ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ-2026 ಪ್ರಗತಿ ಪರೀಶೀಲನೆ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ-2026 ಪ್ರಗತಿ ಪರೀಶೀಲನೆ Review of progress on the 2026 electoral roll revision in the Belagavi Rural constituency

ಲೋಕದರ್ಶನ ವರದಿ

 ಬೆಳಗಾವಿ  15: ಭಾರತ ಚುನಾವಣಾ ಆಯೋಗ, ನವದೆಹಲಿ ಅವರ ನಿರ್ದೇಶನದಂತೆ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ-2026 ಕಾರ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಅದರಂತೆ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು  ಮನೆ-ಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರ್ಮ್ಗಳನ್ನು ವಿತರಿಸುವ ಕಾರ್ಯವನ್ನು ಆರಂಭಿಸಿದ್ದಾರೆ.  

13-ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಜೂನ್ 6, 2026ರ ಸ್ಥಿತಿಗತಿಗಳ ಪ್ರಕಾರ ಒಟ್ಟು 2,66,282 ಮತದಾರರಿದ್ದು, ಇವರಿಗಾಗಿ ಎನ್ಯೂಮರೇಷನ್ ಫಾರ್ಮ್ಗಳನ್ನು ಮುದ್ರಿಸಿ ಸಂಬಂಧಪಟ್ಟ ಬಿಎಲ್‌ಒಗಳಿಗೆ ವಿತರಿಸಲಾಗಿದೆ.  ಈ ಪೈಕಿ 2,58,156 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಮನೆ-ಮನೆಗೆ ಭೇಟಿ ನೀಡುವ ಕಾರ್ಯವು ಜೂನ್ 30ರಿಂದ ಜುಲೈ 29, 2026ರವರೆಗೆ ನಡೆಯಲಿದೆ. ಸಂಗ್ರಹಿಸಲಾದ ನಮೂನೆಗಳ ಗಣಕೀಕರಣ ಪ್ರಕ್ರಿಯೆಯೂ ಇದೇ ಅವಧಿಯಲ್ಲಿ ನಡೆಯಲಿದೆ.  

ಜುಲೈ 15, 2026ರ ಸಂಜೆ 4 ಗಂಟೆಯವರೆಗೆ ನಡೆದ ಪ್ರಗತಿ ಪ್ರಕಾರ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಒಟ್ಟು 2,66,282 ಮತದಾರರಲ್ಲಿ ಬಿಎಲ್‌ಒಗಳು 2,65,954 ಎನ್ಯೂಮರೇಷನ್ ಫಾರ್ಮ್ಗಳನ್ನು (99.88) ವಿತರಿಸಿದ್ದಾರೆ. ಈ ಪೈಕಿ 1,41,789 ಎನ್ಯೂಮರೇಷನ್ ಫಾರ್ಮ್ಗಳನ್ನು (53.25) ಗಣಕೀಕರಣ ಮಾಡಲಾಗಿದೆ.  ಮತದಾರರ ನೋಂದಣಿ ಅಧಿಕಾರಿ ಶಕೀಲಮ್ಮ ಸಿ.ಡಬ್ಲ್ಯೂ. ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರರ ನೋಂದಣಿ ಅಧಿಕಾರಿ ಎಚ್‌.ಎನ್‌. ಶಿರಹಟ್ಟಿ ಅವರು ಕ್ಷೇತ್ರದ ಬಿಎಲ್‌ಒಗಳನ್ನು ಭೇಟಿ ಮಾಡಿ, ಎನ್ಯೂಮರೇಷನ್ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು.