ಶಿಂಧೊಳ್ಳಿ, 4: ಮುಂಜಾನೆ ಶಾಲೆಯ ಸಮಯದಲ್ಲಿ ಇಂಡಿಕಾ ಕಾರೊಂದು ಮಕ್ಕಳನ್ನು ಶಿಂಧೊಳ್ಳಿಯಿಂದ ಸಾಂಬ್ರಾ ಶಾಲೆಯೊಂದಕ್ಕೆ ಕರೆದುಕೊಂಡು ಹೋಗುವಾಗ ಕಾರು ರಸ್ತೆಯ ಬದಿಯ ತೆಗ್ಗಿಗೆ ಇಳಿದು ಪಲ್ಟಿ ಆಗುವ ಅನಾಹುತ ತಪ್ಪಿದೆ. ಇದು ನಡೆದದ್ದು ಶಿಂಧೊಳ್ಳಿಯಿಂದ ಸಾರಿಗೆ ನಗರ, ಗೋಕುಲ ನಗರ ಮಾರ್ಗವಾಗಿ ನೀಲಜಿಗೆ ಹೋಗುವ ಮಾರ್ಗದ ಮಧ್ಯದಲ್ಲಿ ನಡೆದಿರುವ ಘಟನೆ.
ಕಾರಿನಲ್ಲಿದ್ದ ಮಗುಯೊಂದು ವಾಂತಿ ಮಾಡುವುದನ್ನು ನೋಡಿ ಕಾರಿನ ಚಾಲಕ ಕಾರನ್ನು ರಸ್ತೆಯ ಬದಿಗೆ ತೆಗೆದುಕೊಂಡು ನಿಲ್ಲಿಸುವ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯೇಕ ದಶರ್ಿಗಳು ತಿಳಿಸಿದ್ದಾರೆ.
ಮೊದಲೇ ಅಪೂರ್ಣವಾದ ರಸ್ತೆ, ಸುರಿದ ಮಳೆಯಿಂದ ಉಬ್ಬಿ ನಿಂದ ನೆಲ, ರಸ್ತೆಯ ಬದಿಯಲ್ಲಿ ಗಿಡಗಂಟಿಗಳು, ರಸ್ತೆಯುದ್ದಕ್ಕೂ ತಗ್ಗಗಳು. ಹೀಗೆ ಯಾವ ಜಾಗ ಎಲ್ಲಿ ಹೇಗಿದೆ ಉಹಿಸುವುದು ಕಷ್ಟ ಸಾಧ್ಯ. ಅಂತಹದರಲ್ಲಿ ಕಾರಿನಲ್ಲಿ ಸುಮಾರು ಚಿಕ್ಕಮಕ್ಕಳನ್ನು ತುಂಬಿಕೊಂಡು ಹೋಗುವುದು, ಅದರಲ್ಲಿಯೇ ಅಪರಿಚಿತ ಕಾರಿನ ಚಾಲಕನಿಂದ ಒಂದು ರಸ್ತೆಯ ಬದಿಯ ಕಲ್ಲು ಆಸರೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಈ ರಸ್ತೆ ತುಂಬಾ ಅಪಾಯಕಾರಿಯಾಗಿದೆ. ಯಾಕೆಂದರೆ ಶಿಂಧೊಳ್ಳಿಯಿಂದ ಸಾರಿಗೆ ನಗರವರೆಗೆ ಮಾತ್ರ ಸಿಮೆಂಟ ರಸ್ತೆ ನಿಮರ್ಿಸಲಾಗಿದೆ. ಮಧ್ಯದಲ್ಲಿ ಪೂತರ್ಿ ರಸ್ತೆ ಹದಗೆಟ್ಟು ಹೋಗಿದೆ. ಮತ್ತೆ ಗೋಕುಲ ನಗರದಲ್ಲಿ ಸಿಮೆಂಟ ರಸ್ತೆ ಇದೆ. ಹೀಗೆ ಯಾವ ಕಡೆಯೂ ಪೂತರ್ಿ ರಸ್ತೆ ನಿಮರ್ಾಣವಾಗಿಲ್ಲ. ಬಾಗಿಲಿಗೆ ತೊರಣ ಒಳಗೆ ಹೊಲಸು ಎಂಬಂತಾಗಿದೆ ಈ ರಸ್ತೆಗೆ ಬರುವವರ ಸ್ಥಿತಿ. ಗೋಕುಲ ನಗರ ಪ್ರವೇಶ ರಸ್ತೆ ಚನ್ನಾಗಿದೆ ಆದರೆ ಒಳಬಂದಂತೆ ಅಪಾಯಕಾರಿಯಾಗಿದೆ.
ಏನೇಯಾದರೂ ಮುಂದೆ ದೊಡ್ಡ ಅನಾಹುತ ಆಗುವ ಮುಂಚೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲ ಅಂದರೆ ಮುಂದೊಂದು ದಿನ ಜನರ ಆಕ್ರೋಶಕ್ಕೆ ಗುರಿವಾಗಬಹುದು.