ರಿಷಿ ಕಪೂರ್ 'ಪ್ರತಿಭೆಯ ಶಕ್ತಿ ಕೇಂದ್ರ'ವಾಗಿದ್ದರು; ಮೋದಿ

ನವದೆಹಲಿ, ಏ 30, ಬಾಲಿವುಡ್ ನ ಮೇರು ನಟ ರಿಷಿ ಕಪೂರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಪೂರ್ ಅವರು 'ಪ್ರತಿಭೆಯ ಶಕ್ತಿ ಕೇಂದ್ರ'ವಾಗಿದ್ದರು ಎಂದು ಬಣ್ಣಿಸಿರುವ ಮೋದಿ, ಅವರ ನಿಧನದ ಸುದ್ದಿ ತಮಗೆ ನೋವು ತಂದಿದೆ ಎಂದಿದ್ದಾರೆ.ತಮ್ಮ ಶೋಕಸಂದೇಶದಲ್ಲಿ ಅವರು 'ಬಹುಮುಖ ಪ್ರತಿಬೆ, ಲವಲವಿಕೆಯ ಮತ್ತು ಜೀವ ತುಂಬಿದ ವ್ಯಕ್ತಿಯಾಗಿದ್ದರು ರಿಷಿ ಕಪೂರ್ ಜಿ. ಅವರು ಪ್ರತಿಭೆಯ ಶಕ್ತಿಕೇಂದ್ರವಾಘಿದ್ದರು. ನಾನು ಯಾವಾಗಲೂ ಅವರೊಂದಿಗಿನ ಸಂಭಾಷಣೆಯನ್ನು ಸ್ಮರಿಸುತ್ತಿದ್ದೆ. ಅವರು ಚಿತ್ರಗಳು ಮತ್ತು ಭಾರತದ ಪ್ರಗತಿಯ ಬಗ್ಗೆ ಆಸಕ್ತಿ ಹೊಂದಿದ್ದರು. ಅವರ ಸಾವಿನಿಂದ ನನಗೆ ತುಂಬಾ ನೋವಾಗಿದೆ. ಅವರು ಕುಟುಂಬ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ದೊರೆಯಲು. ಓಂ ಶಾಂತಿ' ಎಂದಿದ್ದಾರೆ.ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಪೂರ್ ಗುರುವಾರ ಬೆಳಗ್ಗೆ ನಿಧನರಾದರು.