ರಸ್ತೆ ಸುರಕ್ಷತಾ ಸಪ್ತಾಹ: ವಿವಿಧ ಜಾಗೃತಿ ಕಾರ್ಯಕ್ರಮಗಳು



ಗದಗ 18: ಗದಗ ಜಿಲ್ಲೆಯಲ್ಲಿ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಾಹನಗಳ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಮಹತ್ವವನ್ನು ತಿಳಿಸಲು ಗದಗ ಪ್ರಾದೇಶಿಕ ಸಾರಿಗೆ ಕಚೇರಿಯು ಜಿಲ್ಲಾಡಳಿತ, ಜಿಲ್ಲಾ ಪೊಲೀಸ ಇಲಾಖೆ, ಗದಗ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳ ಹಾಗೂ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ವಿವಿಧ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. 

ಜನೇವರಿ 13ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಅಲ್ಲದೇ ವಾಹನಗಳ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಮಹತ್ವವನ್ನು ತಿಳಿಸಲು ಗದಗ ನಗರದ ಮುಖ್ಯ ಬೀದಿಗಳಲ್ಲಿ ಕಡ್ಡಾಯವಾಗಿ ಹೆಲ್ಮೇಟ್ ಧರಿಸಿಯೇ ವಾಹನ ಚಾಲನೆ ಮಾಡುವ ಬಗ್ಗೆ ಬೈಕ್ ಜಾಥಾ ಏರ್ಪಡಿಸಲಾಗಿತ್ತು. ಬೈಕ ಜಾಥವನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಷಿ ಉದ್ಘಾಟಿಸಿದ್ದರು. 

     ದಿ. 14ರಂದು  ಪ್ರಾದೇಶಿಕ  ಸಾರಿಗೆ ಕಛೇರಿಯಲ್ಲಿ ಸಾರ್ವಜನಿಕರಿಗೆ ಹಾಗೂ ಚಾಲಕರಿಗೆ ರಸ್ತೆ ಸುರಕ್ಷತಾ ಮಹತ್ವ ಕುರಿತು ತಿಳುವಳಿಕೆ ನೀಡಿ ಕರಪತ್ರ ವಿತರಣೆ ಮಾಡಲಾಯಿತು. ದಿ. 15ರಂದು ಸಾರಿಗೆ ಇಲಾಖೆ ವಾಹನ ನಿರೀಕ್ಷಕರು ಗದಗ ನಗರದಲ್ಲಿ  ವಿಶೇಷ ತಪಾಸಣೆ ನಡೆಸಿ ಚಾಲಕರಿಗೆ ತಿಳುವಳಿಕೆ ನೀಡಿ ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಸ್ಟೀಕ್ರಗಳನ್ನು ವಾಹನಗಳಿಗೆ ಅಂಟಿಸುವ ಕಾರ್ಯಕ್ರಮ ನಡೆಯಿತು. ದಿ. 16ರಂದು ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಸಾರ್ವಜನಿಕರಿಗೆ ಹಾಗೂ ಚಾಲಕರಿಗೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು ಸಹಯೋಗದೊಂದಿಗೆ  ಉಚಿತ ನೇತ್ರ ತಪಾಸಣೆಯನ್ನು  ನಡೆಸಲಾಯಿತು. 

ಜನೇವರಿ 17ರಂದು ಗದಗ ಪಟ್ಟಣದ  ಚಿಕ್ಕಟ್ಟಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಡಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಪ್ರಬಂಧ ಹಾಗೂ ಚಿತ್ರಕಲೆ ಸ್ಪಧರ್ೆ ರಸ್ತೆ ಸುರಕ್ಷತಾ ಸಪ್ತಾಹದ ಮುಕ್ತಾಯ ಸಮಾರಂಬವನ್ನು ಎರ್ಪಡಿಸಿ ವಿದ್ಯಾಥರ್ಿಗಳಿಗೆ ರಸ್ತೆ ಸುರಕ್ಷತಾ ಮಹತ್ವ ಹಾಗೂ ಅರಿವು ಮೂಡಿಸುವ ಸಂಬಂದವಾಗಿ  ಪ್ರಾದೇಶಿಕ ಸಾರಿಗೆ ಅಧಿಕಾರಿ ಕುಮಾರಿ ವಿನಯಾ  ಕಟೋಕರ್ ಅರ್, ಮೋಟಾರು ವಾಹನ ನಿರೀಕ್ಷಕ ಬಾಲಚಂದ್ರ ಹಾಗೂ ಅಧೀಕ್ಷಕರಾದ ದಯಾನಂದ ತಿಳವಳ್ಳಿ ಇವರು ಮಾಹಿತಿ ನೀಡಿದರು.