ನೂತನ ಹೈಟೆಕ್ ಗ್ರಂಥಾಲಯ ಪ್ರಾರಂಭ ಸ್ವಾಗತಾರ್ಹ: ಅಜಮನಿ

ದಲಿತ ವಿದ್ಯಾರ್ಥಿ ಪರಿಷತ್ ಹೋರಾಟದ ಪ್ರತಿಫಲ  

ವಿಜಯಪುರ 26: ವಿಜಯಪುರ ನಗರದ ಕೇಂದ್ರ ಭಾಗದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಹೈಟೆಕ್ ಗ್ರಂಥಾಲಯಕ್ಕೆ ದಲಿತ ವಿದ್ಯಾರ್ಥಿ ಪರಿಷತ್ ಹೋರಾಟದ ಪ್ರತಿಫಲ ಸಿಕ್ಕಿದೆ ಎಂದು ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ ಅವರು ಮಾತನಾಡಿದರು. 

ನಗರದ ನೆಹರೂ ಕಾಂಪ್ಲೆಕ್ಸನಲ್ಲಿರುವ ಹಳೆಯ ಗ್ರಂಥಾಲಯ ಓದಲು ಯೋಗ್ಯವಿರಲಿಲ್ಲ, ಅಲ್ಲಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಹಿರಿಯರು ಓದಲು ಬರುತ್ತಿದ್ದರು ಅವರಿಗೆ ಗ್ರಂಥಾಲಯದಲ್ಲಿ ಓದಲು ಪುಸ್ತಕಗಳಿಲ್ಲದೆ, ಕೂಡಲು ಆಸನಗಳಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದನ್ನು ಗಮನಿಸಿದ ದಲಿತ ವಿದ್ಯಾರ್ಥಿ ಪರಿಷತ್ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಂಪರ್ಕಿಸಿ  ಮನವಿ ಮಾಡಿತು.  

ನಂತರ ಮನವಿ ಪ್ರತಿಫಲವಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಗ್ರಂಥಾಲಯ ಸಮಯವನ್ನು ಬದಲಾವಣೆ ಮಾಡಿದರು. ಮೊದಲು ಬೆಳಿಗ್ಗೆ 3 ತಾಸು ಸಂಜೆ 3 ತಾಸು ಇದ್ದ ಸಮಯವನ್ನ ಹಗಲು ಪೂರ್ತಿ ಆಯಿತು. ಪ್ರಸ್ತುತ ದಿನಮಾನಗಳಿಗೆ ಬೇಕಾದ ಪುಸ್ತಕಗಳನ್ನ ಪಟ್ಟಿ ಮಾಡಿ ಅವುಗಳನ್ನು ತರಿಸಲು ಆಗ್ರಹಿಸಲಾಗಿತ್ತು. ನೂತನ ಕಟ್ಟಡ ನಿರ್ಮಾಣ ಮಾಡಲು ಹೋರಾಟವನ್ನ ರೂಪಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಕೆಲವು ತಿಂಗಳ ನಂತರ ನೂತನ ಕಟ್ಟಡಕ್ಕೆ ಹಣ ಮಂಜೂರಾಯಿತು. ಗ್ರಂಥಾಲಯದ ಕಟ್ಟಡ ಪ್ರಾರಂಭವಾಗಿ ಕಾಮಗಾರಿ ಅರ್ಧಕ್ಕೆ ನಿಂತಿರುವಾಗಲು ಜಿಲ್ಲಾಧಿಕಾರಿಗಳಿಗೆ ಮತ್ತೆ ಮನವಿ ಮಾಡಿ ಕಾಮಗಾರಿ ಪ್ರಾಂಭಿಸಲು ಒತ್ತಡ ಹಾಕಲಾಯಿತು. ಕಾಮಗಾರಿ ಮುಗಿದು ಆರು ತಿಂಗಳಾದರೂ ವಿವಿಧ ಕಾರಣಗಳು ನೀಡಿ ಗ್ರಂಥಾಲಯ ಪ್ರಾರಂಭಿಸಲು ಮುಂದೆ ಹಾಕುತ್ತಾ ಬಂದ ಜಿಲ್ಲಾಡಳಿತ ಕ್ರಮ ಖಂಡಿಸಿ ಮತ್ತೆ ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ, ಗ್ರಂಥಾಲಯ ಲೋಕಾರೆ​‍್ಣ ಮಾಡಲು ವಿಳಂಬ ನೀತಿ ಅನುಸರಿಸಿದರೆ ಭವಿಷ್ಯದಲ್ಲಿ ಉಗ್ರವಾದ ಹೋರಾಟ ಮಾಡಲಾಗುಹುದು ಸಂಭಂದ ಪಟ್ಟ ಅಧಿಕಾರಿಗಳಿಗೆ ಹೇಳಲಾಗಿತ್ತು. ಈ ಒತ್ತಡ ಮತ್ತು ಹೋರಾಟದ ಫಲವಾಗಿ ಇವತ್ತು ನೂತನ ಗ್ರಂಥಾಲಯವನ್ನು ಪ್ರಾರಂಭಿಸಲು ಜಿಲ್ಲಾಡಳಿತ ಮೂಲಕ ಸೂಚನೆ ದೊರೆತಿದೆ.  

ಇದು ದಲಿತ ವಿದ್ಯಾರ್ಥಿ ಪರಿಷತ್‌ನ ಹೋರಾಟದ ಫಲವಾಗಿ ನೂರಾರು ವಿದ್ಯಾರ್ಥಿಗಳಿಗೆ ಮತ್ತು ನಗರದ ನಾಗರಿಕರಿಗೆ ಅಲ್ಲದೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡುವ ಯುವಜನರಿಗೆ ಅನುಕೂಲವಾಗಲಿದೆ ಎಂದು ಅಕ್ಷಯ್ ಕುಮಾರ್ ತಿಳಿಸಿದರು. 

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ  ಅದರಲ್ಲೂ ಹೈಟೆಕ್ ಗ್ರಂಥಾಲಯ ತುಂಬಾ ಉಪಯೋಗವಾಗಲಿದೆ. ಗ್ರಂಥಾಲಯವನ್ನು ಜಿಲ್ಲಾಡಳಿತ ಒಳ್ಳೆಯ ರೀತಿಯಲ್ಲಿ ನಿರ್ವಹಣೆ ಮಾಡಲಿ ಎಂದು ಎಂದು ದಲಿತ ವಿದ್ಯಾರ್ಥಿ ಪರಿಷತ್ ಕೋರುತ್ತದೆ. ಇದಕ್ಕೆ ಸಹಕರಿಸಿದ ಅಧಿಕಾರಿಗಳಿಗೆ ಮತ್ತು ಹೋರಾಟ ಮಾಡಿದ ಮುಖಂಡರಿಗೆ ಪರಿಷತ್ ಅಭಿನಂದನೆ ತಿಳಿಸುತ್ತದೆ ಎಂದರು.