ನಿವೃತ ಸೈನಿಕರಿಗೆ ಡಾ.ಮುರಘರಾಜೇಂದ್ರ ಶ್ರೀಗಳಿಂದ ಸನ್ಮಾನ

ಲೋಕದರ್ಶನ ವರದಿ

ಮುಗಳಖೋಡ 17:   ಸುಕ್ಷೇತ್ರ ಮುಕ್ತಿ ಮಂದಿರ ಮುಗಳಖೋಡ ಜಿಡಗಾ ಶ್ರೀ ಮಠವು ಇಂದು ಈ ದೇಶದಲ್ಲಿ ಮತಿಯ ಮತ್ತು ಸಾಮರಸ್ಯದ  ಭಾವೈಕ್ಯತೆಯ ಸಂಕೇತವಾಗಿ ಇಂದು ಈ ನಾಡಿಲ್ಲಿ ಮುಂದುವರೆಯುತ್ತಿದೆ ಶ್ರೀ ಮಠಕ್ಕೆ ಯಾವುದೇ ಸೀಮಿತವಾಗಿರುವ ಜಾತಿ, ಮತ, ಪಂಥ, ಧರ್ಮವೆಂಬುವ ಭೆದ ಬಾವ ಇಲ್ಲ ಇದೊಂದು ಸರ್ವಧರ್ಮದ ಶಕ್ತಿ ಪೀಠವಾಗಿದೆ. 

ಹಾಗೇಯೆ ಇಂದು ಮುಗಳಖೋಡ ಶ್ರೀಮಠದಲ್ಲಿ ಸದ್ಗುರು ಶ್ರೀ ಲಿಂ, ಯಲ್ಲಾಲಿಂಗ ಮಹಾಪ್ರಭುಗಳವರ 34ನೇ ಪುಣ್ಯರಾಧನೆಯ ಮಹೋತ್ಸವವು ನಡೆಯುತ್ತಿದ್ದು ದಿನಪ್ರತಿ ಸಾಯಂಕಾಲ 6 ಘಂಟೆಯಿಂದ ಪುರಾಣ ಪ್ರವಚನ ಮಹಾತ್ಮರ ಉಪದೇಶ ಶ್ರೀಗಳವರ ಆಶಿರ್ವಚನ ನಡೆಯುತ್ತಿದ್ದು ಇದರೋದಿಗೆ 15/01/2020 ರಂದು ಬ್ರಹ್ಮವೇದಿಕೆಯ ಮೇಲೆ ಎರಡು ವಿಬಿನ್ನ ರೂಪದ ಮಹಾಕಾರ್ಯಗಳು ದೇಶಕ್ಕೆ ಸಮಪರ್ಿತಗೊಂಡವು ಅವುಗಳೆಂದರೆ ಭಾರತೀಯ ಸೇನಾ ದಿನದ ನಿಮಿತ್ಯವಾಗಿ ನಿವೃತಗೊಂಡ 4 ಜನ ಸೈನಿಕರನ್ನು ಅಭಿಮಾನ ಪೂರ್ವಕವಾಗಿ ಗೌರವದಿಂದ ಪಿಠಾಧಿಪತಿಗಲಾದ ಡಾ. ಮುರಘರಾಜೇಂದ್ರ ಶ್ರೀಗಳವರು ಗೌರವಿಸಿದ್ದರು.  ಗಡಿಯಲ್ಲಿರುವ ಸೈನಿಕರು ವಿಶ್ರಮಿಸದೆ ದೇಶಕ್ಕಾಗಿ ತಮ್ಮ ಎದೆಯನ್ನ ಕೊಟ್ಟು ಭಾರತಾಂಬೆಯ ಸೇವೆಗಾಗಿ ದುಡಿಯುತ್ತಿದ್ದಾರೆ ಅಂದಾಗ ನಾವು ಇಲ್ಲಿ ಸುಖದಿಂದ ಬದುಕುತಿದ್ದೇವೆ ಎಂದು ಶ್ರೀಗಳು ನುಡಿದ್ದರು  ಈ ಸಂಧರ್ಭದಲ್ಲಿ ಮತ್ತೋದು ಮಹಾಕಾರ್ಯವೆನೆಂದರೆ ಇಸ್ಲಾಂ ಧರ್ಮದ ಇಪರ್ಾನ ಡಾಂಗೆ ಸಾ|| ರಾಯಬಾಗ 

ಶ್ರೀ ಮಠದ ಸದ್ಭಕ್ತರು ಪೂಜ್ಯ ಶ್ರೀಗಳವರಿಗೆ ಭಕ್ತಿಯ ತುಲಾಭಾರ ಸೇವೆ ಸಲ್ಲಿಸಿ ರಾಮನು ನೀನೇ ರಹೀಮನು ನೀನೇ ಎಂದು ಶ್ರೀಗಳವರ ಪಾದಪೂಜೆ ಮಾಡಿಕೊಂಡರು ಈ ಸಮಯದಲ್ಲಿ ಪರಮ ಪೂಜ್ಯ ಶ್ರೀಗಳು ಇಸ್ಲಾಂ ಧರ್ಮದ ಸದ್ಭಕ್ತರಿಗೆ ಬೇವು ಬೆಲ್ಲ ತಿನ್ನಿಸಿ ನೀವು ಸಬ್-ಖಾ- ಮಾಲಿಕ್ ಏಕ ಹೈ ಎಂಬುದಕ್ಕೆ ನೀವೇ ಸತ್ಯ ನಿದರ್ೆಶನ ಎಂದು ಆಶೀರ್ವಚನ ನೀಡಿದರು.