ಸೈನಿಕರಿಗೆ ಗೌರವ ನೀಡುವುದು, ನಮಗೂ ಗೌರವ

ಲೋಕದರ್ಶನ ವರದಿ

ಅಥಣಿ 29:  ದೇಶ ಸಧೃಡವಿದ್ದರೆ, ನಾವು ಸಹ ಬಲಿಷ್ಠರುರೈತರು ಹಾಗೂ ದೇಶಕಾಯುವ ಸೈನಿಕರು ಪ್ರತಿಯೋಬ್ಬರೂ ಗೌರವಸ್ಥರು. ಅವರಿಗೆ ಗೌರವ ನೀಡುವುದಾಗಲಿ ಸನ್ಮಾನ ಮಾಡುವುದಾಗಲಿ ನಮಗೆ ಹೆಮ್ಮೆ. ಕಾರಣ ಸೈನಿಕರಿಗೆ ಗೌರವ ಸಲ್ಲಿಸಿಸುವುದು ಅಭಿಮಾನವೆನುಸುತ್ತದೆ ಎಂದು ಹಿರಿಯ ವೈದ್ಯರುಡಾ ಪಿ.ಪಿ.ಮಿರಜ ಮಾತನಾಡಿದರು.

ಸ್ಥಳಿಯ ಡಾಲ್ಪಿನ್ ಸೈನಿಕ ತರಬೇತಿಕೆಂದ್ರದ ವತಿಯಿಂದ ಹೊಸದಾಗಿ ಸೇನೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶೇಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಅವರು ಮಾತನಾಡಿಯುವಕರು ಸೇನೆ ಸೇರಿದೇಶ ಸೇವೆ ಮಾಡಲು ಮುಂದಾಗಬೇಕು. ಎಂದು ಆಶರ್ಿವಚನ ನೀಡಿದರು.ಯುವಕರಿಗೆ ಸೇನೆ ಸೇರಲು ತರಬೇತಿ ನೀಡುತ್ತಿರುವ ರಾಜ ಬೋರಾಡ ಅವರ ಡಾಲ್ಪೀನ್ ತರಬೇತಿ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.

ಸ್ಥಳಿಯ ವಿವೇಕಾನಂದ ಶಿಕ್ಷಣ ಸಂಸ್ಥೆ ಡಿ ಡಿ ಮೇಕನಮರಡಿ, ಡಾಲ್ಪೀನ್ ಸಂಸ್ಥೆಯ ಅಧ್ಯಕ್ಷ ಸಿದ್ದರಾಜ ಬೋರಾಡೆ, ಮಾತನಾಡುತ್ತಾನಾನು ಸೈನ್ಯದಲ್ಲಿ ಸೇವೆ ಸಲ್ಲಿಸಿದ ಬಳಿಕ ಜನೋಪಯೋಗಿ ಕಾರ್ಯ ಮಡಬೇಕೆಂದು ಪನತೊಟ್ಟಿದ್ದೆ ಅದರಂತೆ ಈ ಡಾಲ್ಪೀನ ಸಂಸ್ಥೆ ಪ್ರಾರಂಭಿಸಿ ಸೇವೆ ಸಲ್ಲಿಸುತ್ತಿರುವೇ ಇದರಿಂದ ಸಮಾಧಾನವಿದೆ. ಚಿಕ್ಕಟ್ಟಿ ಸಂಸ್ಥೆಯ ಸುರೇಶಚಿಕ್ಕಟ್ಟಿಯವರು ಮಾತನಾಡಿದರು. ಈ ವೇಳೆ ಅಬಾಸಾಹೇಬ ಪಾಟೀಲ, ಪ್ರಕಾಶಕದಮ, ರಾಮಕೃಷ್ಣಾಧರಿ ಗೌಡರ, ಎ ಆರ್ ಪಾಟೀಲ ಉಪಸ್ಥಿತರಿದ್ದರು ಇದೇ ವೇಳೆ ನೂತನವಾಗಿ ಸೇನೆಗೆ ಆಯ್ಕೆಯಾದ ಯುವಕರನ್ನು ಗೌರವಿಸಿ  ಸನ್ಮಾನಿಸಲಾಯಿತು.