ಮಿಕ್ಸಡ್ ಮಾರ್ಷಲ್ ಆಟ್ರ್ಸ ಗೆ ರಿತು ಫೋಗಟ್ ಪದಾರ್ಪಣೆ

ನವದೆಹಲಿ, ನ 14 :      ಭಾರತದ ಕುಸ್ತಿಪಟು ರಿತು ಫೋಗಟ್ ಅವರು ನ. 16 ರಂದು ಕೊರಿಯಾದ ನಮ್ ಹೀ ಕಿಮ್ ವಿರುದ್ಧ ಸೆಣಸುವ ಮೂಲಕ ಮಿಕ್ಸಡ್ ಮಾರ್ಷಲ್ ಆಟ್ರ್ಸ (ಎಂಎಂಎ) ಪದಾರ್ಪಣೆ ಮಾಡುತ್ತಿದ್ದಾರೆ. ಚೀನಾದ ಬೀಜಿಂಗ್ ನಲ್ಲಿ ಇವರಿಬ್ಬರ ನಡುವಿನ ಪಂದ್ಯ ನಡೆಯಲಿದೆ.

ಈ ಬಗ್ಗೆ ಪ್ರತಿಕ್ರಿಯಸಿದ ರಿತು ಫೋಗಟ್, " ಮಿಕ್ಸಡ್ ಮಾರ್ಷಲ್ ವಿಶ್ವ ಚಾಂಪಿಯನ್ ಆಗಬೇಕೆಂಬ ಗುರಿ ಹೊಂದಿದ್ದೇನೆ. ಅದಕ್ಕಾಗಿ ತುಂಬಾ ದಿನಗಳಿಂದ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದೇನೆ. ಮಿಕ್ಸಡ್ ಮಾರ್ಷಲ್ ಗೆದ್ದ ಮೊದಲ ಭಾರತೀಯ ಮಹಿಳಾಕುಸ್ತಿಪಟು ಆಗಬೇಕು ಎಂಬ ಬಯಕೆ ಹೊಂದಿದ್ದೇನೆ." ಎಂದು ಅವರು ಹೇಳಿದರು.

"ದೇಶವನ್ನು ಪ್ರತಿನಿಧಿಸುವಲ್ಲಿ ನಾನು ಹೆಮ್ಮೆ ಪಡುತ್ತೇನೆ. ನಾನು ಹಲವು ಮಹಿಳೆಯರಿಗೆ ಪ್ರೇರಣೆಯಾಗಬೇಕು. ಆದ್ದರಿಂದ ತುಂಬು ಹೃದಯದಿಂದ ಈ ಸ್ಪರ್ದೆಗೆ ಧುಮುಕುತ್ತಿದ್ದೇನೆ." ಎಂದರು.

ರಿತು ಫೋಗಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ವಿಶ್ವ 23 ವಯೋಮಿತಿ ಕುಸ್ತಿ ಚಾಂಪಿಯನ್ಶಿಪ್ ನಲ್ಲಿ ಬೆಳ್ಳಿ ಪದಕ, ಹಾಗೂ ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ  ಗೆದ್ದಿದ್ದರು. ಇವರ ಸಹೋದರಿಯರಾದ ಗೀತಾ ಫೋಗಟ್, ಬಬಿತಾ ಕುಮಾರಿ ಹಾಗೂ ಸಂಗೀತಾ ಇವರೆಲ್ಲರೂ ಕುಸ್ತಿಪಟುಗಳಾಗಿದ್ದಾರೆ.