ರಸ್ತೆ ಅಪಘಾತ: ಐದು ಜನರಿಗೆ ಗಾಯ

ಬೈಲಹೊಂಗಲ 29:   ರಸ್ತೆ ಪಕ್ಕದಲ್ಲಿ ಹೆಸರು ಕಾಳು ಹಾಕಿ ಒಣಗಿಸುತ್ತಿದ್ದ ಐವರ ಮೇಲೆ ಕಾರಿನ ಚಾಲಕನ  ನಿಯಂತ್ರಣ ತಪ್ಪಿ ಹರಿದ ಪರಿಣಾಮ ಐದು ಜನ ಗಾಯಗೊಂಡ ಘಟನೆ  ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ರವಿವಾರ ಸಂಭವಿಸಿದೆ.

   ಬೆಳವಡಿ ಗ್ರಾಮದ ಮಹೇಶ ರೇವನ್ನವರ(21), ಸಂಜು ಮುರಗೋಡ(35), ವಿನೋದ ಕುಂಬಾರ(14), ಸಿದ್ದಾರೂಡ ಗುಗ್ಗರಿ(24), ಮಲ್ಲಪ್ಪ  ಉಡಕೇರಿ(45) ಈ ದುರ್ಘಟನೆಯಲ್ಲಿ ಗಾಯಗೊಂಡಿದ್ದು 

ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರು ಬೈಲಹೊಂಗಲದಿಂದ ಸವದತ್ತಿ ಕಡೆ ಹೊರಡುವ ಮಾರ್ಗದ ಮದ್ಯದಲ್ಲಿರುವ ಬೆಳವಡಿ ಹಳೆ ಬಸ್ ನಿಲ್ದಾಣದ ಬಳಿ ಅವಘಡ ಸಂಭವಿಸಿದೆ. 

ಚಾಲಕ ರಾಮಪ್ಪ ಗಂಗಪ್ಪ ಹುಲಕುಂದನನ್ನು ಬಂಧಿಸಲಾಗಿದೆ. ಆಕ್ರೋಶಗೊಂಡ  ಗ್ರಾಮಸ್ಥರು ಕೆಲಕಾಲ ಸವದತ್ತಿ-ಬೆಳಗಾವಿ ರಸ್ತೆ ತಡೆದು ಪ್ರತಿಭಟಿಸಿದ್ದರ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. 

ಕಿತ್ತೂರು ಸಿಪಿಐ ಶ್ರೀಕಾಂತ 

ತೋಟಗಿ ಪ್ರತಿಭಟನಾಕಾರರ ಮನಒಲಿಸಿ ರಸ್ತೆ ತಡೆ ನಿಮರ್ಾಣ ಮಾಡುವುದಾಗಿ ಭರವಸೆ ನೀಡಿದ 

ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಂಡರು. ಪ್ರಕರಣ ದೊಡವಾಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.