ನವದೆಹಲಿ, ಏ 20,ಇ – ಕಾಮರ್ಸ್ ಕಂಪೆನಿಗಳ ಮೂಲಕ ಅನಗತ್ಯ ವಸ್ತುಗಳ ಪೂರೈಕೆಯನ್ನು ಲಾಕ್ ಡೌನ್ ಅವಧಿಯವರೆಗೆ ನಿರ್ಬಂಧಿಸಲಾಗಿದೆ. ಇ – ಕಾಮರ್ಸ್ ಕಂಪೆನಿಗಳು ಅನಗತ್ಯ ವಸ್ತುಗಳ ಮಾರಾಟ ಮಾಡದಂತೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಇ – ಕಾಮರ್ಸ್ ಮೂಲಕ ಅನಗತ್ಯ ವಸ್ತುಗಳ ಪೂರೈಕೆ ನಿರ್ಬಂಧಿಸಲಾಗಿದ್ದು ಅಗತ್ಯ ವಸ್ತುಗಳ ಪೂರೈಕೆ ಮಾಡಬಹುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಬಗ್ಗೆ ಮಾಹಿತಿ ನೀಡಿ ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.