ಲೋಕದರ್ಶನವರದಿ
ಮುಧೋಳ- ಪ್ರತಿಯೊಬ್ಬ ವಾಹನ ಚಾಲಕ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಿ, ಜೀವ ಉಳಿಸಿಕ್ಕೊಳ್ಳಬೇಕು, ಮದ್ಯಪಾನ ಮರಣಕ್ಕೆ ಆಹ್ವಾನವಿದ್ದಂತೆ, ಸಿಟ್ ಬೆಲ್ಟ ಧರಿಸಿ ,ವಾಹನ ಚಲಿಸುವಾಗ ಮೊಬೈಲ್ ಬಳಸದೇ, ಹೆಲ್ಮೆಟ್ ಧರಿಸಿ, ಸುರಕ್ಷಿತ ರಸ್ತೆ ಸಂಚಾರದ ಅರಿವು ಎಲ್ಲರಿಗೊ ಇರಬೇಕೆಂದು ಸರಕಾರಿ ಪ್ರಥಮ ದಜರ್ೆ ಕಾಲೇಜ ಪ್ರಾಚಾರ್ಯ ಎನ್.ಎಲ್. ತೇರದಾಳ ಹೇಳಿದರು,
ಅವರು ಕಾಲೇಜ್ ಹಾಗೂ ಪೊಲಿಸ ಇಲಾಖೆಯ ಸಹಯೋಗದಲ್ಲಿ ನಡೆದ ಮಾನವ ಸರಪಳಿ ಹಾಗೂ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ವಾಹನ ಚಾಲಕರು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನೊಳಗೊಂಡ ಕರಪತ್ರವನ್ನು ಸಾರ್ವಜನಿಕರಿಗೆ ವಿತರಿಸಿ ಮಾತನಾಡಿ, ವಾಹನಕ್ಕೆ ಸಂಬಂಧಪಟ್ಟ ಎಲ್ಲ ಕಾಗದಪತ್ರಗಳನ್ನು ತಮ್ಮ ಬಳಿ ಇಟ್ಟುಕೊಂಡು ದಂಡದಿಂದ ಮುಕ್ತಿ ಹೊಂದಬೇಕು 18 ವರ್ಷದೊಳಗಿನ ಮಕ್ಕಳ ಕೈಯಲ್ಲಿ ವಾಹನವನ್ನು ಕೊಡಬಾರದೆಂದು ಸಲಹೆ ನೀಡಿದರು.
ಉಪನ್ಯಾಸಕರಾದ ಎಸ್.ಬಿ.ರಾಯನಗೌಡರ, ಎಸ್.ಎಂ. ಹಾದಿಮನಿ ,ಮುಸ್ತಫಾ ಮುಂಡರಗಿ, ಉಷಾರಾಣಿ, ರೇಖಾಮಣಿ, ಹಾಗೂ ಅತಿಥಿ ಉಪನ್ಯಾಸಕರು ಮೆರವಣಿಗೆಯ ನೇತೃತ್ವ ವಹಿಸಿದ್ದರು.