ಮಾಹಿತಿ ಹಕ್ಕು ಅಧಿಕಾರಿಗಳಿಗೆ ಕಾಯರ್ಾಗಾರ ಪಾರದರ್ಶಕತೆಗೆ ಆರ್ಟಿಐ ಕಾಯ್ದೆ ಸಹಕಾರಿ : ಆಯುಕ್ತ ಎಸ್. ಎಲ್.ಪಾಟೀಲ

ಬೆಳಗಾವಿ, 15: ಸಕರ್ಾರಿ ಕಚೇರಿಗಳಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯತ್ವ ತರಲು ಮಾಹಿತಿ ಹಕ್ಕು ಕಾಯ್ದೆ ಅತ್ಯಂತ ಸಹಕಾರಿಯಾಗಿದೆ. ಈ ಕಾಯ್ದೆಯ ಆಶಯ ಈಡೇರಬೇಕಾದರೆ  ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗಗೊಳಿಸುವ ಅಗತ್ಯವಿದೆ ಎಂದು ಕನರ್ಾಟಕ ಮಾಹಿತಿ ಆಯೋಗದ ಆಯುಕ್ತರಾದ ಎಸ್.ಎಲ್.ಪಾಟೀಲ ಅಭಿಪ್ರಾಯಪಟ್ಟರು.

ಜಿಲ್ಲೆಯ ವಿವಿಧ ಇಲಾಖೆಗಳ ಮಾಹಿತಿ ಹಕ್ಕು ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ (ನ.15) ನಡೆದ ಕಾಯರ್ಾಗಾರ ಉದ್ಧೇಶಿಸಿ ಅವರು ಮಾತನಾಡಿದರು.

ದೇಶದ ಪ್ರಮುಖ ಹಗರಣಗಳು ಬೆಳಕಿಗೆ ಬಂದಿರುವುದು ಮಾಹಿತಿ ಹಕ್ಕು ಕಾಯ್ದೆಯಿಂದ ಎಂಬುದು ಗಮನಾರ್ಹ ವಿಷಯವಾಗಿದೆ. ಪ್ರತಿಯೊಂದು ಇಲಾಖೆಯು ಈ ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡುವುದು ಕಡ್ಡಾಯವಾಗಿದೆ.

ಕಡತ ಸಂರಕ್ಷಣೆ-ಅಧಿಕಾರಿ ಹೊಣೆ:

ಮಾಹಿತಿ ಕೋರಿ ಅಜರ್ಿ ಬಂದರೆ ಕಡತ ಲಭ್ಯವಿಲ್ಲ ಎಂದು ಉತ್ತರ ನೀಡುವಂತಿಲ್ಲ. ಒಂದು ವೇಳೆ ಹಾಗೇ ಉತ್ತರ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬಹುದು.

ಪ್ರತಿಯೊಂದು ಕಡತವನ್ನು ವಿವಿಧ ಕೆಟಗರಿಗಳಲ್ಲಿ ವಿಂಗಡಿಸಿ ನಿಗದಿತ ಕಾಲಾವಧಿವರೆಗೆ ಸಂರಕ್ಷಿಸಿ ಇಡಬೇಕಾಗುತ್ತದೆ. ಇಲಾಖೆಯ ಮುಖ್ಯಸ್ಥರು ಇದನ್ನು ಅರಿತುಕೊಳ್ಳಬೇಕು ಎಂದರು.

ಒಂದು ವೇಳೆ ಕಡತ ನಶಿಸಿದ್ದರೆ ಕಡತ ಮರು ಸೃಷ್ಟಿಸಲು ಅವಕಾಶಗಳಿವೆ. ಮಾಹಿತಿ ಹಕ್ಕು ಅಧಿಕಾರಿಗಳು ಈ ಬಗ್ಗೆಯೂ ಪ್ರಯತ್ನಿಸಬಹುದು.

ಮಾಹಿತಿ ಹಕ್ಕು ಕಾಯ್ದೆ ಅತ್ಯಂತ ಸರಳ ಕಾಯ್ದೆ ಆಗಿದೆ. ಐದಾರು ಕಲಂ ಗಳು ಪ್ರಮುಖವಾಗಿದ್ದು, ಅದಷ್ಟು ಚೆನ್ನಾಗಿ ತಿಳಿದುಕೊಂಡರೆ ಮಾಹಿತಿ ಒದಗಿಸುವುದು ಅತ್ಯಂತ ಸುಲಭವಾಗುತ್ತದೆ.

ಮಾಹಿತಿ ಕೋರಿ ಬರುವ ಅಜರ್ಿಗಳನ್ನು ನಿರ್ಲಕ್ಷಿಸಿದರೆ ದಂಡದ ಮೊತ್ತ ಹೆಚ್ಚಳವಾಗುತ್ತದೆ. ಆದ್ದರಿಂದ ಕೆಳಹಂತದ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಹಿರಿಯ ಅಧಿಕಾರಿಗಳಿಗೆ ಆಗುವ ಮುಜುಗರ ತಪ್ಪಿಸಬಹುದು.

ಕಚೇರಿ ನೌಕರರು ಸೇರಿದಂತೆ ಯಾರದೇ ವೈಯಕ್ತಿಕ ಮಾಹಿತಿಯನ್ನು ಅಜರ್ಿದಾರರಿಗೆ ನೀಡುವಂತಿಲ್ಲ; ಒಂದು ವೇಳೆ ಸಕರ್ಾರದ ಯೋಜನೆಯ ಫಲಾನುಭವಿಗಳ ವೈಯುಕ್ತಿಕ ಮಾಹಿತಿ ಕೇಳಿದರೆ ಅದು ಮೂರನೇ ಪಕ್ಷದಾರ ಮಾಹಿತಿ ಆಗುತ್ತದೆ. ಅಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ವ್ಯಕ್ತಿಯ ಒಪ್ಪಿಗೆ ಪಡೆದು ನೀಡಬೇಕಾಗುತ್ತದೆ.

ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿ ಸಕರ್ಾರಿ ಕಚೇರಿಗಳಲ್ಲಿ ಲಭ್ಯವಿದ್ದರೆ ಅದನ್ನೂ ಅಜರ್ಿದಾರನಿಗೆ ನೀಡಬೇಕಾಗುತ್ತದೆ. ಆದರೆ ಲಭ್ಯವಿಲ್ಲದ ಮಾಹಿತಿಯನ್ನು ಖಾಸಗಿ ಅವರಿಂದ ಪಡೆದುಕೊಂಡು ನೀಡುವಂತಿಲ್ಲ. 

ಸ್ವಯಂ ಮಾಹಿತಿ ಪ್ರಕಟಣೆಗೆ ಸಲಹೆ:

ಪ್ರತಿಯೊಂದು ಇಲಾಖೆಯವರು ತಮ್ಮ ಇಲಾಖೆಗೆ ಸಂಬಂಧಪಟ್ಟ ಬಹುತೇಕ ಮಾಹಿತಿಯನ್ನು ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಸ್ವಯಂಪ್ರೇರಣೆಯಿಂದ ಪ್ರಕಟಿಸಬೇಕು ಎಂದು ಮಾಹಿತಿ ಆಯುಕ್ತ ಎಸ್.ಎಲ್.ಪಾಟೀಲ ಸಲಹೆ ನೀಡಿದರು.

ಸ್ವಯಂಪ್ರೇರಣೆಯಿಂದ ಮಾಹಿತಿ ಪ್ರಕಟಿಸುವುದರಿಂದ ಶೇ.70 ರಷ್ಟು ಅಜರ್ಿಗಳನ್ನು ಕಡಿಮೆ ಮಾಡಬಹುದು.

ಅಜರ್ಿದಾರ ಕೇಳಿದ ಮಾಹಿತಿ ವೆಬ್ಸೈಟ್ ನಲ್ಲಿ ಲಭ್ಯವಿದ್ದರೆ ಅಲ್ಲಿಂದ ಮಾಹಿತಿ ಪಡೆಯುವಂತೆ ತಿಳಿಸಿ ವೆಬ್ಸೈಟ್ ವಿಳಾಸದೊಂದಿಗೆ ಅಜರ್ಿದಾರನಿಗೆ ಹಿಂಬರಹ ನೀಡಬಹುದು.

ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು  ನೀಡಬೇಕಾಗಿಲ್ಲ.

ಆರ್. ಟಿ.ಐ. ದುರ್ಬಳಕೆ ಅಜರ್ಿದಾರನಿಗೆ ದಂಡ:

ಮಾಹಿತಿ ಹಕ್ಕು ಕಾಯ್ದೆ ಇರುವುದು ಸಾರ್ವಜನಿಕರ ಸದುಪಯೋಗಕ್ಕೆ; ಒಂದು ವೇಳೆ ಯಾರಾದರೂ ಕಾಯ್ದೆ ದುರುಪಯೋಗ ಪಡಿಸಿಕೊಂಡಿರುವುದು ಕಂಡುಬಂದರೆ ಆಯೋಗ ಅದನ್ನು ಸಹಿಸುವುದಿಲ್ಲ ಎಂದು ಮಾಹಿತಿ ಆಯುಕ್ತರು ಸ್ಪಷ್ಟಪಡಿಸಿದರು.

ಸಾರ್ವಜನಿಕ ಉದ್ದೇಶವಿಲ್ಲದೇ ಕಾಯ್ದೆ ದುರ್ಬಳಕೆ ಮಾಡಿಕೊಂಡು ಅನಗತ್ಯ ಮಾಹಿತಿ ಕೋರಿ ಅಜರ್ಿ ಹಾಕಿದವರಿಗೆ ದಂಡ ಹಾಕಿರುವ ಉದಾಹರಣೆಗಳಿವೆ ಎಂದು ವಿವರಿಸಿದರು.

   ಮಾಹಿತಿ ಅಧಿಕಾರಿಗಳಿಗೆ ಕಾಯ್ದೆ ಹೇಗೆ ಅನ್ವಯಿಸುತ್ತದೆಯೋ ಅದೇ ರೀತಿ ಅಜರ್ಿದಾರನಿಗೂ ಅನ್ವಯಿಸುತ್ತದೆ. ಮಾಹಿತಿ ಪಡೆಯಲು ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಿರುತ್ತದೆ.

ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್.ಸುಧೀರಕುಮಾರ್ ರೆಡ್ಡಿ, ಅಪರ ಪ್ರಾದೇಶಿಕ ಆಯುಕ್ತ ರಮೇಶ್ ಕಳಸದ, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನವರ ಉಪಸ್ಥಿತರಿದ್ದರು.

ವಿವಿಧ ಇಲಾಖೆಗಳ ಮಾಹಿತಿ ಹಕ್ಕು ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಕಾಯರ್ಾಗಾರದಲ್ಲಿ ಪಾಲ್ಗೊಂಡಿದ್ದರು.