ತೆರೆಯಲ್ಲಿ ಕಾಣಿಸಿಕೊಳ್ಳಲಿದೆ ರಿತಿಕ್, ದೀಪಿಕಾ ಜೋಡಿ

ಮುಂಬೈ, ಜ.27 :       ಬಾಲಿವುಡ್ ನ ಸೂಪರ್ ನಟಿ ದಿಪಿಕಾ ಪಡುಕೋಣೆ ಅವರು ರಿತಿಕ್ ರೋಷನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.  

ದೀಪಿಕಾ ಹಾಗೂ ರಿತಿಕ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಬಹು ದಿನಗಳಿಂದ ಚರ್ಚೆ ನಡೆಯುತ್ತಲೇ ಇತ್ತು. ಫರಾನ್ ಖಾನ್ ಚಿತ್ರದಲ್ಲಿ ಈ ಇಬ್ಬರೂ ನಟಿಸಲಿದ್ದಾರೆ ಎಂದು ಕೇಳಿ ಬಂದಿತ್ತು. ನಾಲ್ಕನೇ ಆವೃತ್ತಿಯ ಕೃಷ್ ನಲ್ಲಿ ದೀಪಿಕಾ ಹಾಗೂ ರಿತಿಕ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಿಯಾಂಕಾ ಛೋಪ್ರಾ ಅವರು ಕೃಷ್ ಚಿತ್ರದ ಆವೃತ್ತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.  

ರಿತಿಕ್ ಹಾಗೂ ಅವರ ತಂದೆ ನಾಲ್ಕನೇ ಆವೃತ್ತಿಯ ಕೃಷ್ ಚಿತ್ರಕ್ಕಾಗಿ ದೀಪಿಕಾ ನಟಿಸಬೇಕೆಂಬ ಆಸೆ ಹೊಂದಿದ್ದಾರೆ. ದೀಪಿಕಾ ತಮ್ಮ ಪಾತ್ರದ ಬಗ್ಗೆ ಹಲವು ಬಾರಿ ಚರ್ಚಿಸಿ ತಮ್ಮ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಮತ್ತು ಚಿತ್ರದಲ್ಲಿ ದೀಪಿಕಾ ಅವರ ಪಾತ್ರ ಪ್ರಭಾವಶಾಲಿಯಾಗಿರಬೇಕು. ಆಗ ಮಾತ್ರ ದೀಪಿಕಾ ನಟಿಸಲು ಸಮ್ಮತಿ ನೀಡುತ್ತಾರೆ.