ನಿವೃತ್ತ ಯೋಧನಿಗೆ ಗ್ರಾಸ್ಥರಿಂದ ಅದ್ದೂರಿ ಸ್ವಾಗತ

Retired soldier gets grand welcome from locals

ಲೋಕದರ್ಶನ ವರದಿ 

ನಿವೃತ್ತ ಯೋಧನಿಗೆ ಗ್ರಾಸ್ಥರಿಂದ ಅದ್ದೂರಿ ಸ್ವಾಗತ 

ನೇಸರಗಿ, 02; ಕಳೆದ 22 ವರ್ಷಗಳಿಂದ ಯೋಧನಾಗಿ ಕಾರ್ಯನಿರ್ವಹಿಸಿ ನಿವೃತ್ತನಾಗಿ ಗ್ರಾಮಕ್ಕೆ ಆಗಮಿಸಿದ ಜಗದೀಶ ರುದ್ರ​‍್ಪ ಮಾಳನ್ನವರ ಇವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತಿಸಿಕೊಂಡರು. 

ಇವರು 8 ಅಗಸ್ಟ  2003 ರಂದು ಎಂಇಜಿ ಸೆಂಟರ್ (ಮದ್ರಾಸ್ ಇಂಜಿಯರ್ ಗ್ರೂಪ್) ತಮ್ಮ ತರಬೇತಿಯನ್ನು 2 ವರ್ಷ ಮುಗಿಸಿ ಮನ್ನಾಲೆ 14 ರೆಜಿಮೆಂಟ್ ಇಲ್ಲಿ ಸೇವೆಗೆ ಸೇರಿದರು. ನಂತರ ಜಮ್ಮು ಕಾಶ್ಮೀರ, ಲಡಾಕ್,ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ ಎನ್ ಎಸ್ ಜಿ ಕಮಾಂಡೋ ಆಗಿ ಸೇವೆ ಸಲ್ಲಿಸಿದರು.ಹವಾಲ್ದಾರ ರಾ​‍್ಯಂಕ್ ಪಡೆದು ನಿವೃತ್ತರಾಗಿದ್ದಾರೆ. 

  ನೇಸರಗಿಯ ವೀರಭದ್ರೇಶ್ವರ ಗುಡಿ, ಕರ್ನಾಟಕ ಚೌಕ ಮೂಲಕ ತೆರೆದ ಜೀಪ್‌ದಲ್ಲಿ ಮೆರವಣಿಗೆ ನಡೆಸಿ ದೇವರಕೊಂಡ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಿತು. ಗ್ರಾಮಸ್ಥರು, ಮಾಜಿ ಸೈನಿಕರು ಸೇರಿಕೊಂಡು ಅವರನ್ನು ಸತ್ಕರಿಸಿ ನಿವೃತ್ತ ಸೈನಿಕರ ಗುಣಗಾನ ಮಾಡಿದರು.