ಗುರು ಹಿರಿಯರನ್ನು ಗೌರವದಿಂದ ಕಾಣುವುದೇ ಸುಸಂಸ್ಕೃತಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಳಿಗಾರ

ಲೋಕದರ್ಶನ ವರದಿ

ಶಿರಹಟ್ಟಿ 25: ಹಿಂದಿನ ಕಾಲದಲ್ಲಿ ಬಡತನದ ಬೇಗೆಯಲ್ಲಿ ಸಾಕಷ್ಟು ಜನರು ಪರದಾಡುತ್ತಾ ವಿದ್ಯಾವಂತರಾಗದೆಯೇ ಅವಿದ್ಯಾವಂತರಾಗಿ ನಿರುದ್ಯೋಗ ಸಮಸ್ಯೆಗಳು ಅವಿಭಕ್ತ ಕುಟುಂಬದಲ್ಲಿ ಇದ್ದರೂ ಪ್ರೀತಿ ವಾತ್ಸಲ್ಯ, ಮಮಕಾರ ಸಂಪ್ರದಾಯಗಳು ಆಚಾರ ವಿಚಾರಗಳು ತುಂಬಿ ತುಳುಕುತ್ತಿದ್ದವು. ಆದರೆ ಈಗಿನ ಕಾಲದಲ್ಲಿ ಗುರು ಹಿರಿಯರನ್ನು ಗೌರವದಿಂದ ಕಾಣುವುದು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುವುದು ಎಲ್ಲವು ಮಾಯವಾಗಿದೆ. ತಾಯಿ ಮಕ್ಕಳ ಸಂಬಂಧ ಎನ್ನುವುದು ಬೇರೆ ಬೇರೆ ರೀತಿಯಲ್ಲಿ ಕಾಣುತ್ತಾರೆ ಗುರು ಹಿರಿಯರನ್ನು ಗೌರವದಿಂದ ಕಾಣುವುದೇ ನಮ್ಮ ದೇಶದ ಸುಸಂಸ್ಕೃತಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್ಪಿ ಬಳಿಗಾರ ತಿಳಿಸಿದರು.

ಅವರು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಸಭಾ ಭವನದಲ್ಲಿ ಧಾಮರ್ಿಕ ಪೂಜೆ, ವರಮಹಾಲಕ್ಷ್ಮೀ ಪೂಜೆ ಮತ್ತು ಮಾತೃ ವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

   ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಜಿಲ್ಲಾ ನಿದರ್ೇಶಕ ಶಿವಾನಂದ ಆಚಾರ್ಯ ಮಾತನಾಡಿ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು ಅನೇಕ ದೇವಸ್ಥಾನಗಳ ಜೀಣರ್ೋದ್ಧಾರಕ್ಕೆ ಸಹಾಯ ಮಾಡಿದ್ಧಾರೆ. ಈಗಾಗಲೇ ಸುಮಾರು 75 ಕೆರೆಗಳನ್ನು ಹೂಳೆತ್ತಲಾಗಿದೆ. ಅಂತೆಯೇ ತಾಯಿ ಮಗುವಿನ ಸಂಬಂಧ ಗಟ್ಟಿಯಾಗಲು ಮಾತೃ ವಂದನಾ ಪೂಜಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಸರಿಯಾಗಿ ಮಳೆ ಬೆಳೆ ಬರಲಿ ತಾಯಿ ಮಕ್ಕಳ ಸಂಬಂಧ ಗಟ್ಟಿಯಾಗಲು ಒಳ್ಳೆ ಮನಸ್ಸಿನಿಂದ ಧಾಮರ್ಿಕ ಪೂಜೆ, ವರಮಹಾಲಕ್ಷ್ಮೀ ಪೂಜೆ ಮತ್ತು ಮಾತೃ ವಂದನಾ ಪೂಜೆಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಯೋಜನಾಧಿಕಾರಿ ಶಿವಣ್ಣ ಎಸ್. ಮಾತನಾಡಿ ಶಿಗ್ಲಿ ಗ್ರಾಮ ಧರ್ಮ ಬೇದವಿಲ್ಲದೇ 350ಕ್ಕೂ ಹೆಚ್ಚು ತಾಯಂದಿರ ಪೂಜೆಯನ್ನು ತನ್ನ ಮಕ್ಕಳು ಮಾಡಿದ್ದು ತಾಯಿ ಶಾಖಾಂಬರಿದೇವಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮಕ್ಕೆ ಉತ್ತಮ ಮಳೆ ಬೆಳೆಯಾಗುತ್ತದೆ. ವೃದ್ದಾಪ್ಯ ಸಂದರ್ಭದಲ್ಲಿ ತಾಯಿಯನ್ನು ಮಗುವಿನಂತೆ ಕಾಣಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ತಹಶಿಲ್ದಾರ ಭ್ರಮರಾಂಬ ಗುಬ್ಬಿಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಮುದಗಲ್, 950ಕ್ಕೂ ಹೆಚ್ಚು ಗ್ರಾಮಸ್ಥರು, ನಾಗರತ್ನಾ ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.