ಸಂಕೇಶ್ವರ ಶಂಕರಲಿಂಗ ಮಠದ ಗತಕಾಲದ ವೈಭವ ಮರುಸ್ಥಾಪನೆ - ಶ್ರೀಗಳ ಪ್ರಯತ್ನ

Restoring the past glory of Sankeshwara Shankaralinga Math - Efforts of Sri

ಸಂಕೇಶ್ವರ ಶಂಕರಲಿಂಗ ಮಠದ ಗತಕಾಲದ ವೈಭವ ಮರುಸ್ಥಾಪನೆ - ಶ್ರೀಗಳ ಪ್ರಯತ್ನ

ಸಂಕೇಶ್ವರ 23 : ಶಂಕರಾಚಾರ್ಯ ಮಠದ ಪ್ರಾಚೀನ ಕಾಲದ ವೈಭವವನ್ನು ಮರಳಿ ಕಣ್ತುಂಬಿಸಲು ಜೀರ್ಣೋದ್ಧಾರ ಕಳೆದ ಒಂದು ತಿಂಗಳಿನಿಂದ ಕಾರ್ಯ ಭರದಿಂದ ನಡೆಯುತ್ತಿದೆ.  ಕಳೆದ 8 ವರ್ಷಗಳಿಂದ  ಮಠದ  ಅಧಿಕಾರವನ್ನು ವಹಿಸಿಕೊಂಡ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು ಕನಾಟಕ ಮಹಾರಾಷ್ಟ್ರದ ಭಾಗಗಳಲ್ಲಿ ಸಂಚರಿಸಿ ಭಕ್ತರು ನೀಡಿದ ದೇಣಿಗೆಯನ್ನು ಸಂಗ್ರಹಿಸಿ ಮಠದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿನಿಯೋಗಿಸುತ್ತಿದ್ದಾರೆ. ಮಠದ ಜಿರ್ಣೋದ್ಧಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.  ಮಠದಲ್ಲಿರುವ ಹನುಮಾನ ಮಂದಿರವನ್ನು ಹೊಸದಾಗಿ ಮರುನಿರ್ಮಾಣ ಮಾಡಿದ್ದಾರೆ.  ನಗಾರಿಖಾನೆ ಇರುವ ದಕ್ಷಿಣಾಯನ ಮೂರ್ತಿಯನ್ನು ಹೊಸದಾಗಿ ನಿರ್ಮಾಣ ಮಾಡಿ ಪ್ರಾಚೀನ ಕಾಲದ ವೈಭವವನ್ನು ಮರು ಸೃಷ್ಟಿಸಿದ್ದಾರೆ.  ಗತಕಾಲದ ಶಿಲ್ಪಕಲೆಯನ್ನು ಪುನರುಜ್ಜೀವನಗೊಳಿಸಿ ಮಠಕ್ಕೆ ಜೀವಕಳೆಯನ್ನು ತುಂಬುತ್ತಿದ್ದಾರೆ.  ಮಠದ ಆವರಣದಲ್ಲಿರುವ ದತ್ತಾತ್ರೇಯ ಮಂದಿರ, ಪಂಚಲಿಂಗೇಶ್ವರ ಮಂದಿರ ಹಾಗೂ ಇನ್ನುಳಿದ ಮಂದಿರದ ಶಿಲ್ಪಗಳಗೆ ಹೊಸರೂಪ ನೀಡುತ್ತಿದ್ದಾರೆ.  ಮಠದ ಮುಖ್ಯ ಪ್ರಾಂಗಣದಲ್ಲಿರುವ ಮೇಲ್ಛಾವಣಿಯಲ್ಲಿ ನವಗ್ರಹದಲ್ಲಿ ನಾಗಶಿಲ್ಪಗಳು ಇದೀಗ ಎದ್ದು ಕಾಣುತ್ತಿದ್ದು, ಮಂದಿರಕ್ಕೆ ಶೋಭೆ ತರುತ್ತಿವೆ.  ಈಗ ಸದ್ಯ ಸುಮಾರು 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮಠದ ಜೀರ್ಣೋದ್ಧಾರ ಕಾರ್ಯಗಳು ಚುರುಕುಗೊಂಡಿವೆ.  ಮಠದ ಹಿಂಬದಿಯಲ್ಲಿ ವಿಶಾಲವಾದ ಅನ್ನಛತ್ರವನ್ನು ನಿರ್ಮಾಣ ಮಾಡಿರುತ್ತಾರೆ.  ಶ್ರೀಗಳ ಕಟ್ಟಪ್ಪಣೆಯಂತೆ ಪ್ರಕಾಶ ಹುದ್ದಾರ, ಸುಹಾಸ ಕುಲಕರ್ಣಿ, ಕಳೆದ 26 ವರ್ಷಗಳಿಂದ ಮಠಕ್ಕೆ ನಿಷ್ಠರಾಗಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿರುವ ಮಠದ ಮ್ಯಾನೇಜರ್ ಅರ್ಜುನ ಅಪ್ಪಾ ಕಾನವಡೆ, ಸಿದ್ಧಿವಿನಾಯಕ ಕುಲಕರ್ಣಿ, ಇವರೆಲ್ಲರೂ ಮಠದ ಆಗುಹೋಗುಗಳನ್ನು ಮತ್ತು ಜೀರ್ಣೋದ್ಧಾರದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.  ಹಿರಣ್ಯಕೇಶಿ ನದಿ ದಡದಲ್ಲಿರುವ ಶ್ರೀ ಶಂಕರಾಚಾರ್ಯ ಮಠವು ಇನ್ನು ಬಹಳ ಪ್ರಸಿದ್ಧಿಯನ್ನು ಪಡೆಯಲಿದೆ.  ಶ್ರೀ ಶಂಕರಾಚಾರ್ಯ ಸ್ವಾಮಿಗಳು ತಮ್ಮ 32 ನೇ ವಯಸ್ಸಿನಲ್ಲಿ ದೇಶವನ್ನು ಸುತ್ತಿ ಧರ್ಮಬೋಧನೆ ಮತ್ತು ಸಂಸ್ಕೃತಿಯನ್ನು ಸಾರಿದರು.  ಕೊನೆಗೆ ನಿಸರ್ಗದಲ್ಲಿಯೇ ತಮ್ಮ ತಪೋಶಕ್ತಿಯಿಂದ ಐಕ್ಯ ಹೊಂದಿದರು.  ಹಿರಣ್ಯಕೇಶಿ ನದಿದಡದಲ್ಲಿ  ಮಠದ ಕಲ್ಯಾಣಸೇವಕ ಮಹಾರಾಜರು, ಜೀವಂತ ಸಮಾಧಿ ಪಡೆದುಕೊಂಡಿರುವ ದೇವಗೋಸಾವಿ ಸ್ವಾಮಿಜೀಗಳು ಯರಂಡೆ ಸ್ವಾಮಿಗಳು ತಪೋನಿಧಿಯಿಂದ ಈ ಸ್ಥಳವನ್ನು ಪಾವನಗೊಳಿಸಿದವರು.  ರವಿವಾರ ದಿನಾಂಕ: 22 ರಂದು ಎಲ್ಲ ನದಿಗಲ್ಲಿ, ಮಠಗಲ್ಲಿ, ಹರಗಪೂರ ಓಣಿ, ಹಳೆಯ ಊರಿನ ಎಲ್ಲ ಯುವಕರು ಇಡೀ ದಿನ ಮಠದಲ್ಲಿ ಜೀರ್ಣೋದ್ಧಾರ ಕಾರ್ಯವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶ್ರಮದಾನ ಮಾಡಿದರು.  ಶ್ರೀಪಾದ ಉಪಾಧ್ಯೆ, ಅಮೊಲ ಹೆಬ್ಳೇಕರ, ಅಶೋಕ ಮುಡಶಿ, ವಿರುಪಾಕ್ಷ ಮಲಕಟ್ಟಿ, ಪಿಂಟು ಗಡಕರಿ, ಗಣಪತಿ ಪಾಟೀಲ, ಸಚಿನ ಇಂಗಳೆ, ಸೊನು ಬೆಳವಿ, ಅನಿಲ ಅಮ್ಮಣಗಿ, ಶಾಮ ಯಾದವ, ಸಂತೋಷ ಮಗದುಮ, ಪ್ರಲ್ಹಾದ ಕರ್ದೆಗೌಡ, ಜಯಪ್ರಕಾಶ ಸಾವಂತ. ಮನೋಜ ದೇಸಾಯಿ, ಆಕಾಶ ಖಾಡೆ, ಅವಿನಾಶ ನಲವಡೆ, ಅಜಿತ ಸಂಸುದ್ಧಿ, ಅಶೋಕ ಪಾಟೀಲ, ಸುಹಾಸ ಕುಲಕರ್ಣಿ, ತಮ್ಮಣ್ಣ ಗಾಡವಿ, ಸಿ.ಎ.ಪಾಟೀಲ, ಸಂದೀಪ ಶಿಂದೆ, ಕುಮಾರ ಸಂಸುದ್ಧಿ, ಆರ್‌.ಎಸ್‌.ಎಸ್‌. ಜನಸಂಘದ ಸೇವಕರು, ಅಯ್ಯಪ್ಪ ಸ್ವಾಮಿಯ ಭಕ್ತರು ಮಾಲಧಾರಿಗಳು, ಈ ಕಾರ್ಯದಲ್ಲಿ ತೊಡಿಗಿದ್ದರು.  ಸಂಕೇಶ್ವರ ಸ್ವಚ್ಛತಾ ಅಭಿಯಾನದವರಿಗೆ ಈ ದೇಗುಲದಲ್ಲಿ ಶ್ರಮದಾನ ಮಾಡಲು ಕೇಳಿದಾಗ ಕೆಲ ಸ್ವಚ್ಛತಾ ಅಭಿಯಾನದ ಕಾರ್ಯಕರ್ತರು ತಮ್ಮನ್ನು ಮುನಸಿಪಾಲ್ಟಿಯ ನೌಕರರೆಂದು ತಿಳಿದುಕೊಂಡಿದ್ದೀರಿ ಅಂತಾ ಮನಸ್ಸಿಗೆ ಘಾಸಿಯಾಗುವ ಮಾತುಗಳು ಕೇಳಿಬಂದವು.  ಮತ್ತು ಮಹತ್ವದ ವ್ಯಕ್ತಿಗೆ ಕೇಳಿದಾಗ ಈಗಾಗಲೇ ಶೆಡೂಲ್ ಫಿಕ್ಸ್‌ ಆಗಿರುತ್ತದೆ ಅಂತಾ ಹೇಳಿದರು.  ಈ ಸ್ವಚ್ಛತಾ ಅಭಿಯಾನದ ರೂವಾರಿಗಳಾದ ನಿಡಸೋಸಿ ಮಠದ ಉತ್ತರಾಧಿಕಾರಿಗಳಾದ ಶ್ರೀ ನಿಜಲಿಂಗೇಶ್ವರ ಮಹಾಸ್ವಾಮಿಗಳಿಗೆ ಶಂಕರಲಿಂಗ ಮಠದ ಶ್ರೀಗಳು ದೂರವಾಣಿ ಮುಖಾಂತರ ಶ್ರೀಗಳಿಗೆ ಇಲ್ಲಿ ಸ್ವಚ್ಛತಾ ಅಭಿಯಾನದ ತಂಡವನ್ನು ಕಳುಹಿಸಿಕೊಡಲು ವಿನಂತಿಸಿದ್ದರು.ಸಂಕೇಶ್ವರ ( ವರದಿ: ಎಂ.ಬಿ.ಘಸ್ತಿ ) 

ಸ್ಥಳೀಯ ಹಿರಿಯ ಸಹಕಾರಿ ಸಂಸ್ಥೆ ದಿವಾಳಿ ಅಂಚಿನಲ್ಲಿ ?ಇಲ್ಲಿಯ ಅತ್ಯಂತ ಹಳೆಯ ಸಹಕಾರಿ ಸಂಸ್ಥೆಯು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು, ಅಲ್ಲಿಯ ಠೇವುದಾರರು, ತಮ್ಮ ಠೇವುಗಳನ್ನು ವಾಪಸ್ಸು ಪಡೆಯಲು ಹರಸಾಹಸ ಮಾಡುತ್ತಿದ್ದಾರೆ.  ಈಗ ಅಲ್ಲಿ ಎಸ್‌.ಬಿ.ಖಾತೆ ಠೇವು ಇಟ್ಟಂಥ ಗ್ರಾಹಕರು ಅಲ್ಲಿ ಹಣ ವಾಪಸ್ಸು ಕೇಳಿದರೆ, ಹಣ ಸಿಗುತ್ತಿಲ್ಲ ಲಕ್ಷಾಂತರ ರೂಪಾಯಿಗಳಿದ್ದರೆ, 2 ಸಾವಿರ 5 ಸಾವಿರಗಳ ವರೆಗೆ ಮರಳಿ ನೀಡುತ್ತಿದ್ದಾರೆ.  ಇದರಿಂದ ಠೇವುದಾರರು ಕಂಗಾಲಾಗಿದ್ದಾರೆ. ಅಲ್ಲಿಯ ಚೇರಮನ್ ಮತ್ತು ಎಲ್ಲ ನಿರ್ದೇಶಕರು ಸೇರಿ ನಗರದಲ್ಲಿರುವ ದೊಡ್ಡ ದೊಡ್ಡ ಸಹಕಾರಿ ಸಂಸ್ಥೆಗಳಲ್ಲಿ ಭೇಟಿ ನೀಡಿ ತಮ್ಮ ಸಹಕಾರಿ ಸಂಸ್ಥೆಗೆ ಠೇವಿನ ನೆರವು ನೀಡಬೇಕೆಂದು ವಿನಂತಿಸಿದರೂ ಯಾರಾದರೂ ಮುಂದೆ ಬಂದು ಈ ಸಂಸ್ಥೆಯ ಆರ್ಥಿಕ ಮುಗ್ಗಟ್ಟಿಗೆ ಸಹಕಾರ ನೀಡುತ್ತಿಲ್ಲವೆಂದು ತಿಳಿದು ಬಂದಿದೆ.  ನಗರದ ಜನತೆ ಸಹಕಾರಿ ಸಂಸ್ಥೆಗಳಲ್ಲಿ ಠೇವು ಇಡಲು ನೂರು ಬಾರಿ ವಿಚಾರ ಮಾಡುವಂತಾಗಿದೆ.