ಲೋಕದರ್ಶನ ವರದಿ
ಯಲಬುರ್ಗಾ 23: ಕೃಷಿ ಮತ್ತು ರೈತರಿಗೆ ಸಾಕಷ್ಟು ಸಮಸ್ಯೆಗಳಿದ್ದು, ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಅನ್ನ ನೀಡುವ ನಾಡಿನ ರೈತರನ್ನು ಪ್ರತಿಯೊಬ್ಬರೂ ಗೌರವಿಸಬೇಕು ರೈತರ ಸಮಸ್ಯೆಗಳಿಗೆ ಗಟ್ಟಿ ದನಿಯಾದ ಮಾಜಿ ಪ್ರಧಾನಿ ಚೌಧರಿ ಚರಣ್ ಜನ್ಮದಿನ ಸಿಂಗ್ ಶಾಸ್ತ್ರಿ ಇವರ ಹುಟ್ಟು ಹಬ್ಬವನ್ನು ದೇಶವು ರೈತರ ದಿನವಾಗಿ ಆಚರಿಸುವ ಮೂಲಕ ಸದಾ ಸ್ಮರಣೀಯರನ್ನಾಗಿಸಿದೆ ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತನೇ ಬೆನ್ನೆಲುಬಾಗಿದ್ದು ಅವರ ಶ್ರಮಕ್ಕೆ ಗೌರವ ಮತ್ತು ಸಿಗಬೇಕಾಗಿದೆ ಎಂದು ತಾಪಂ ಉಪಾಧ್ಯಕ್ಷರಾದ ವಿಶ್ವನಾಥ ಮರಿಬಸಪ್ಪನವರು ಹೇಳಿದರು.
ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ 2019-2020ನೇ ಸಾಲಿನಲ್ಲಿ ಮಣ್ಣು ಆರೋಗ್ಯ ಅಭಿಯಾನದಡಿ ತಾಲೂಕು ಮಟ್ಟದ ರೈತರ ದಿನಾಚರಣೆ ಕಾರ್ಯಕ್ರಮ ಜರುಗಿತು.
ನಂತರ ಮಾತನಾಡಿ ಸಹಾಯಕ ಕೃಷಿ ನಿರ್ದೇಶಕರಾದ ಶರಣಪ್ಪ ಗುಂಗಾಡಿ ವರ್ಷ ಪೂರ್ತಿ ಹೊಲದಲ್ಲಿ ದುಡಿದ ಹಣವನ್ನು ದುಂದುವೆಚ್ಚ ಮಾಡದೇ ಯೋಗ್ಯ ಕೃಷಿ ಚಟುವಟಿಕೆಗೆ ಪುನ ಉಪಯೋಗಪಡಿಸಿಕೊಳ್ಳುವ ಮೂಲಕ ಒಳ್ಳೆಯ ಬೆಳೆ ಬೆಳೆದು ಉತ್ತಮ ಲಾಭ ಗಳಿಸಬೇಕು. ರೈತರಿಗೆ ನೀಡುವ ಬಹುಮಾನ ಮೊತ್ತಕ್ಕೆ ಲೆಕ್ಕವಲ್ಲ ಉತ್ತೇಜನದಿಂದ ಬೆಳೆಯಲು ಪ್ರೇರಣೆ ಸಿಗುತ್ತದೆ ಜಾತಿ-ಧರ್ಮ, ರಾಜಕೀಯ, ಸಿನಿಮಾ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಚಚರ್ೆ ವಾದಕ್ಕಿಳಿದು ವೈಯಕ್ತಿಕ ನಿಂದನೆಗೂ ಗುರಿಯಾಗುತ್ತಿದೆ ಆದರೆ ದೇಶದಲ್ಲಿ ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ವಿಚಾರಗಳ ಬಗ್ಗೆ ಆಲೋಚನೆ ಮಾಡುವುದನ್ನೇ ಮರೆತಿದ್ದಾರೆ. ಸಮಾಜದಲ್ಲಿ ಬೇರೂರಿರುವ ಇಂತಹ ಹಲವಾರು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತದ ಯುವಜನರು ಬೇಜವಾಬ್ದಾರಿ ಮನೋಭಾವ ತಳೆಯುತ್ತಿರುವುದು ಸರಿಯಲ್ಲ ಎಂದರು.
ಈ ಸಂಭರ್ದದಲ್ಲಿ ಜಿಪಂ ಸದಸ್ಯರಾದ ಗಂಗಮ್ಮ ಗುಳಗಣ್ಣನವರು, ತಾಪಂ ಅಧ್ಯಕ್ಷರಾದ ಲಕ್ಷ್ಮೀ ದ್ಯಾಮಪ್ಪ ಗೌಡ್ರ, ಪಪಂ ಸದಸ್ಯರಾದ ರೇವಣಪ್ಪ ಕುರಬರ, ಮಾಜಿ ಜಿಪಂ ಸದಸ್ಯರಾದ ಈರಪ್ಪ ಕುಡಗುಂಟಿ, ತಾಪಂ ಸದಸ್ಯ ಶಂಕರಗೌಡ್ರ, ರಸೂಲಸಾಬ ದಮ್ಮೂರ್, ಪರಸಪ್ಪ ಬಲಕುಂದಿ, ಸುರೇಶ ಚವಡಿ, ಮಾಜಿ ಗ್ರಾಪಂ ಅಧ್ಯಕ್ಷರಾದ ಸುಮಿತ್ರಾ ಬಡಗೇರ್,ಯಂಕಪ್ಪ ಶರಣಪ್ಪ ಪಾಟೀಲ್,ಹಾಗೂ ತಾಪಂ ಇಒ ಅಧಿಕಾರಿ ನಿಂಗನಗೌಡ್ರ ಹಾಗೂ ಇತರರು ಇದ್ದರು. ಉಪನ್ಯಾಸಕರು ಡಾ.ಬದ್ರಿ ಪ್ರಸಾದ, ಬೀಮಣ್ಣ ಹವಳಿ ಕಾರ್ಯಕ್ರದ ನಿರೂಪಣೆ ಮಾಡಿದರು.