ಲೋಕದರ್ಶನ ವರದಿ
ಬೆಳಗಾವಿ 11: ಜಿಲ್ಲಾಧಿಕಾರಿ ಎದುರಿನ ರಸ್ತೆಯ ಸಂಗೊಳ್ಳಿ ರಾಯಣ್ಣ ನಾಮಫಲಕ ಕಿತ್ತೆಸೆದ ಸಮಾಜ ಘಾತುಕರನ್ನು ಕೂಡಲೆ ಪತ್ತೆಹಚ್ಚಿ ಬಂದಿಸಬೇಕೆಂದು ನಿವೃತ್ತ ಎಸ್ಪಿ ಅಶೋಕ ಸದಲಗೆ ಅವರು ಆಕ್ರೋಶ ವ್ಯಕ್ತ ಪಡಿಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನನವಿ ಸಲ್ಲಿಸಿ ಆರ್ಟಿಓ ವೃತ್ತದಿಂದ ಚನ್ನಮ್ಮ ವೃತ್ತದವರೆಗಿನ ರಸ್ತೆ ಸಂಗೊಳ್ಳಿ ರಾಯಣ್ಣ ರಸ್ತೆಯೆಂದೆ ಹಲವು ವರ್ಷಗಳಿಂದ ಹೆಸರಿಸಲಾಗಿದೆ. ಇಂತಹ ರಸ್ತೆಯ ರಸ್ತೆಯ ನಾಮಪಲಕವನ್ನು ಕಿತ್ತು ಕಸದಲ್ಲಿ ಎಸೆಯುವದು ಯಾವ ನ್ಯಾಯ. ಇದರಿಂದ ಕ್ರಾಂತಿವೀರ ರಾಯಣ್ಣನ ಅಭಿಮಾಗಳಿಗೆ ಬಹಳಷ್ಟು ಅವಮಾನವಾಗಿದೆ. ಈ ನಾಮಪಲಕವನ್ನು ತಕ್ಷಣವೇ ಜಿಲ್ಲಾಡಳಿತವು ಮರು ಅಳವಡಿಸಬೇಕು. ಪ್ರಾದೇಶಿಕ ಆಯುಕ್ತರ ಕಚೇರಿಎದುರಿನ ಉದ್ಯಾನವನದಲ್ಲಿ ರಾಯಣ್ಣನ ಮೂತರ್ಿಯನ್ನು ಪ್ರತಿಷ್ಟಾಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಆರ್ಪಿ ಪಾಟೀಲ,ಲಕ್ಕಪ್ಪ ಅಲೋಶಿ, ಮಾಜಿ ಮಹಾಪೌರ ಯಲ್ಲಪ್ಪ ಕುರಬರ, ನಿವೃತ್ತ ಮೇಜರ್ ಗಂಗಾರಾಮ ಬಾಗನ್ನವರ, ಶಂಕರ ಹೆಗಡೆ, ಬಾಬು ಸಾಂಬ್ರೇಕರ, ಯಲ್ಲಪ್ಪ ಉಚಗಾಂವಕರ,ಬಿಎಸ್ ಹಡಗಿನಾಳ, ಹಾಗೂ ಮುಂತಾದವರು ಉಪಸ್ಥಿತರಿದ್ದರು.