ಬೆಳಗಾವಿ: ಸೈನಿಕರ ಬಗ್ಗೆ ಗೌರವಭಾವ ಅಗತ್ಯ: ರೋಹಿಣಿ

ಲೋಕದರ್ಶನ ವರದಿ

ಬೆಳಗಾವಿ 26: ನಗರದ ಜೆಜಿಐ ಸಂಸ್ಥೆಯ ಜೈನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇಂದು ದಿ.26ರಂದು  ಕಾಗರ್ಿಲ್ ವಿಜಯೋತ್ಸವದ ನಿಮಿತ್ಯ  ಕಾಗರ್ಿಲ್ ಯುದ್ದದ ಸಂದರ್ಭ ಹಾಗಹೂ ವಿಜಯೋತ್ಸವದ ಸನ್ನಿವೇಶವನ್ನು ವಿದ್ಯಾಥರ್ಿಗಳಿಗೆ ಪರಿಚಯಿಸಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ರೋಹಿಣಿ ಕೆ.ಬಿ. ಅವರು, ಕಾಗರ್ಿಲ್ ವಿಜಯೋತ್ಸವ ಭಾರತದ ಒಂದು ಐತಿಹಾಸಿಕ ಸಂದರ್ಭ. ದೇಶ ಸೇವೆಗೆ ಒಂದು ಮಾದರಿಯಾದ ಘಟನೆ. ದೇಶದ ರಕ್ಷಣೆಗೆ ತಮ್ಮ ಪ್ರಾಣ ಪಣಕ್ಕಿಟ್ಟು ಶ್ರಮಿಸುವ, ಹೋರಾಡುವ ಸೈನಿಕರ ಬಗ್ಗೆ ಯುವಕರಲ್ಲಿ ಗೌರವ ಭಾವ ಇರಬೇಕು.  ಆ ಮೂಲಕ ದೇಶಕ್ಕಾಗಿ ಶ್ರಮಿಸುವ, ಸೇವೆ ಸಲ್ಲಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು  ಎಂದು ಹೇಳಿದರು. 

1999ರಲ್ಲಿ ನಡೆದ ಕಾಗರ್ಿಲ್ ಯುದ್ಧದ ಸಂದರ್ಭವನ್ನು ವಿವರಿಸಿದ ಅಧ್ಯಾಪಕಿ ಮಧುರಾ ಪಾಟೀಲ ಅವರು, ಅಂದು ಈ ಯುದ್ಧದಲ್ಲಿ 7 ಲಕ್ಷ ಸೈನಿಕರು ನಿಯೋಜಿಸಲಾಗಿತ್ತು. 40ರಿಂದ 60 ದಿನಗಳ ವರೆಗೆ ನಡೆಸಿ, ಟೈಗರ್ ಪರ್ವತ ಹಾಗೂ ಟೊಲೋಲಿಂಗ್ ಪರ್ವತವನ್ನು ಆಕ್ರಮಿಸಿ ವಿಜಯ ಸಾಧಿಸಿದರು.  ಈ ಯುದ್ಧದಲ್ಲಿ 524ಜನ ಸೈನಿಕರು ಹುತಾತ್ಮರಾದರು. 13,363 ಜನ ಯೋಧರು ಯುದ್ಧದಲ್ಲಿ ಗಾಯಗೊಂಡಿದ್ದರು ಎಂದು ಮಾಹಿತಿ ನೀಡಿದರು. ಅಧ್ಯಾಪಕಿ ಜಯಶ್ರೀ ಕನಗುಟಕರ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಬಂಗ ವಂದಿಸಿದರು. ವಿದ್ಯಾಥರ್ಿಗಳು ಹಾಗೂ ಅಧ್ಯಾಪಕರು ಹಾಜರಿದ್ದರು.