ರೈಲ್ವೆ ಸಚಿವರ ಮನೆಯಲ್ಲಿ ಕಳವು, ನೇಪಾಳದ ಮೂಲದ ವ್ಯಕ್ತಿ ಸೆರೆ

ಮುಂಬೈ,ಅ 4:   ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ಮುಂಬೈ ಮನೆಯಿಂದ 35 ಸಾವಿರ ರೂಪಾಯಿ ಮೌಲ್ಯದ ನಗದು, ಬೆಳ್ಳಿ ಆಭರಣ ಸಾಮಗ್ರಿಗಳು, ಮೊಬೈಲ್ ಫೋನ್ ಮತ್ತು ಇತರೆ ವಸ್ತಗಳು ಕಳುವಾಗಿರುವ ಸಂಗತಿ ತಡವಾಗಿ ಬಯಲಾಗಿದೆ. ಮುಂಬೈನ ನಿಪೇಲ್ ಸೀ ರೋಡ್ ಬಂಗ್ಲೆ ವಿಲ್ಲಾ ಆಬರ್ಿಟ್ನಲ್ಲಿ ಕಳೆದ ತಿಂಗಳು ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮನೆ ಕೆಲಸಗಾರ ನೇಪಾಳ  ಮೂಲದ  ವಿಶ್ವಕರ್ಮ ಎಂಬಾತನನ್ನು ಬಂಧಿಸಿದ್ದಾರೆ.    ಕಳ್ಳತನದ ಶಂಕೆ ಮೇಲೆ ಈತನನ್ನು ಬಂಧಿಸಲಾಗಿದೆ. ಆದರೆ ಎಲ್ಲ ಕಳ್ಳತನದ ಆರೋಪಗಳನ್ನು ಆತ ನಿರಾಕರಿಸಿದ್ದಾನೆ. ಕಳ್ಳತನ ನಡೆದ ಅವಧಿಯಲ್ಲಿ ತಾನು ಊರಿನಲ್ಲಿ ಇರಲಿಲ್ಲ ಸಂಬಂಧಿಕರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದೆ  ಎಂದು ಆತ ಸ್ಪಷ್ಟಪಡಿಸಿದ್ದು, ಪೊಲೀಸರು ಆತನಿಂದ ಐದು ಮೊಬೈಲ್ ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.