ಆಸ್ಟ್ರೇಲಿಯಾ ಓಪನ್‌ ಪ್ರಶಸ್ತಿ ಮೊತ್ತದಲ್ಲಿ ಏರಿಕೆ

ಮೆಲ್ಬೋರ್ನ್‌, ಡಿ 24 ಮುಂದಿನ ವರ್ಷ ಜನವರಿಯಲ್ಲಿ ಆರಂಭವಾಗುವ ಆಸ್ಟ್ರೇಲಿಯಾ ಓಪನ್‌ ಟೂರ್ನಿಗೆ ಪ್ರಶಸ್ತಿ ಮೊತ್ತವನ್ನು 71 ದಶಲಕ್ಷ ಆಸ್ಟ್ರೇಲಿಯಾ ಡಾಲರ್‌ಗೆ ಏರಿಸಲಾಗಿದೆ.ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ಚಾಂಪಿಯನ್‌ ಗಳು 4.1 ದಶಲಕ್ಷ ಡಾಲರ್‌ ಪಡೆದುಕೊಳ್ಳಲಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇ. 13.6 ರಷ್ಟು ಏರಿಸಲಾಗಿದೆ. ಕಳೆದ 2011ಕ್ಕೆ ಹೋಲಿಸಿಕೊಂಡರೆ ಈ ಬಾರಿ ಪ್ರಶಸ್ತಿ ಮೊತ್ತ ದ್ವಿಮುಖವಾಗಿದೆ.ಅರ್ಹತಾ ಸುತ್ತಿನಲ್ಲಿ ಸೋಲು ಅನುಭವಿಸಿದ ಆಟಗಾರರು 20,000 ಆಸ್ಟ್ರೇಲಿಯಾ ಡಾಲರ್ ಬಹುಮಾನ ಪಡೆಯಲಿದ್ದಾರೆ. ಪ್ರಧಾನ ಸುತ್ತಿನ ಮೊದಲನೇ ಸುತ್ತಿನಲ್ಲಿ ಸೋತವರು 90,000 ಡಾಲರ್ ಪಡೆಯಲಿದ್ದಾರೆ.ಆಸ್ಟ್ರೇಲಿಯಾದ ಓಪನ್ ಟೂರ್ನಿ ನಿರ್ದೇಶಕ ಕ್ರೇಗ್ ಟೈಲ್ ಮಾತನಾಡಿ, "ಈ ಹೆಚ್ಚಳವು ಆಟದ ಗುಂಪಿನಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುವ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ," ಎಂದಿದ್ದಾರೆ."ಅಂತರರಾಷ್ಟ್ರೀಯ ಟೆನಿಸ್ ಆಟಗಾರರ ವೇತನ ಮತ್ತು ಷರತ್ತುಗಳನ್ನು ಸುಧಾರಿಸಲು ನಾವು ಬಹಳ ಸಮಯದಿಂದ ಬದ್ಧರಾಗಿದ್ದೇವೆ. ವಾಸ್ತವವಾಗಿ 2007ರಲ್ಲಿ ಬಹುಮಾನದ ಮೊತ್ತವು 20 ದಶಲಕ್ಷದಿಂದ 2020 ಕ್ಕೆ ಆಸ್ಟ್ರೇಲಿಯಾ ಡಾಲರ್ 71 ದಶಲಕ್ಷಕ್ಕೆ ಮೂರು ಪಟ್ಟು ಹೆಚ್ಚಾಗಿದೆ" ಎಂದು ಟೈಲ್ ಹೇಳಿದರು.ಆಸ್ಟ್ರೇಲಿಯಾ ಓಪನ್ ಜನವರಿ 20 ರಿಂದ ಮೆಲ್ಬರ್ನ್ ಪಾರ್ಕ್‌ನಲ್ಲಿ ಪ್ರಾರಂಭವಾಗಲಿದೆ.