ವಿಶಾಖಪಟ್ಟಣಂ, ಡಿ 17 ವೆಸ್ಟ್ ಇಂಡೀಸ್ ವಿರುದ್ಧ ಮೊದಲನೇ
ಏಕದಿನ ಪಂದ್ಯದಲ್ಲಿ ಚೊಚ್ಚಲ ಅರ್ಧ ಶತಕ ಸಿಡಿಸಿದ್ದ ಯುವ ವಿಕೆಟ್ ಕೀಪ ಹಾಗೂ ಬ್ಯಾಟ್ಸ್‌ಮನ್ ರಿಷಭ್
ಪಂತ್‌ಗೆ ಭಾರತ ತಂಡದ ಮಾಜಿ ಆರಂಭಿಕ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಸಲಹೆ ನೀಡಿದ್ದಾರೆ.ಭಾನುವಾರ
ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ರಿಷಭ್ ಪಂತ್
69 ಎಸೆತಗಳಲ್ಲಿ 71 ರನ್ ಗಳಿಸಿದ್ದರು. ಅಲ್ಲದೇ, ಶ್ರೇಯಸ್ ಅಯ್ಯರ್(70) ಜತೆಗೂಡಿ
114 ರನ್ ಜತೆಯಾಟವಾಡಿದ್ದರು. ಆ ಮೂಲಕ ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 287 ರನ್ ಕಲೆ ಹಾಕುವಲ್ಲಿ
ನೆರವಾಗಿದ್ದರು. ನಂತರ, ಶಿಮ್ರಾನ್ ಹೆಟ್ಮೇರ್(139) ಹಾಗೂ ಶಾಯ್ ಹೋಪ್ (102) ಅವರ ಶತಕಗಳ ಬಲದಿಂದ
ವೆಸ್ಟ್ ಇಂಡೀಸ್ ಇನ್ನು, 13 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್ ಗಳಿಂದ ಜಯ ಸಾಧಿಸಿತ್ತು.ಪಂತ್
ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ ಗಂಭೀರ್, "ಮೂರು ಮಾದರಿಯಲ್ಲಿ ರಿಷಭ್ ಪಂತ್‌ಗೆ ಸ್ಥಿರ
ಪ್ರದರ್ಶನದ ಅಗತ್ಯವಿದೆ. ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಇದ್ದಾರೆ. ಆದರೆ, ಅವರಿಗೆ ಅಂತಿಮ 11 ರಲ್ಲಿ
ಸ್ಥಾನ ನೀಡಲಾಗಿಲ್ಲ. ಹಾಗಾಗಿ, ಪಂತ್ 60-70 ಹಾಗೂ 100 ರನ್ ಗಳನ್ನು ಗಳಿಸಬೇಕು. ಇದೇ ರೀತಿ ಎಂ.ಎಸ್
ಧೋನಿಪಂದ್ಯದಲ್ಲಿ ಮಾಡುತ್ತಿದ್ದರು," ಎಂದರು.ಐಸಿಸಿ ವಿಶ್ವಕಪ್ ಬಳಿಕ ಎಂ.ಎಸ್ ಧೋನಿ ಸ್ಥಾನದಲ್ಲಿ
ಸೀಮಿತ ಓವರ್‌ಗಳ ಮಾದರಿಯಲ್ಲಿ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಅಂದಿನಿಂದಲೂ ಅವರು ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಹಾಗೂ ಡಿಆರ್‌ಎಸ್ ರಿವ್ಯೂವ್ ನಲ್ಲಿ ಎಡವಟ್ಟು
ಮಾಡುತ್ತಲೇ ಇದ್ದಾರೆ. ಹಾಗಾಗಿ, ಅವರು ಟೀಕೆಗೆ ಗುರಿಯಾಗಿದ್ದರು.ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ
ಶ್ರೇಯಸ್ ಅಯ್ಯರ್ ಬಗ್ಗೆ ಮಾತನಾಡಿ, " ಹಲವು ದಿನಗಳಿಂದ ಈ ಅವಕಾಶಕ್ಕಾಗಿ ಅಯ್ಯರ್ ಕಾಯುತ್ತಿದ್ದರು.
ಇದೀಗ ಸಿಕ್ಕಿರುವ ಅವಕಾಶವನ್ನು ಅವರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರು ಗಳಿಸುತ್ತಿರುವ
60 ಮತ್ತು 80 ರನ್ ಗಳನ್ನು 100 ರನ್ ಗಳಿಗೆ ಪರಿವರ್ತಿಸಬೇಕು. ಆಗ ಅವರು ಮಧ್ಯಮ ಕ್ರಮಾಂಕಕ್ಕೆ ಒಂದು
ಬಲಿಷ್ಟ ಶಕ್ತಿಯಾಗಿ ಬದಲಾಗಲಿದ್ದಾರೆ. ಅದನ್ನೇ ಈ ಹಿಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಊ
ಕೆ.ಎಲ್ ರಾಹುಲ್ ಮಾಡಿದ್ದರು," ಎಂದು ಗಂಭೀರ್
ಸಲಹೆ ನೀಡಿದರು.ಮೊದಲ ಪಂದ್ಯದ ಸೋಲಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.
ನಾಳೆ ವಿಶಾಖಪಟ್ಟಣಂದಲ್ಲಿ ಎರಡನೇ ಏಕದಿನ ಪಂದ್ಯ ಜರುಗಲಿದೆ.