದ್ದ ವಿಡಿಯೋನ ಖುದ್ದು ಯಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.-:ರಿಷಬ್ ಶೆಟ್ಟಿ ಹಾರೈಕೆ:-ಖ್ಯಾತ ನಟ ರಿಷಬ್ ಶೆಟ್ಟಿ ಅವರು 'ರುದ್ರ ಪ್ರಯಾನಗ' ಚಿತ್ರತಂಡದ ಪರವಾಗಿ ನಟ ಯಶ್ಗೆ ಶುಭ ಕೋರಿದ್ದಾರೆ. "ಕನ್ನಡದ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟಕ್ಕೆ ಹಾರೈಸಿದ ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಕೆಜಿಎಫ್ 2 ನಮ್ಮ ದೇಶದ ಹೆಮ್ಮೆಯ ಚಿತ್ರವಾಗಲಿ" ಎಂದು ಟ್ವೀಟ್ ಮಾಡಿದ್ದಾರೆ.