ಬೆಂಗಳೂರು, ಅ.31: ಕಾರ್ಪೋರೇಟ್ ಕಂಪನಿಗಳಿಗೆ ಕಾಶ್ಮೀರದಲ್ಲಿ ಲೂಟಿ ಮಾಡಿಕೊಡಲು ಜಮ್ಮು-ಕಾಶ್ಮೀರಕ್ಕೆ ನೀಡಿದ್ದ
ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಲಾಗಿದೆ ಎಂದು ಹಿರಿಯ ವಕೀಲ ಹಾಗೂ ಫ್ಯಾಸಿಸ್ಟ್ ವಿರೋಧಿ
ವೇದಿಕೆಯ ಸಂಚಾಲಕ ಎಸ್. ಬಾಲನ್ ಹೇಳಿದ್ದಾರೆ.
ಸೋಷಿಯಲ್ ಡೆಮಾಕ್ರಟಿಕ್
ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬೆಂಗಳೂರಿನಲ್ಲಿ ಗುರುವಾರ ಏರ್ಪಡಿಸಿದ್ದ "ಕಾಶ್ಮೀರದ ಜನರ ಹಕ್ಕುಗಳನ್ನು
ಪುನಸ್ಥಾಪಿಸಿ" ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕಾಶ್ಮೀರ ಜನರನ್ನು ದಮನ ಮಾಡುವ
ಮೂಲಕ ಈ ರಾಜ್ಯಕ್ಕೆ ನೀಡಿದ್ದ ವಿಶೇಷ ಹಕ್ಕನ್ನು ರದ್ದುಪಡಿಸಲಾಗಿದೆ. ಕಾಶ್ಮೀರದಲ್ಲಿ ಗುಜರಾತ್ ಮಾದರಿಯ
ಅಭಿವೃದ್ಧಿ ಮಾಡುವುದಾಗಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೇಳುತ್ತಿದ್ದಾರೆ. ಆದರೆ ಗುಜರಾತ್‌ಗಿಂತ
ಕಾಶ್ಮೀರವೇ ಅಭಿವೃದ್ಧಿ ವಿಷಯದಲ್ಲಿ ಮುಂದಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ
ಫಲವತ್ತಾದ ಭೂಮಿಯನ್ನು ಅಂಬಾನಿ, ಆದಾನಿಯಂತಹ ಕಾರ್ಪೋರೇಟ್ ಕುಳಗಳಿಗೆ ನೀಡುವ ಉದ್ದೇಶವನ್ನು ಸರ್ಕಾರ
ಹೊಂದಿದೆ. ಇದೇ ಉದ್ದೇಶಕ್ಕಾಗಿ ಅಲ್ಲಿಗೆ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದೆ ಎಂದು ಆರೋಪಿಸಿದ
ಅವರು, ಕೂಡಲೇ ಕಾಶ್ಮೀರಿಗಳ ಹಕ್ಕುಗಳನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿದರು.