ದಿ.12 ರಂದು ಕೊಪ್ಪಳಕ್ಕೆ ಕ್ರಾಂತಿಕಾರಿ ರಥಯಾತ್ರೆ: ಪ್ರಕಾಶ್

Revolutionary Rath Yatra to Koppal on 12th: Prakash

ಕೊಪ್ಪಳ 11: ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಏಪ್ರಿಲ್ 5 ರಿಂದ ಜೂನ್ 9 ರವರೆಗೆ ಚಾಮರಾಜನಗರದಿಂದ ಪ್ರಾರಂಭವಾಗಿ ಕರ್ನಾಟಕ ರಾಜ್ಯದಾದ್ಯಂತ ಭಾಸ್ಕರ್ ಪ್ರಸಾದ್ ನೇತೃತ್ವದ ತಂಡ ಕ್ರಾಂತಿಕಾರಿ ರಥಯಾತ್ರೆ ಇಂದು ದಿ.12 ರಂದು ಕೊಪ್ಪಳಕ್ಕೆ ಆಗಮಿಸಲಿದೆ ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾಧ್ಯಕ್ಷ ಪ್ರಕಾಶ್ ಹೊಳೆಯಪ್ಪನವರ್  ತಿಳಿಸಿದರು.

ಅವರು ರವಿವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಕ್ರಾಂತಿಕಾರಿ ರಥ ಯಾತ್ರೆ  ನಗರದ ಅಶೋಕ ವೃತ್ತದಿಂದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ಬೈಕ್ ರ್ಯಾಲಿ ಮಾಡಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರೆ​‍್ಣ ಮಾಡಿಲಾಗುವುದು, ಕಳೆದ 35 ವರ್ಷಗಳಿಂದ ಹೋರಾಟ ನಡೆದರೂ ಸಹ ಆಳುವ ಸರಕಾರಗಳು ಗಮನಹರಿಸುತ್ತಿಲ್ಲ  ಹೀಗಾಗಿ  ಸರಕಾರದ ಗಮನ ಸೆಳೆಯಲು ಒಳ ಮೀಸಲಾತಿ ಜಾರಿಗೆ ಕ್ರಾಂತಿಕಾರಿ ರಥಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದರು.

ಮುಖಂಡರಾದ ಪರಶುರಾಮ್ ಕೆರೆಹಳ್ಳಿ ಮಾತನಾಡಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸಾಕಷ್ಟು ಬಾರಿ ಹೋರಾಟ ನಡೆದರೂ ಸಹ  ಆಳುವ ಸರ್ಕಾರಗಳು ಗಮನಿಸುತ್ತಿಲ್ಲ ಎಂದರುಮುಖಂಡರಾದ ಗಾಳೆಪ್ಪ ಕಡೆಮನಿ ಮಾತನಾಡಿ ರಾಜ್ಯದಲ್ಲಿ ಕಳೆದ 35 ವರ್ಷಗಳಿಂದ ಹೋರಾಟ ನಡೆದಿದೆ  ಈ ಬಾರಿ ಒಳ ಮೀಸಲಾತಿ ಜಾರಿ ಆದೇಶ ಪತ್ರವನ್ನು ಪಡೆದೇ ಮನೆಗೆ ಹೋಗುತ್ತೇವೆ ಅಲ್ಲಿವರೆಗೂ ನಿರಂತರ ಹೋರಾಟ ಎಂದರು. ಮುಖಂಡರಾದ ಯಲ್ಲಪ್ಪ ದೇವರಮನಿ, ದೇವರಾಜ್ ನಡುವಲಮನಿ, ಲಕ್ಷ್ಮಣ್ ಕಡೆಮನಿ ಕುಣಿಕೇರಿ ಮಾತನಾಡಿ ಒಳ ಮೀಸಲಾತಿ ಕೂಡಲೇ ಜಾರಿಯಾಗಬೇಕು ಎಂದರು.ಇಂದು ಮೇ 12ರಂದು ಕೊಪ್ಪಳಕ್ಕೆ ಆಗಮಿಸಲಿರುವ ಭಾಸ್ಕರ್ ಪ್ರಸಾದ್ ನೇತೃತ್ವದ ತಂಡದ ಕ್ರಾಂತಿಕಾರಿ ರಥಯಾತ್ರೆ ಬೆಳಗ್ಗೆ 10 ಗಂಟೆಗೆ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಲಿದ್ದು ಕೊಪ್ಪಳ ಜಿಲ್ಲೆಯ ಮಾದಿಗ ಸಮುದಾಯದ ಎಲ್ಲಾ ಮುಖಂಡರು ಹಾಗೂ ಉಪಜಾತಿಯ ಮುಖಂಡರುಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗಾಳೆಪ್ಪ ಕಾತರಿಕಿ, ಗಾಳೆಪ್ಪ ಪೂಜಾರ ಹೂವಿನಾಳ ಉಪಸ್ಥಿತರಿದ್ದರು.