ಲೋಕದರ್ಶನ ವರದಿ
ನಿವೃತ್ತ ಯೋಧನಿಗೆ ಗ್ರಾಸ್ಥರಿಂದ ಅದ್ದೂರಿ ಸ್ವಾಗತ
ನೇಸರಗಿ, 02; ಕಳೆದ 22 ವರ್ಷಗಳಿಂದ ಯೋಧನಾಗಿ ಕಾರ್ಯನಿರ್ವಹಿಸಿ ನಿವೃತ್ತನಾಗಿ ಗ್ರಾಮಕ್ಕೆ ಆಗಮಿಸಿದ ಜಗದೀಶ ರುದ್ರ್ಪ ಮಾಳನ್ನವರ ಇವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತಿಸಿಕೊಂಡರು.
ಇವರು 8 ಅಗಸ್ಟ 2003 ರಂದು ಎಂಇಜಿ ಸೆಂಟರ್ (ಮದ್ರಾಸ್ ಇಂಜಿಯರ್ ಗ್ರೂಪ್) ತಮ್ಮ ತರಬೇತಿಯನ್ನು 2 ವರ್ಷ ಮುಗಿಸಿ ಮನ್ನಾಲೆ 14 ರೆಜಿಮೆಂಟ್ ಇಲ್ಲಿ ಸೇವೆಗೆ ಸೇರಿದರು. ನಂತರ ಜಮ್ಮು ಕಾಶ್ಮೀರ, ಲಡಾಕ್,ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ ಎನ್ ಎಸ್ ಜಿ ಕಮಾಂಡೋ ಆಗಿ ಸೇವೆ ಸಲ್ಲಿಸಿದರು.ಹವಾಲ್ದಾರ ರಾ್ಯಂಕ್ ಪಡೆದು ನಿವೃತ್ತರಾಗಿದ್ದಾರೆ.
ನೇಸರಗಿಯ ವೀರಭದ್ರೇಶ್ವರ ಗುಡಿ, ಕರ್ನಾಟಕ ಚೌಕ ಮೂಲಕ ತೆರೆದ ಜೀಪ್ದಲ್ಲಿ ಮೆರವಣಿಗೆ ನಡೆಸಿ ದೇವರಕೊಂಡ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಿತು. ಗ್ರಾಮಸ್ಥರು, ಮಾಜಿ ಸೈನಿಕರು ಸೇರಿಕೊಂಡು ಅವರನ್ನು ಸತ್ಕರಿಸಿ ನಿವೃತ್ತ ಸೈನಿಕರ ಗುಣಗಾನ ಮಾಡಿದರು.