ಲೋಕದರ್ಶನ ವರದಿ
ಶಿರಹಟ್ಟಿ 23: ನಮ್ಮ ಮನೆಯ ಮುಂದೆ ನಾವು ನಿತ್ಯವೂ ಹೇಗೆ ಸ್ವಚ್ಛತೆಯನ್ನು ಬಯಸುತ್ತೇವೆಯೋ ಹಾಗೆ ನಮ್ಮ ನಗರವನ್ನು ಕಸ ಮುಕ್ತವಾಗಿ ದಿನನಿತ್ಯ ಸುಂದರವಾಗಿ ಕಾಣವು ತಮ್ಮ ಆರೋಗ್ಯದ ಬಗ್ಗೆ ಲೆಕ್ಕಿಸದೇ ಸ್ವಚ್ಛತೆಯ ಬಗ್ಗೆ ಗಮನ ನೀಡಿ ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಪೌರಸೇವಾ ನೌಕರರ ಪಾತ್ರ ಮಹತ್ವದ್ದಾಗಿದ್ದು ಬರಿ ಇಂದಿನ ದಿನ ಮಾತ್ರವಲ್ಲ ಪ್ರತೀ ದಿನವೂ ಅವರನ್ನು ನಾವೆಲ್ಲರೂ ಗೌರವದಿಂದ ಕಾಣುವುದು ಮುಖ್ಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸಂದೀಪ ಕಪ್ಪತ್ತನವರ ಕರೆ ನೀಡಿದರು.
ಅವರು ಪಟ್ಟಣದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಪಟ್ಟಣ ಪಂಚಾಯಿತಿ ಶಿರಹಟ್ಟಿ ಮತ್ತು ಕನರ್ಾಟಕ ರಾಜ್ಯ ಪೌರ ಸೇವಾ ನೌಕರರ ಸಂಘ ಬೆಂಗಳೂರು ಶಾಖೆ ಶಿರಹಟ್ಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಪೌರ ಕಾಮರ್ಿಕರು ದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲ ಪೌರ ಕಾಮರ್ಿಕರಿಗೆ ಗುಲಾಬಿ ಹೂಗಳನ್ನು ನೀಡಿ ಗೌರವಿಸಿ ಮಾತನಾಡಿದರು.
ನಂತರ ಪಟ್ಟಣದ ಹಿರಿಯ ಶಿಕ್ಷಕರಾದ ಎಚ್ಎಂ ದೇವಗಿರಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಗೂಳಪ್ಪ ಕರಿಗಾರ, ಫಕ್ಕೀರೇಶ ರಟ್ಟೀಹಳ್ಳಿ ಹಾಗೂ ಪರಶುರಾಮ ಡೊಂಕಬಳ್ಳಿ ಇವರುಗಳು ಪೌರ ಕಾಮರ್ಿಕರ ದಿನನಿತ್ಯದ ಕಾರ್ಯಕ್ರಮಗಳು, ಸೇವಾ ಮನೋಭಾವನೆ ಮತ್ತು ನಗರದ ಸ್ವಚ್ಛತೆಯಲ್ಲಿ ಅವರ ಪಾತ್ರ ಮತ್ತು ಅವರ ಸೇವೆಗಾಗಿ ನಾವೆಲ್ಲರೂ ಅವರನ್ನು ಗೌರವದಿಂದ ಕಾಣವುದು ಅತೀ ಮುಖ್ಯವಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮವು ಮುಂಜಾನೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ನಂತರ ಬಸವೇಶ್ವರ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ, ಚಾಂದಸಾಬ ಮುಳಗುಂದ, ಶಿವಕುಮಾರ ಕಪ್ಪತ್ತನವರ, ಮುತ್ತು ಕಲಾವಂತ, ಲಕ್ಷ್ಮಣ ಬಾರಬಾರ, ಉಮೇಶ ಗಾಣಿಗೇರ, ಮಂಜುನಾಥ ಹರಿಜನ, ಮಾಳಪ್ಪ ಬಡ್ಡಪ್ಪನವರ, ಮಲಿಯಪ್ಪ ಕಂಟೆಮ್ಮನವರ, ಉಡಚಪ್ಪ ಇನ್ನೂ ಅನೇಕ ಪೌರ ನೌಕರರು ಉಪಸ್ಥಿತರಿದ್ದರು.