ಲೋಕದರ್ಶನ ವರದಿ
ಕೊಪ್ಪಳ : ಹಿರಿಯ ಕೆಎಎಸ್ ನಿವೃತ್ತ ಅಧಿಕಾರಿ ಸಯ್ಯದ್ ಏಜಾಜ್ ಅಹ್ಮದರವರು ಗುರುವಾರ ಕೊಪ್ಪಳಕ್ಕೆ ಬೇಟಿ ನೀಡಿರುವ ಸಂದರ್ಭದಲ್ಲಿ ಲೋಕದರ್ಶನ ಪ್ರಾದೇಶಿಕ ಕನ್ನಡ ದಿನ ಪತ್ರಿಕೆ ಕೊಪ್ಪಳ ಕಾರ್ಯಲಯಕ್ಕೆ ಆಗಮಿಸಿದವರು. ಆಗ ಅವರನ್ನು ಸನ್ಮಾನಿಸಲಾಯಿತು. ಈ ಹಿಂದೆ 1991-92 ರಲ್ಲಿ ಕೊಪ್ಪಳ ತಹಸೀಲ್ದಾರರಾಗಿ, ನಂತರ ಗಂಗಾವತಿ ತಹಶೀಲ್ದಾರರಾಗಿ ಇಲ್ಲಿ ಕಾರ್ಯ ನಿರ್ವಹಿಸಿ ನಂತರ ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ವಿಶೇಷ ಜಿಲ್ಲಾಧಿಕಾರಿಯಾಗಿ ರಾಜ್ಯದ ವಿವಿಧ ಪ್ರಧೇಶದಲ್ಲಿ ಕಾರ್ಯ ನಿರ್ವಹಿಸಿ ಸಚಿವರುಗಳ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.
ಮೂಲತ ಹೊಸಪೇಟೆ ನಗರದ ನಿವಾಸಿಯಾಗಿದ್ದು, ಪವಿತ್ರ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಸಕರ್ಾರದ ಪ್ರತಿನಿಧಿ ಅಧಿಕಾರಿಯಾಗಿ ತರಬೇತಿ ನೀಡಿ ಎಲ್ಲರ ಪ್ರೀತಿಗೆ ಪ್ರಾತರಾದ ಇವರು ನಿವೃತ್ತಿ ನಂತರವು ಹಜ್ ಯಾತ್ರೆಯ ಸಂದರ್ಭದಲ್ಲಿ ಹಜ್ ಯಾತ್ರಿಕರಿಗೆ ವಿಶೇಷ ತರಬೇತಿ ನೀಡುವದರ ಮೂಲಕ ಎಲ್ಲರಿಗೆ ಚಿರ ಪರಿಚಿತ ಮತ್ತು ಜನಪ್ರಿಯರಾಗಿದ್ದಾರೆ. ಅವರು ಕೊಪ್ಪಳ ಭೇಟಿ ನೀಡಿದ ವೇಳೆ ಅವರನ್ನು ಸನ್ಮಾನ ಮಾಡಿದ ಸಂದರ್ಭದಲ್ಲಿ ಲೋಕದರ್ಶನ ಜಿಲ್ಲಾ ವ್ಯವಸ್ಥಾಪಕ ಎಂ. ಸಾದಿಕ್ ಅಲಿ, ರಾಬಿತೆ ಮಿಲ್ಲತ್ ಅಧ್ಯಕ್ಷ ಎಂ. ಲಾಯಕ್ ಅಲಿ, ಗುತ್ತಿಗೆದಾರ ಅಬಜಲ್ ಪಟೇಲ್, ಅಬ್ದುಲ್ ಅಜಿಜಿ ಮಾನವಿಕರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.