ತಾಳಿಕೋಟಿ 13: ಕಳೆದ 22 ತಿಂಗಳಿನಿಂದ ಪುರಸಭೆ ವಿಷಯ ನ್ಯಾಯಾಲಯದ ವ್ಯಾಪ್ತಿಗೆ ಹೋಗಿದ್ದರಿಂದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ. ಈಗ ಆಡಳಿತ ಮಂಡಳಿ ರಚನೆಯಾಗಿದ್ದು ನಿಮಗೆ ಕೇವಲ ಏಳೆಂಟು ತಿಂಗಳುಗಳ ಸೇವಾ ಅವಕಾಶ ಸಿಕ್ಕಿದೆ ಇದರಲ್ಲಿ ಪಟ್ಟಣದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಸಕ್ತಿಯಿಂದ ಕೆಲಸ ಮಾಡಿ ಎಂದು ಪುರಸಭೆ ಮಾಜಿ ಸದಸ್ಯ ವಿಜಯಸಿಂಗ್ ಹಜೇರಿ ಹೇಳಿದರು.
ಗುರುವಾರ ಪಟ್ಟಣದ ಪುರಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಪ್ರತಿಮಾಸಕ್ಕೊಮ್ಮೆ ಸಭೆಗಳನ್ನು ನಡೆಸಿ ಎಲ್ಲ ವಾರ್ಡಿನ ಸದಸ್ಯರಿಂದ ಅವರ ಸಮಸ್ಯೆಗಳನ್ನು ತಿಳಿದುಕೊಂಡು ಕ್ರಿಯಾಯೋಜನೆ ರೂಪಿಸಿ ಕೆಲಸ ಮಾಡಿ ನಿಮ್ಮಲ್ಲಿ ಅನುಭವಿ ಸದಸ್ಯರಿದ್ದಾರೆ ಅವರಿಂದ ಪ್ರಯೋಜನ ಪಡೆಯಿರಿ, ನೀವು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದರೆ ಶಾಸಕರಿಗೂ ಒಳ್ಳೆಯ ಹೆಸರು ಬರುತ್ತದೆ ಎಂದರು. ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಹಾಗೂ ಹಾಲಿ ಸದಸ್ಯ ಪರಶುರಾಮ ತಂಗಡಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ನಾವದಗಿ,ಪುರಸಭೆ ಮಾಜಿ ಉಪಾಧ್ಯಕ್ಷ ಮಾಸೂಮಸಾಬ ಕೆಂಭಾವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ, ಸಿಕಂದರ್ ವಠಾರ,ಅಬ್ದುಲ್ ಸತ್ತಾರ ಅವಟಿ,ಹುಸೇನ್ ಜಮಾದಾರ, ಸಿಕಂದರ ಡೋಣಿ, ಮೋದೀನಸಾ, ಮೆಹಬೂಬಶಾ ಮಕಾಂದಾರ, ಆಸಿಫ್ ಕೆಂಬಾವಿ, ಪುರಸಭೆ ಸದಸ್ಯರಾದ ಮುತ್ತಪ್ಪ ಚಮಲಾಪೂರ, ಯಾಸೀನ ಮಮದಾಪೂರ, ಮುದುಕಪ್ಪ ಬಡಿಗೇರ, ನಿಂಗಣ್ಣ ಕುಂಟೋಜಿ, ಮುಖ್ಯ ಅಧಿಕಾರಿ ಮೋಹನ ಜಾಧವ ಹಾಗೂ ಸಿಬ್ಬಂದಿಗಳು ಇದ್ದರು.