ಲೋಕದರ್ಶನ ವರದಿ
ಅಂಕೋಲಾ : ಸವಾಲುಗಳ ಮಧ್ಯೆ ವೃತ್ತಿ ನಿರ್ವಹಿಸುವ ವೈದ್ಯರನ್ನು ಗೌರವಿಸುವ ಪರಂಪರೆ ಶ್ಲಾಘನೀಯ. ಇದು ವೈದ್ಯರ ಮನೋಬಲವನ್ನು ವೃದ್ದಿಸುತ್ತದೆ ಎಂದು ತಾ.ಪಂ ಅಧ್ಯಕ್ಷೆ ಸುಜಾತಾ ಗಾಂವಕರ್ ನುಡಿದರು.
ಅವರು ಭಾನುವಾರ ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಜೇನುಗೂಡು ಯುಥ ವಾಟ್ಸಪ್ ಗ್ರೂಪ್ ಏರ್ಪಡಿಸಿದ್ದ ವೈದ್ಯರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದ್ಯರು ನಮಗೆ ಜೀವ ಉಳಿಸುವ ದೇವರು. ಸಂಕಷ್ಟ ಕಾಲದಲ್ಲಿ ಅವರು ನೀಡುವ ನೆರವು ಅಮೂಲ್ಯ ವಾದುದು. ಇಂಥಹ ವೈದ್ಯರಿಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.
ಅಂಕೋಲಾ ಸರಕಾರಿ ಆಸ್ಪತ್ರೆ ಇಂದು ಉತ್ತಮ ವೈದ್ಯರು ಮತ್ತು ಸೌಲಭ್ಯಗಳಿಂದ ಜನಸಾಮಾನ್ಯರಿಗೆ ವರದಾ ನವಾಗಿದೆ. ವೈದ್ಯರನ್ನು ಗೌರವಿಸಿದ ಜೇನುಗೂಡು ವಾಟ್ಸಪ್ ಗ್ರೂಪ್ ಕಾರ್ಯ ಶ್ಯಾಘನೀಯ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಸ್ಥ ಸಮಾಜ ನಿಮರ್ಾಣ ಮುಖ್ಯ ಅತಿಥಿಯಾಗಿದ್ದ ವರದಿಗಾರ ವಿಠ್ಠಲದಾಸ ಕಾಮತ್ ಮಾತನಾಡಿ ಜು.1 ವೈದ್ಯರ ಮತ್ತು ಪತ್ರಕರ್ತರ ದಿನವಾಗಿರುವುದು ಅರ್ಥಪೂರ್ಣ. ಮನುಷ್ಯನ ದೇಹಕ್ಕೆ ಚಿಕಿತ್ಸೆ ನೀಡುವ ವೈದ್ಯ ಮತ್ತು ಸಮಾಜಕ್ಕೆ ಚಿಕಿತ್ಸೆ ನೀಡುವ ಪತ್ರಕರ್ತ ಪ್ರಾಮಾಣಿಕ ಕಾರ್ಯ ಮಾಡಿದರೆ ಸ್ವಸ್ಥ ಸಮಾಜ ನಿಮರ್ಾಣ ಸಾಧ್ಯವಾಗಲಿದೆ ಎಂದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ, ಮಹೇಂದ್ರ ನಾಯಕ ವೈದ್ಯರ ದಿನಾಚರಣೆ ಮಹತ್ವ ಮತ್ತು ಪ್ರಾಥಮಿಕ ಚಿಕಿತ್ಸೆಯ ಅಗತ್ಯತೆ ತಿಳಿಸಿದರು. ವರದಿಗಾರ ರಾಘು ಕಾಕರಮಠ ಅಂಕೋಲಾ ಆಸ್ಪತ್ರೆಯ ವೈದ್ಯರ ಸೇವೆ ಯನ್ನು ಶ್ಲಾಘಿಸಿದರು.
ಡಾ. ಈಶ್ವರಪ್ಪ, ಆಯುಷ್ ವೈದ್ಯೆ ಡಾ. ಸೌಮ್ಯ, ಜೇನುಗೂಡು ವಾಟ್ಸಪ್ ಗ್ರೂಪ್ ಅಧ್ಯಕ್ಷ ವಿಶಾಲ ಬಂಟ್ ಉಪಸ್ಥಿತರಿದ್ದರು. ಆನಂದ ಕಟ್ಟಿಮನಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವೈದ್ಯರ ದಿನಾಚರಣೆ ನಿಮಿತ್ತ ವೈದ್ಯರಿಗೆ ಸಸಿಯನ್ನು ನೀಡಿ ಗೌರವಿಸಲಾಯಿತು.