ರಾಯಬಾಗ: ಸಹಾಯಕ ಕೃಷಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಮನ್ನಿಕೇರಿಗೆ ನಿವೃತ್ತಿ

ಲೋಕದರ್ಶನ ವರದಿ

ರಾಯಬಾಗ 09: ದೇಶಕ್ಕೆ ಅನ್ನ ನೀಡುವ ರೈತರು ಖುಷಿ ಆಗಿದ್ದರೆ ಮಾತ್ರ ಮಾರಾಟಗಾರರು ಮತ್ತು ನಾಡಿನ ಜನರು ಸಂತೋಷ ಮತ್ತು ನೆಮ್ಮದಿ ಇರಲುಸಾಧ್ಯ. ರೈತರಿಗೆ ಅವಶ್ಯಕತೆ ಇರುವಷ್ಟು ಮಾತ್ರಗೊಬ್ಬರ ಮತ್ತು ರಾಸಾಯನಿಕಗಳನ್ನು ಮಾರಾಟ ಮಾಡಬೇಕೆಂದು ಸಹಾಯ ಕೃಷಿ ನಿದರ್ೇಶಕ ಇಂದುಧರ ಹಿರೇಮಠ ಹೇಳಿದರು. 

ದಿ.09ರಂದು ಪಟ್ಟಣದದತ್ತ ಮಂದಿರದ ಸಮುದಾಯ ಭವನದಲ್ಲಿ ತಾಲೂಕು ಕೃಷಿ ಮಾರಾಟಗಾರರಿಂದ ಮತ್ತು ರೈತರಿಂದ ಆಯೋಜಿಸಿದ್ದ ಇತ್ತಿಚೆಗೆ ನಿವೃತ್ತಿ ಹೊಂದಿದ ಸಹಾಯಕ ಕೃಷಿ ನಿದರ್ೇಶಕ ಎಮ್.ಸಿ.ಮನ್ನಿಕೇರಿ ಅವರ ಸತ್ಕಾರ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಇಲಾಖೆಯಲ್ಲಿ ವಯೋನಿವೃತ್ತಿ ಹೊಂದುವುದು ಸರಕಾರಿ ನೌಕರರಿಗೆ ಅನಿವಾರ್ಯ. ಆದರೆ ಅಧಿಕಾರಿಗಳ ಸೇವಾವಧಿಯಲ್ಲಿ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಸತ್ಕರಿಸುವುದು ಅತ್ಯಂತ ಔಚಿತ್ಯ ಪೂರ್ಣವಾದದ್ದು. ರೈತರಿಗೆ ಕೃಷಿ ಅಧಿಕಾರಿಗಳಕ್ಕಿಂತ ಹೆಚ್ಚು ಒಡನಾಟ ಇರುವುದು ಮಾರಾಟಗಾರರೊಂದಿಗೆ ಇರುವುದರಿಂದ, ಮಾರಾಟಗಾರರು ರೈತರ ಕಷ್ಟಗಳಿಗೆ ಸ್ಪಂದಿಸಬೇಕೆಂದರು. 

ಸತ್ಕಾರ ಸ್ವೀಕರಿಸಿ ಮಾತನಾಡಿದ ನಿವೃತ್ತ ಕೃಷಿ ಸಹಾಯ ನಿದರ್ೇಶಕ ಎಮ್.ಸಿ.ಮನ್ನಿಕೇರಿ, ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ರೈತರ ಕಷ್ಟ ಸುಖಗಳನ್ನು ಅರಿತುಕೊಳ್ಳಲು ಸಾಧ್ಯವಾಗಿದೆ. ತಮ್ಮ ಸೇವಾವಧಿಯಲ್ಲಿ ರೈತರಿಗೆ ಸೇವೆ ಸಲ್ಲಿಸದ ಸಂತೃಪ್ತಿ ಇರುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ತಾಲೂಕಿಗೆ ಸಹಾಯ ಕೃಷಿ ನಿದರ್ೇಶಕರಾಗಿ ಆಗಮಿಸಿದ ಇಂದುಧರ ಹಿರೇಮಠ ಅವರನ್ನು ಸ್ವಾಗತಿಸಿ, ಸತ್ಕರಿಸಲಾಯಿತು.

ಕೃಷಿ ಅಧಿಕಾರಿ ಎಸ್.ಕೆ.ಕುಂಬಾರ, ರಾಜಶೇಖರ ಖನದಾಳೆ, ಶೀತಲ ಕೀತರ್ಿ, ರಮೇಶ ಮಾಳಿ, ಸುರೇಶ ಕೊಚೇರಿ, ನಾರಾಯಣ ಮೇತ್ರಿ, ಮಹೇಶ ಮುಗಳಖೋಡ, ಮಹಾದೇವ ದೊಡ್ಡಮನಿ, ಶಿವಾಜಿ ಮೋರೆ, ವಸಂತ ಪೂಜಾರಿ, ನರಸಪ್ಪ ಹುಕ್ಕೇರಿ, ಸುರೇಶ ಕೊಂಕಣಿ, ಕಲ್ಮೇಶ ಪಾಟೀಲ, ಲಕ್ಷ್ಮಣ ಹೊಸಮನಿ, ಅಜೀತ ಉಗಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಸ್.ಪಿ.ಕಂಕಣವಾಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.