ಬಳ್ಳಾರಿ, ಏ.04: ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರ ಹೋರಾಟ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ರಾಬಕೋ) 10 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ ಎಂದು ರಾಬಕೋ ಅಧ್ಯಕ್ಷರು ಹಾಗೂ ಶಾಸಕರಾದ ಭೀಮಾನಾಯ್ಕ ಅವರು ತಿಳಿಸಿದ್ದಾರೆ.
ಸಭಾರತವು ಸೇರಿದಂತೆ ವಿಶ್ವದಾದ್ಯಂತ ಮಹಾಮಾರಿಯಾಗಿ ಹಬ್ಬುತ್ತಿರುವ ಕರೋನ (ಕೊವಿಡ್-19) ದ ಹರಡುವಿಕೆಯನ್ನು ತಡೆಗಟ್ಟಲು ಕನರ್ಾಟಕ ರಾಜ್ಯ ಸಕರ್ಾರ ಮತ್ತು ಕೇಂದ್ರ ಸಕರ್ಾರಗಳು ನಿರಂತರ ಹೋರಾಟ ನಡೆಸುತ್ತಿರುವುದು ಸರಿಯಷ್ಟೆ. ಈ ಸೋಂಕಿನ ಪರಿಣಾಮದಿಂದಾಗಿ ಕನರ್ಾಟಕ ಮತ್ತು ದೇಶ ಆಥರ್ಿಕ ತುತರ್ು ಪರಿಸ್ಥಿತಿಯಲ್ಲಿದ್ದು, ನಾಡ ನಾಗರಿಕರ ಜೀವ ರಕ್ಷಣೆಗಾಗಿ ಕೊವಿಡ್-19 (ಕರೋನ ವೈರಸ್) ತಡೆಗಟ್ಟುವ ನಿಟ್ಟಿನಲ್ಲಿ ಸಕರ್ಾರದ ಜೊತೆ ಸಹಕಾರಿ ಕ್ಷೇತ್ರವು ಕೂಡ ಕೈ ಜೋಡಿಸುವುದು ಹೊಣೆಗಾರಿಕೆಯಾಗಿರುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಆಥರ್ಿಕವಾಗಿ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಅರಿತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ಜಮಾ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರೋನಾ ವೈರಸ್ ಮಹಾಮಾರಿಯಾಗಿದ್ದು ಸ್ವಯಂ ಜಾಗೃತಿಯಿಂದ ಸಕರ್ಾರದ ಜೊತೆ ಕೈ ಜೋಡಿಸುವ 7 ಮುಖಾಂತರ ಮೆಡಿಕಲ್ ಕಿಟ್ಗಳು, ಲ್ಯಾಬ್ಗೆ ಅಗತ್ಯ ಸಾಮಾಗ್ರಿಯುಳ್ಳ ಔಷಧೋಪಚಾರಕ್ಕೆ ಹಾಗೂ ಸ್ಯಾನಿಟೈಸರ್ ಇನ್ನೂ ಮುಂತಾದ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ನಾವೆಲ್ಲರೂ ಆಥರ್ಿಕವಾಗಿ ಸಕರ್ಾರಕ್ಕೆ ನೆರವಾಗುವ ದೃಷ್ಟಿಯಿಂದ ರಾಬಕೋ ಧಮರ್ಾರ್ಥ ನಿಧಿಯಿಂದ 7,41,587 ರೂ.ಒಕ್ಕೂಟದ ಅಧಿಕಾರಿ ಮತ್ತು ಸಿಬ್ಬಂದಿಗಳ ಒಂದು ದಿನದ ವೇತನ 2,20,373, ಒಕ್ಕೂಟದ ಆಡಳಿತ ಮಂಡಳದ ನಿದರ್ೇಶಕರ ಪ್ರವಾಸ ಭತ್ಯೆ ಹಾಗೂ ದಿನ ಭತ್ಯೆ 38,040 ರೂ. ಸೇರಿದಂತೆ ಒಟ್ಟು 10ಲಕ್ಷ ರೂ.ಗಳ ಆಥರ್ಿಕ ನೆರವು ನೀಡಲು ನಿರ್ಧರಿಸಲಾಗಿದೆ.
10 ಲಕ್ಷ ರೂ.ಗಳ ಚೆಕ್ ಅನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ