ರಾಮ್ ಪುರ ಫೆ 26: ಉತ್ತರ ಪ್ರದೇಶದ ಶಹಾಬಾದ್ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಮದುವೆ ದಿಬ್ಬಣ ಹೊತ್ತು ಸಾಗುತ್ತಿದ್ದ ಖಾಸಗಿ ಬಸ್ಗೆ ಕಾರೊಂದು ಡಿಕ್ಕಿ ಹೊಡೆದು ಅದರಲ್ಲಿದ್ದ ಸಕ್ಕರೆ ಕಾರ್ಖಾನೆಯ ಐವರು ನೌಕರರು ಸಾವನ್ನಪ್ಪಿದ್ದಾರೆ.
ನೌಕರರು ರಾಣಾ ಸಕ್ಕರೆ ಕಾರ್ಖಾನೆಯಿಂದ ಹಿಂದಿರುಗುತ್ತಿದ್ದಾಗ ಧಕಿಯಾ ರಸ್ತೆಯ ಬಂದರ್ ಗ್ರಾಮದ ಬಳಿ ಕಾರು ಬಸ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿದ್ಯಾ ಸಾಗರ್ ಶರ್ಮಾ ತಿಳಿಸಿದ್ದಾರೆ.
ಅಪಘಾತದಲ್ಲಿ ಮುಖೇಶ್, ಹರ್ಬೀರ್, ಶಿವ ಚರಣ್, ದಿಗ್ಗು ಮತ್ತು ಅಮಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಪೊಸ್ಬಾಲ್, ಇಮ್ರಾನ್, ವೀರೇಶ್ ಮತ್ತು ಅಂಕುಶ್ ಗಂಭೀರ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.