ಹೂವಿನ ಬೆಳಗಾರರಿಗೆ ನೀಡಿದ ಪರಿಹಾರ ಕ್ರಮವನ್ನು ಪುನರ್ ಪರಿಶೀಲಿಸಿ

ಲೋಕದರ್ಶನವರದಿ

ಮೊಳಕಾಲ್ಮೂರು೧೦: ಕೊರೊನಾದ ಕಷ್ಟಕಾಲದಲ್ಲಿ ಸಕರ್ಾರ ಹೂವಿನ ಬೆಳಗಾರರಿಗೆ ಗರಿಷ್ಠ 1 ಹೆಕ್ಟೇರ್ಗೆ 25 ಸಾವಿರರೂ ಪರಿಹಾರ ನೀಡಿರುವುದು ಸ್ವಾಗತಾರ್ಹ. ಆದರೆ ಸವರ್ೆ ನಡೆಸದೆಎಲ್ಲರಿಗೂ ಒಂದೇ ಎಂಬಂತೆ ಮಾಡಿರುವುದು ಕೈಬಿಟ್ಟು ಈಗ ನೀಡಿರುವ ಪರಿಹಾರದಕ್ರಮವನ್ನು ಪುನರ್ ಪರಿಶೀಲಿಸಲಿ ಎಂದು ಹೂವಿನ ಬೆಳಗಾರ ಧರ್ಮಣ್ಣ ಮನವಿ ಮಾಡಿದ್ದಾರೆ.

ತಾಲ್ಲೂಕಿನ ಪಕ್ಕುತರ್ಿಗ್ರಾಮದ ಹೂವಿನ ಬೆಳೆಗಾರ ರೈತಧರ್ಮಣ್ಣನುತನ್ನ 4ಎಕರೆ ತೋಟದಲ್ಲಿಕನಕಾಂಬರಹೂವು ಬೆಳೆದಿದ್ದರು. ಪ್ರತಿನಿತ್ಯ 50 ಕೆ.ಜಿ ಹೂವಿನಂತೆ ದಿನಕ್ಕೆ 10ಸಾವಿರ ಗಳಿಸುತ್ತಿದ್ದರು.ಆದರೆಕೊರೋನಾದಿಂದಇಡೀದೇಶವನ್ನೇ ಲಾಕ್ಡೌನ್ ಮಾಡಿದ್ದು, ಕಳೆದ ಒಂದೂವರೆ ತಿಂಗಳಿಂದ ಒರೋಬ್ಬರಿ 5 ಲಕ್ಷ ರೂಪಾಯಿಗಳು ನಷ್ಟ ಅನುಭವಿಸಿದ್ದಾರೆ.

ಸಕರ್ಾರ ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಸಕರ್ಾರ ಹೂವು ಬೆಳಗಾರರಿಗೆ ನಷ್ಟದಒಟ್ಟು ಮೊತ್ತದಲ್ಲಿ ಅರ್ಧದಷ್ಟಾದರೂ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದರು.ಆದರೆ ಇದೀಗ ಸಕರ್ಾರ ಹೂವು ಬೆಳಗಾರರಿಗೆ 25ಸಾವಿರ ರೂಗಳು ಮಾತ್ರ ಪರಿಹಾರ ನೀಡಿರುವುದುಎಷ್ಟರಮಟ್ಟಿಗೆ ಸರಿ?ಸಕರ್ಾರಯಾವುದೇರೀತಿಯ ಸವರ್ೆ ನಡೆಸದೆಎಲ್ಲರಿಗೂಒಂದೇಎಂದಿರುವುದುಯಾವಆಧಾರದಲ್ಲಿ?ಅವರು ನೀಡುವ ಹಣ ಔಷಧಿ ಅಂಗಡಿಗೂ ಸಹ ಸಾಲುವುದಿಲ್ಲ. ಈಗಾದರೆ ನಮ್ಮಜೀವನ ನಡೆಸುವುದು ಹೇಗೆ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

     ಕೊರೋನಾದಿಂದ ಪರದಾಡಬೇಕಾದಇಂತಹಆಪತ್ ಕಾಲದಲ್ಲಿ ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪನವರು 1610ಕೋಟಿ ರೂಪಾಯಿಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಸ್ವಾಗತಾರ್ಹ ವಿಷಯ.ಅದಕ್ಕೆ ಮುಖ್ಯಮಂತ್ರಿಗಳಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಆದರೆ ಹೂವು ಬೆಳಗಾರರು ಲಕ್ಷಾಂತರ ರೂಪಾಯಿಗಳು ನಷ್ಟ ಅನುಭವಿಸಿದ್ದಾರೆ.ಜೀವನ ನಡೆಸಲಾಗದೆ ಬದುಕು ಬೀದಿಗೆ ಬಿದ್ದಿದೆ.ಇಂತಹ ಪರಿಸ್ಥಿತಿಯಲ್ಲಿ ಸಕರ್ಾರ ಹೂವಿನ ಬೆಳೆಗಾರರ ಬೆಂಬಲಕ್ಕೆ ನಿಲ್ಲದೆ ಕೇವಲ ಎಲ್ಲರಿಗೂಒಂದೇಎಂದು 15ಸಾವಿರ ನೀಡಿರುವುದುಎಷ್ಟರಮಟ್ಟಿಗೆ ಸರಿ?

       ಲಕ್ಷಾಂತರ ರೂಪಾಯಿಗಳು ಸಾಲ ಮಾಡಿ ಬಂಡವಾಳ ಹೂಡಿಹೂವು ಬೆಳೆದಿದ್ದೆ.ಇದೀಗ ಕೊರೋನಾದಿಂದ 5ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ.  ಪ್ರಸ್ತುತ ಸಾಲಗಾರರ ಕಾಟ ಹೆಚ್ಚಾಗಿದೆ, ಮತ್ತೊಂದೆಡೆ ಹೂವೆಲ್ಲಾ ಮಾರಾಟವಾಗದೆ ಗಿಡದಲ್ಲೇ ಬಾಡಿಹೋಗಿವೆ. ತೋಟದನಿರ್ವಹಣೆಯ ಸಮಸ್ಯೆ ಹೆಚ್ಚಾಗಿದೆ, ಇಂತಹಕಷ್ಟಕಾಲದಲ್ಲಿ ನಮ್ಮ ಕೈಹಿಡಿಯೂವವರುಯಾರಿದ್ದಾರೆ. ಹೇಗೆ ಜೀವನ ನಡೆಸಬೇಕು ಎಂಬುದೇ  ತಿಳಿಯದಂತಹ ಸಂದಿಗ್ಧ ಸ್ಥಿತಿಯಲ್ಲಿದ್ದೇವೆ. ಏನು ಮಾಡುವುದಕ್ಕೆ ಹಣಇಲ್ಲದಂತಾಗಿದೆ. 

ಇದೇ ಸಂದರ್ಭದಲ್ಲಿ ತಿಳಿಸಲೇಬೇಕಾಗಿರುವ ಇನ್ನೊಂದು ಮುಖ್ಯ ಮಾಹಿತಿಎಂದರೆಕನಕಾಂಬರ ಹೂವು ಬೆಳೆಯಲು ಲಕ್ಷಾಂತರರೂ ಸಾಲ ಮಾಡಿದ್ದೆ.ಪ್ರತೀ ವರ್ಷವು ಬಡ್ಡಿಯನ್ನುತಪ್ಪದೇಕಟ್ಟಿದ್ದೇನೆ. ಆದರೆ ಪ್ರಸ್ತುತಕೊರೋನಾದಿಂದ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇನೆ. ಇದನ್ನು ಸಹ ಅರ್ಥಮಾಡಿಕೊಳ್ಳದ ಕೆಲವರು ನನಗೆ ಸಾಲ ನೀಡಿದ್ದು ವಾಪಾಸ್ ನೀಡಿ ಎಂದು ಕೇಳುತ್ತಿದ್ದಾರೆ.ಈಗಾದರೆ ಏನು ಮಾಡುವುದು?ಒಬ್ಬ ರೈತನ ಪರಿಸ್ಥಿತಿ ಹೀಗಿರಬೇಕಾದರೆಇನ್ನುರಾಜ್ಯದರೈತರ ಪರಿಸ್ಥಿತಿ ಹೇಗಿರಬೇಡ. ಆದ್ದರಿಂದ ಮುಖ್ಯಮಂತ್ರಿಯಡಿಯೂರಪ್ಪನವರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಅದೆಷ್ಟು ರೈತರು ಏನೇನು ಮಾಡಿಕೊಳ್ಳುತ್ತಾರೋ ತಿಳಿಯದಾಗಿದೆ ಎಂದುಆತಂಕ ವ್ಯಕ್ತಪಡಿಸಿದರು. ಸಾಲ ಮತ್ತು   ಜೀವನ ನಿರ್ವಹಿಸಲು ಸಾಧ್ಯವಾಗದೇ ಇದ್ದು ರೈತರು ಆತ್ಮಹತ್ಯೆ ಮಾಡಿಕೊಂಡರೆ ಸಕರ್ಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿದರು.ರೈತರು ಸಾಯುವಂತಹ ಇಂತಹ ಸ್ಥಿತಿಯಲ್ಲಿಯೂ ಸಹ ಸಕರ್ಾರ ಕೇವಲ 25ಸಾವಿರ ನೀಡಿರುವುದು ಸರಿಯೇ? ಒಮ್ಮೆ ನೀವೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದರು.

ಒಬ್ಬ ರೈತಆತ್ಮಹತ್ಯೆ ಮಾಡಿಕೊಂಡರೆ  5ಲಕ್ಷ ಕೊಟ್ಟು ಸುಮ್ಮನಾಗುತ್ತೀರಾ. ಆದರೆ ಪ್ರಸ್ತುತ ಕೊರೊನಾದಿಂದ ರೈತರು ಸಾಯುವಇಂತಹ ಸ್ಥಿತಿಯಲ್ಲಿ ಏಕೆ ಸಾಯದಂತೆ ತಡೆಯುವ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಶ್ನಿಸಿದರು. ಕೃಷಿ ಮಂತ್ರಿ ಬಿ.ಸಿ ಪಾಟೀಲ್ ಅವರಿಗೆ ಮಾಧ್ಯಮಗಳ ಮೂಲಕ ಕರೆಮಾಡಿಇದನ್ನೆಲ್ಲಾ ತಿಳಿಸಿದರೆ ಆಯ್ತು ನೋಡುತ್ತೇವೆಎಂದು ಹೇಳುತ್ತಾರೆ ವಿನಹ ಯಾರೂ ಕೂಡ ನೆರವಿಗೆ ಧಾವಿಸಿಲ್ಲ ಎಂದ ಬೇಸರ ವ್ಯಕ್ತಪಡಿಸಿದರು.

25 ಸಾವಿರದಲ್ಲಿ ಗೊಬ್ಬರ ಮತ್ತು ಔಷಧ ಅಂಗಡಿಗೆ ಕೊಡುವುದಕ್ಕೆ ಆಗ್ತಾ ಇಲ್ಲ ಆದರೆ ಸ್ವಲ್ಪ ಲಾಕ್ಡೌನ್ ಸಡಿಲ ಮಾಡುವುದೇ ತಡಗೊಬ್ಬರ ಮತ್ತು ಔಷಧಿಅಂಗಡಿಯವರು ನನ್ನದುಕೊಡು ನಿನ್ನದುಕೊಡು ಎಂದು ಕೇಳುತ್ತಾರೆ, ಇವರು ಸಾಲ ನೀಡಿದವರು ಒಂದು ರೀತಿ ಬ್ರಿಟಿಷ್ ಸಕರ್ಾರದಂತೆ ಸಾಲ ಮರುಪಾವತಿಸಿ ಎಂದು ಕೇಳುತ್ತಲೇ ಇದ್ದಾರೆ, ಆದರೆ ಒಂದು ನಯಾ ಪೈಸೆಯು ಇಲ್ಲದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಕರ್ಾರ ನೀಡುವ 25 ಸಾವಿರದಿಂದ ಏನು ಮಾಡಲು ಸಾಧ್ಯ. ಅದನ್ನು ಯಾರಿಗೆ ಎಂದು ಕೊಡಬೇಕು. ಜೀವನ ಹೇಗೆ ನಡೆಸಬೇಕು ನೀವೆ ಹೇಳಿ ಎಂದು ಸಕರ್ಾರವನ್ನೇ ಕೇಳಿದರು.

         ಸಕರ್ಾರ ಕೋಟ್ಯಾಂತರ ರೂಪಾಯಿಗಳಷ್ಟು ಸಾಲ ಮಾಡಿದ ಉದ್ಯಮಿಗಳ ಸಾಲವನ್ನು ಮನ್ನಾ ಮಾಡುತ್ತಾರೆ.ಆದರೆ ನಮ್ಮಂತಹರೈತರ ಕೈಹಿಡಿಯುವುದಿಲ್ಲ ಏಕೆ?ಇಂತಹಕಷ್ಟದ ಸಂದರ್ಭದಲ್ಲಿ ಅಂತಹ ಉದ್ಯಮಿಗಳಿಂದ ಹಣವನ್ನು ಕಾನೂನು ಕ್ರಮ ಜರುಗಿಸಿ ಹಣ ಜೋಡಿಸಲಿ ಎಂದರು.

     ಯಾವುದೇ ಕಾರಣಕ್ಕೂ ಇದನ್ನು ಹೀಗೆ ಮುಂದುವರೆಸದೆ ಸರಿಯಾದ ಯೋಜನೆಯಿಂದ     ಸವರ್ೇ ಮಾಡಿಸಿ    ತೋಟಗಾರಿಕೆಯಿಂದ ಒಂದೇಎಕರೆಇರಲಿ ಐದು ಎಕರೆ ಇರಲಿ ಅದುಎಲ್ಲರಿಗೂ ಮೊದಲು 25.000 ರೂತಿದ್ದುಪಡಿಮಾಡಿ ಅವರಿಗೆ ಉಂಟಾದ ನಷ್ಟದ ಪ್ರಮಾಣದಲ್ಲಿ ಅರ್ಧದಷ್ಟಾದರೂ, ಅಥವಾ ಕಾಲು ಭಾಗವಾದರು ಪರಿಹಾರ ನೀಡಿಎಂದು ಮುಖ್ಯಮಂತ್ರಿಗಳಾದ ಬಿ.ಎಸ್ಯಡಿಯೂರಪ್ಪನವರಲ್ಲಿ ಮನವಿ ಮಾಡುತ್ತಿದ್ದೇವೆ ಎಂದರು.

ವರದಿ: ಪ್ರಭಾಕರ.ಪಿ

9980796846

ಕೊರೊನಾಕಾಟಕ್ಕೆ 5ಲಕ್ಷ ನಷ್ಟ ಅನುಭವಿಸಿದ್ದೇನೆ. ಸಕರ್ಾರ ಮಾತ್ರಯಾವುದೇ ಸವರ್ೆ ಮಾಡಿಸದೆ ಕೇವಲ 25ಸಾವಿರ ಪರಿಹಾರ ನೀಡಿದೆ.ಇದರಿಂದ ಸಾಲ ಕಟ್ಟುವುದು ಹೇಗೆ, ಜೀವನ ನಡೆಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಸಕರ್ಾರ ಮತ್ತೊಮ್ಮೆ ಈ ವಿಚಾರದಲ್ಲಿ ಸವರ್ೆ ಮಾಡಿಸಿ ಪರಿಹಾರ ನೀಡಬೇಕೆಂಬುದು ನಮ್ಮ ಮನವಿಯಾಗಿದೆ.

                                     -ಧರ್ಮಣ್ಣ

ಹೂವು ಬೆಳಗಾರರು, ರೈತ.

ಪಕ್ಕುತರ್ಿಗ್ರಾಮ, ಮೊಳಕಾಲ್ಮೂರು ತಾಲ್ಲೂಕ್.

ಮೊಬೈಲ್: 9731165248