ಮಾನವ ಸಂತತಿ ಉಳಿಸುತ್ತಿರುವ ವಾರಿಯಸ್೯ ಗೌರವಿಸಿ

ಹರಪನಹಳ್ಳಿ,ಮೇ,19- ದೇಶಕ್ಕೆ ಕಂಠಕವಾಗಿ ಕಾಡುತ್ತಿರುವ ಮಹಾಮಾರಿ ಕೊರಾನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಈ ಸೋಂಕು ತಡೆಗಟ್ಟಲು ಅವಿರತವಾಗಿ ಶ್ರಮಿಸುವ ಮೂಲಕ ಮಾನವ ಸಂತತಿ ಉಳಿವಿಗೆ ಹೋರಾಡುತ್ತಿರುವ ಕೊರೊನಾ ವಾರಿಯಸ್ರ್ಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಕೆಪಿಸಿಸಿ ರಾಜ್ಯ ಮಹಿಳಾ ಕಾರ್ಯದಶರ್ಿ ಎಂ.ಪಿ.ಲತಾ ಮಲ್ಲಿಕಾಜರ್ುನ್ ಹೇಳಿದರು. 

      ಪಟ್ಟಣದ ಹಳೇ ಸಾರ್ವಜನಿಕರ ಆಸ್ಪತ್ರೆಯಲ್ಲಿ ಮಂಗಳವಾರ ಎಂ.ಪಿ.ರವೀಂದ್ರ ಪ್ರತಿಷ್ಠಾನದಿಂದ ಏರ್ಪಡಿಸಲಾಗಿದ್ದ ಆಶಾ ಕಾರ್ಯಕತರ್ೆಯರಿಗೆ ಹಾಗೂ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂಧಿಗಳಿಗೆ ಆಹಾರ ಕಿಟ್ ಮತ್ತು ಸುರಕ್ಷಾ ಸಾಧನಾಗಳನ್ನು  ವಿತರಿಸಿದ ಅವರು ಮಾತನಾಡಿದರು. 

  ಕಳೆದ ಒಂದು ವಾರದಿಂದ ಪ್ರತಿಯೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ತೆರಳಿ ಅಂಗನವಾಡಿ, ಆಶಾ ಮತ್ತು ಎಎನ್ಎಂ ಕಾರ್ಯಕರ್ತರಿಗೆ ಲಂಚ್ ಬಾಕ್ಸ್, ಮಾಸ್ಕ್, ಪ್ಯಾಡ್ ವಿತರಿಸಲಾಗುತ್ತಿದೆ. ಕೊರೊನಾ ವಾರಿಯಸ್ರ್ಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಿರಂತರವಾಗೊ ಹೋರಾಟ ನಡೆಸುತ್ತಿದ್ದಾರೆ. ಇವರ ಸೇವೆಯನ್ನು ಪ್ರತಿಯೊಬ್ಬರೂ ಮರೆಯಬಾರದು, ಅವರ ಕರ್ತವ್ಯಕ್ಕೆ ಗೌರವ ಕೊಡುವ ಕೆಲಸವನ್ನು ಮಾಡಬೇಕು. ನಿಮ್ಮ ಜೊತೆಗೆ ನಾವಿದ್ದೇವ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು. 

ಕೊರೊನಾ ಹೋಗಲಾಡಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಸಾಮಾಜಿಕ ಅಂತರ ಕಾಯದುಕೊಳ್ಳವುದೇ ಅತಿ ಮುಖ್ಯವಾಗಿದೆ. ಲಾಕ್ಡೌನ್ ಸಡಿಲವಾಗಿದೆಂದು ಎಲ್ಲೆಂದರಲ್ಲಿ ಸುತ್ತಾಡಬಾರದು. ಅದಿಕಾರಿಗಳ ನಿದರ್ೆಶವನ್ನು ಪಾಲಿಸಬೇಕು. ಪ್ರತಿಯೊಬ್ಬರೂ ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸ ಹೊರಬರಬೇಕು ಎಂದು ಸಲಹೆ ನೀಡಿದರು.   ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಶಿವಕುಮಾರ್, ಪಟ್ಟಣದ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಟಿ.ಹೆಚ್.ಎಂ.ಮಂಜುನಾಥ್, ನಿದರ್ೆಶಕ ಎಂ.ವಿ.ಕೃಷ್ಣ, ಮತ್ತೂರು ಮುಖಂಡರಾದ ಡಿ.ರಾಜಕುಮಾರ್, ಅಡವಿಹಳ್ಳಿ ದಕ್ಷಿಣಮೂತರ್ಿ, ಮಟ್ಟೇರ ಮುತ್ತಣ್ಣ,  ಓ.ಮಹಾಂತೇಶ್, ಉದಯಶಂಕರ್, ಮತ್ತೂರು ಬಸವರಾಜ್, ರಾಜು ಪೂಜಾರ್, ರಾಯದುರ್ಗ ವಾಗೇಶ್, ಕವಿತಾ ಸುರೇಶ್, ಉಮಾಮಹೇಶ್ವರಿ, ಎನ್.ಶಂಕರ್, ಆನಂದ, ಟಿ.ಗುರು, ವೀಕ್ರಂ, ರವಿಕುಮಾರ್ ಇತರರು ಇದ್ದರು.