ಬೆಳಗಾವಿ, 15: ಕನ್ನಡಿಗರಿಗೆ ಅತೀ ಹೆಚ್ಚು ಉದ್ಯೋಗ ಕಲ್ಪಿಸಿದ ಏಕೈಕ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಸರಕಾರಿ ನೌಕರರನ್ನಾಗಿ ಮಾಡಿ, ಸಾರಿಗೆ ಕಾಮರ್ಿಕರಿಗೆ ವೈದ್ಯಕೀಯ ಸೌಲಭ್ಯ ಹಾಗೂ ನಿವೃತ್ತ ಉಪಧನವನ್ನು ನೀಡಬೇಕೆಂದು ಕೇಂದ್ರ ಕನ್ನಡ ಕ್ರಿಯಾ ಸಮಿತಿ ಕರಾರಸಾ ಸಂಸ್ಥೆ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ ಸರಕಾರಕ್ಕೆ
ಒತ್ತಾಯಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ 15 ರಂದು ವಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕನ್ನಡ ಕ್ರಿಯಾ ಸಮಿತಿಯಿ ವತಿಯಿಂದ ಆಯೋಜಿಸಲಾಗಿದ್ದ, ವಲಯಮಟ್ಟದ ಕನ್ನಡ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಕಳೆದ 12 ವರ್ಷಗಳಿಂದ ಕಾಮರ್ಿಕರ ಹಕ್ಕೋತ್ತಾಯಕ್ಕೆ ಮನನೆ ನೀಡದೆ, ಸರಕಾರ ಏಕವ್ಯಕ್ತಿ ಆಡಳಿತ ಪ್ರದಶರ್ಿಸುತ್ತಿದೆ ಇದರಿಂದ ಕಾಮರ್ಿಕರ ವರ್ಗಕ್ಕೆ ಅನ್ಯಾಯವಾಗುತ್ತಿದೆ, 2 ವರ್ಷಗಳ ಹಿಂದೆ ನಿವೃತ್ತಯಾದ ಸಾರಿಗೆ ನೌಕರರಿಗೆ 20-30 ಲಕ್ಷ ರೂ. ನೀಡಬೇಕಾದ ಉಪಧನ ನೀಡುತ್ತಿಲ್ಲ
ಎಂದರು.
ಕಂದಬೋತ್ಸವದಲ್ಲಿ ಪಂಪ್ ಪ್ರಶಸ್ತಿ ಜತೆ ಕನ್ನಡ ಮೊದಲ ದೊರೆ, ಕಂಚಿ ಪಲ್ಲವರ ವಿರುದ್ಧ ಹೋರಾಡಿ ಜಯಶಾಲಿಯಾಗಿ ಕದಂಬ ಸಾಮ್ರಾಜ್ಯ ಸ್ಥಾಪನೆ ಮಾಡಿದ ಮಯೂರ ಮೌರ್ಯರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಬೇಕೆಂದರು.
ಮದ್ಯಭಾಗಬೇಕಾದ ಬೆಳಗಾವಿ ಗಡಿಭಾಗವಾಗಿ ಮಾರ್ಪಟ್ಟಿದೆ. ಅನ್ಯಬಾಷೆಗಳಿಂದ ಕನ್ನಡ ಬಾಷೆ ಹಾಗೂ ಉದ್ಯೋಗಕ್ಕೆ ಪೆಟ್ಟು ಬಿಳುತ್ತಿದೆ.
ಪ್ರಾದೇಶಿಕ ಭಾಷೆಗಳನ್ನು ತುಳಿಯುವ ಪ್ರಯತ್ನವಾಗತ್ತಿದೆ. ಬ್ಯಾಂಕಿಗ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು, ಬಡಕುಟುಂಬದ ಮಕ್ಕಳಿಗೆ ಇಂಗ್ಲೀಷ್ನಲ್ಲಿ ಪರೀಕ್ಷೆ ಬರೆಯುವುದು ಕಷ್ಟಕರ ಎಂದರು.
ಬೆಳಗಾವಿ ಕನರ್ಾಟಕ ರಾಜ್ಯದಾನಿವಾಗಬೇಕಿತ್ತೂ. ಆದರೆ, ದುರಾದೃಷ್ಟ ಆಗಿಲ್ಲ. ವಿಶ್ವಕ್ಕೆ ಶ್ರೇಷ್ಠವಾದ ಕನ್ನಡ ಭಾಷೆ ಗಡಿನಾಡಿನಲ್ಲಿ ಮಾತನಾಡಲು ಹಿಂದೆಟ್ಟು ಹಾಕುತ್ತಿದ್ದಾರೆ. ಮಹಾರಾಷ್ಟ್ರ ಜನರಿಗೆ ಕನ್ನಡ ಆಸ್ತಿ ಬೇಕಾಗಿದೆ ಹೊರತು ಕನ್ನಡ ಭಾಷೆ ಮೇಲೆ ಕಿಂಚಿತ್ತು ಕಾಳಜಿ ಎಂದು ವಿಷಾದವ್ಯಕ್ತಪಡಿಸಿದರು.
ಅಗ್ರಸ್ಥಾನ ಸಿಕ್ಕ ಕನ್ನಡ ದ್ವಜಕ್ಕೆ ಪ್ರತ್ಯಕ್ಕೆ ಮಾನ್ಯತೆ ಸಿಗಬೇಕಿದೆ, ಆ ಕಾರ್ಯ ರಾಜ್ಯ ಸರಕಾರ ಮಾಡಬೇಕಿದೆ. ಸರಕಾರ ಸರೋಜಿನಿ ಮಹಷಿಯವರ ಪರಿಷ್ಕರ ವರದಿಯನ್ನು ಜಾರಿಗೆ ತಂದರೆ, ಕನ್ನಡ ಮಕ್ಕಳಿಗೆ ಹೇಚ್ಚಿನ ಉದ್ಯೋಗ ಸಿಕ್ಕಂತಾಗುತ್ತದೆ ಎಂದರು. ಕನ್ನಡ ನಾಮಫಲಕ ಹೋರಾಟಕ್ಕೆ ಮುಖ್ಯ ಪಾತ್ರವಹಿಸಿದು ರಸ್ತೆ ಸಾರಿಗೆ ಕನ್ನಡ ಕಿಯಾ ಸಮಿತಿ ಕನ್ನಡ ಬೆಳವಣಿಗಾಗಿ ಶ್ರಮಿಸಿದೆ.
ಕಸಾಪ ಅದ್ಯಕ್ಷೇ ಮಂಗಲಾ ಮೆಟಗುಡ್ಡ ಮಾತನಾಡಿ, ಸಾರಿಗೆ ಸಂಸ್ಥೆ ಸಮಾಜ ಸೇವೆಗಾಗಿ ಶ್ರಮಿಸುತ್ತಿದೆ ಸಂಭಂದಗಳನ್ನು ಬೆಸೆಯುವ ಕಾರ್ಯ ಸಾರಿಗೆ ಸಂಸ್ಥೆ ಮಾಡುತ್ತಿದೆ. ಕೇಂದ್ರ, ರಾಜ್ಯ ಎಲ್ಲಾ ಇಲಾಖೆ ಅನ್ಯಭಾಷೆ ಜನರಿಗೆ ಉದ್ಯೋಗ ನೀಡಿದೆ ಆದರೆ ಸಾರಿಗೆ ಸಂಸ್ಥೆ ಕ್ನನಡಿಗರಿಗೆ ಅತೀ ಹೆಚ್ಚು ಉದ್ಯೋಗ ಅವಕಾಶ ನೀಡಿದೆ. ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಎಂ. ಆರ್ ಮುಂಜಿ, ರಾಘವೇಂದ್ರ ಜೋಶಿ, ಅಶೋಕ ಚಂದರಗಿ, ಕೆ ಎಸ್ ಪ್ರಭುಸ್ವಾಮಿ, ಗಂಗಾಧರ ಕಮಲದಿನ್ನಿ, ಅಜೀತ ಉಬರಟ್ಟಿ, ಸುರೇಶ ಯರಡ್ಡಿ ಸ್ವಾಗತಿಸಿದರು.ಚ ಶಿ. ಬಿಡನಾಳ ನಿರೂಪಿಸಿದರು. ಬಿಎಸ್ ಗುಂಡರನಾಳ ವಂದಿಸಿದರು.