ಚಾಲಕರ, ಪ್ರಯಾಣಿಕರ ಸುರಕ್ಷತೆಗಾಗಿ ರಸ್ತೆ ನಿಯಮ ಪಾಲಿಸಿ


ಗದಗ ೧೬: ವಾಹನ ಚಾಲಕರ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಮೊಟಾರು ವಾಹನಗಳ ಕಾಯ್ದೆಯನ್ನು ರೂಪಿಸಲಾಗಿದ್ದು ಚಾಲನಾ ನಿಯಮಗಳನ್ನು ಹಾಗೂ ಸುರಕ್ಷಿತ ಕ್ರಮಗಳನ್ನು ಸ್ವಯಂ ಪ್ರೇರಣೆಯಿಂದ ಕಟ್ಟುನಿಟ್ಟಾಗಿ ಪಾಲಿಸಲು ಗದಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಕುಮಾರಿ ವಿನಯ ಕಟೋಕರ್ ಮನವಿ ಮಾಡಿದರು.

     ಸಾರಿಗೆ ಆಯುಕ್ತಾಲಯ ಹಾಗೂ ಗದಗ ಜಿಲ್ಲಾಡಳಿತ ನಿರ್ದೇಶನದಂತೆ ಗದಗ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಎರ್ಪಡಿಸಿದ 31 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗದಗ ಜಿಲ್ಲೆಯಾದ್ಯಂತ ವಾಹನಗಳ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಮಹತ್ವವನ್ನು ತಿಳಿಸಲು ವಿವಿಧ ರಸ್ತೆ ಸುರಕ್ಷತಾ ಜಾಗ್ರತ ಕಾರ್ಯಕ್ರಮಗಳನ್ನು ಜನೇವರಿ 19ರವರೆಗೆ ರವರೆಗೆ  ಹಮ್ಮಿಕೊಳ್ಳಲಾಗಿದೆ. ರಸ್ತೆ ನಿಯಮಗಳ ಪಾಲನೆಯನ್ನು ಮಾಡುವದರಿಂದ ಬಹುತೇಕ ರಸ್ತೆ ಅಪಘಾತಗಳನ್ನು ತಡೆಯಬಹುದಾಗಿದ್ದು ಪ್ರತಿಯೊಬ್ಬರೂ ರಸ್ತೆ ನಿಯಮಗಳ ಕುರಿತು ತಿಳಿದಿರುವುದು ಅವಶ್ಯಕವಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ನುಡಿದರು.      

     ಕಾರ್ಯಕ್ರಮದಲ್ಲಿ ವಾಹನ ಚಾಲಕರಿಗೆ, ಸಾರ್ವಜನಿಕರನ್ನು ಹಾಗೂ ಚಾಲನಾ ಲ್ಯೆಸನ್ಸಪಡೆಯುವ ಅಭ್ಯರ್ಥಿಗಳಿಗೆ ರಸ್ತೆ ಸುರಕ್ಷತಾ ಅರಿವು ಹಾಗೂ ಸುರಕ್ಷತೆ ಕ್ರಮ ಅನುಸರಿಸುವ ಕುರಿತು ಕಛೇರಿಯ ಮೋಟಾರು ವಾಹನ ನಿರೀಕ್ಷರು, ಸಿಬ್ಬಂದಿ ತಿಳಿವಳಿಕೆ ನೀಡಿದರು.