ಹೆರಕಲ್ ಆರ್.ಸಿ ಕೇಂದ್ರದಲ್ಲಿ ಕಂದಾಯ ಅದಾಲತ್

ಬಾಗಲಕೋಟೆ01: ಬೀಳಗಿ ತಾಲೂಕಿನ ಹೆರಕಲ್ ಆರ್.ಸಿ ಕೇಂದ್ರದಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಬೀಳಗಿ ತಹಶೀಲ್ದಾರ ಉದಯ ಕುಂಬಾರ ಅವರ ನೇತೃತ್ವದಲ್ಲಿ ರವಿವಾರ ಕಂದಾಯ ಹಾಗೂ ಪಿಂಚಣಿ ಅದಾಲತ್ ನಡೆಯಿತು.

ಕಂದಾಯ ಅದಾಲತ್ನಲ್ಲಿ ಒಟ್ಟು 7 ಸ್ವೀಕೃತಗೊಂಡಿದ್ದು, ಅದರಲ್ಲಿ 3 ಅಜರ್ಿಗಳನ್ನು ಸ್ಥಳದಲ್ಲೆ ಇತ್ಯರ್ಥಪಡಿಸಲಾಯಿತು. ಉಳಿದವುಗಳಲ್ಲಿ 1 ಯುಕೆಪಿಗೆ ಸಂಬಂಧಿಸಿದ್ದು ಇದ್ದರೆ, ಇನ್ನು ಒಂದು ರಸ್ತೆ ತಕರಾರಿನಿಂದ ಕೂಡಿತ್ತು. ಅದೇ ರೀತಿ ನಂತರ ನಡೆದ ಪಿಂಚಣಿ ಅದಾಲತ್ನಲ್ಲಿ ಒಟ್ಟು 3 ಅಜರ್ಿಗಳು ಸ್ವೀಕೃತಿಗೊಂಡಿದ್ದವು. ಅದರಲ್ಲಿ 2 ಅಜರ್ಿಗಳು ಕಳೆದ 2 ತಿಂಗಳಿನಿಂದ ಪಿಂಚಣಿ ಜಮಾ ಆಗದೇ ಇರುವ ಕುರಿತು ಬಂದಿದ್ದವರು. ಇದರಿಂದ ಸ್ಥಳೀಯ ಪೋಸ್ಟ್ಮನ್ ಕರೆಯಿಸಿ ಇತ್ರ್ಯರ್ಥಪಡಿಸಲು ತಿಳಿಸಲಾಯಿತು.

ಕಂದಾಯ ಹಾಗೂ ಪಿಂಚಣಿ ಅದಾಲತನಲ್ಲಿ ಗ್ರಾ.ಪಂ ಅಧ್ಯಕ್ಷ ಗಂಗಪ್ಪ ಪೂಜಾರಿ, ಅನಗವಾಡಿಯ ಉಪತಹಶೀಲ್ದಾರ ಕೆ.ಎ.ಕುಲಕಣರ್ಿ, ಕಂದಾಯ ನಿರೀಕ್ಷಕ ಎಸ್.ಬಿ.ಹಿರೇಮಠ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಒಟ್ಟು 285210 ಜನ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು 

ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಯೋಜನೆ ಪ್ರಾರಂಭದಿಂದ ಇಲ್ಲಿವರೆಗೆ ಒಟ್ಟು 285210 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆಂದು ಜಿಲ್ಲಾಧಿಕಾರಿಗಳಾದ ಆರ್.ರಾಮಚಂದ್ರನ್ ತಿಳಿಸಿದ್ದಾರೆ.

ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಯಾಪ್ಯ ವೇತನ ಯೋಜನೆಯಡಿ (ಮಾಸಿಕ ರೂ.600 ರಂತೆ) ಒಟ್ಟು 18582, ಅಂಗವಿಕಲರ ವೇತನದಡಿ (ಶೇ.40ಕ್ಕಿಂತ ಹೆಚ್ಚು-ಮಾಸಿಕ ರೂ.600) ಒಟ್ಟು 24943, ಅಂಗವಿಕಲರ ವೇತನದಡಿ (ಶೇ.90ಕ್ಕಿಂತ ಹೆಚ್ಚು-ಮಾಸಿಕ ರೂ.600) ಒಟ್ಟು 17536, ವಿಧವಾ ವೇತನದಡಿ (ಮಾಸಿಕ ರೂ.600) ಒಟ್ಟು 68213, ಮನಸ್ವಿನಿ ಯೋಜನೆಯಡಿ (ಮಾಸಿಕ ರೂ.600) ಒಟ್ಟು 2971, ಮೈತ್ರಿ ಯೋಜನೆಯಡಿ (ಮಾಸಿಕ ರೂ.600) ಒಟ್ಟು 117 ಹಾಗೂ ಸಂಧ್ಯಾ ಸುರಕ್ಷತಾ ಯೋಜನೆಯಡಿ (ಮಾಸಿಕ ರೂ.1000) ಒಟ್ಟು 95681 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಅದೇ ರೀತಿ ರೈತರ ವಿಧವಾ ವೇತನ ಯೋಜನೆಯಡಿ (ಮಾಸಿಕ ರೂ.2000) ಒಟ್ಟು 104, ಅಂತ್ಯ ಸಂಸ್ಕಾರ ಯೋಜನೆಯಡಿ (ಬಿಪಿಎಲ್ ಕುಟುಂಬಗಳಿಗೆ ರೂ.5000) ಒಟ್ಟು 26814, ಆದರ್ಶ ವಿವಾಹ ಯೋಜನೆಯಡಿ (ರೂ.10,000) ಒಟ್ಟು 1097, ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ (ಎಲ್ಲ ಬಿಪಿಎಲ್ ಕುಟುಂಬಕ್ಕೆ ರೂ.20,000) ಒಟ್ಟು 8980 ಹಾಗೂ ಪಿಂಚನಿ ಅದಾಲತದಡಿ ಒಟ್ಟು 20075  ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪ್ರಸಕ್ತ ವರ್ಷ ತ್ರೈಮಾಸಿಕ ಅಂತ್ಯದವರೆಗೆ ಒಟ್ಟು 94.35 ಲಕ್ಷ ರೂ.ಗಳನ್ನು ಖಚರ್ು ಮಾಡಲಾಗಿದೆ. ಈ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 809 ಅಜರ್ಿಗಳು ಸ್ವೀಕೃತಿಯಾಗಿದ್ದು, ಈ ಪೈಕಿ 566 ಅನುಮೋದನೆಗೊಂಡಿರುತ್ತದೆ. ಉಳಿದ 243 ಅಜರ್ಿಗಳು ಉದ್ದೇಶಿತ ಫಲಾನುಭವಿಗಳಾಗದೇ ಇರುವ ಪ್ರಯುಕ್ತ ಸಮರ್ಪಕ ದಾಖಲೆ ಹೊಂದದೇ ಇರುವದರಿಂದ ತಿರಸ್ಕೃತಗೊಂಡಿರುತ್ತವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.