ಅಮೆರಿಕದಲ್ಲೂ ಉಸಿರಾಟದ ತೊಂದರೆ: ಮೃತರ ಸಂಖ್ಯೆ 42ಕ್ಕೆ ಏರಿಕೆ

ವಾಷಿಂಗ್ಟನ್, ನ, 15 :     ದೆಹಲಿಯಲ್ಲಿ ವಾಯು  ಮಾಲಿನ್ಯ ವಿಪರೀತದ ಮಟ್ಟಕ್ಕೆ ಹೋಗಿರುವಾಗಲೆ  ಅತ್ತ ದೂರದ  ಅಮೆರಿಕದಲ್ಲೂ   ಉಸಿರಾಟದ ತೊಂದರೆ ,  ಕಾಯಿಲೆಗಳಿಂದ ಮೃತಪಟ್ಟವರ   ಸಂಖ್ಯೆ 42 ಕ್ಕೆ ಏರಿದೆ.  ಶ್ವಾಸಕೋಶದ ಗಾಯಗಳ ಸುಮಾರು 2,200 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ತಿಳಿಸಿದೆ.  ಇದೆ  13 ರವರೆಗೆ  24 ರಾಜ್ಯಗಳಲ್ಲಿ 42 ಸಾವುಗಳು ದೃಡಪಟ್ಟಿದೆ ಎಂದು ಸಂಸ್ಥೆ ಗುರುವಾರ ತನ್ನ ಸಾಪ್ತಾಹಿಕ ವರದಿಯಲ್ಲಿ ಹೇಳಿದೆ.  ಮೃತ ರೋಗಿಗಳ ಸರಾಸರಿ ವಯಸ್ಸು 17 ರಿಂದ 75 ವರ್ಷಗಳು ಎಂದು ಸಿಡಿಸಿ ವರದಿ ತಿಳಿಸಿದೆ. ನವೆಂಬರ್ 13 ರ ವೇಳೆಗೆ ಕೊಲಂಬಿಯಾ ಪ್ರದೇಶದಿಂದ ಸುಮಾರು 2,172 ಶ್ವಾಸಕೋಶದ ಗಾಯದ ಪ್ರಕರಣಗಳೂ ಸಹ  ವರದಿಯಾಗಿದೆ.  ಶೇಕಡ  64 ಪ್ರತಿಶತ ಜನರು ನಿಕೋಟಿನ್ ಹೊಂದಿರುವ ಉತ್ಪನ್ನಗಳನ್ನು ಬಳಸುತ್ತಿದ್ದಾರೆಂದು ವರದಿ ಮಾಡಿದೆ.